Ratna Shastra: ಈ ರತ್ನವನ್ನು ಧರಿಸಿದ್ರೆ ನಿಮ್ಮ ಅದೃಷ್ಟವೇ ಬದಲಾಗುತ್ತದೆ!

ರತ್ನ ಧರಿಸುವುದರಿಂದ ಜನರ ಜೀವನದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ರತ್ನವನ್ನು ಧರಿಸುವುದರಿಂದ ಜನರ ಅದೃಷ್ಟವನ್ನು ಬದಲಾಯಿಸಬಹುದು. ನಿಮ್ಮ ಆರ್ಥಿಕ ಸ್ಥಿತಿ ಸರಿಯಿಲ್ಲದಿದ್ದರೆ ಮತ್ತು ನಿಮ್ಮ ಕೆಲಸದಲ್ಲಿ ಯಶಸ್ಸು ಸಿಗದಿದ್ದರೆ ನೀವು ಈ ರತ್ನವನ್ನು ಧರಿಸಬೇಕು.

Written by - Puttaraj K Alur | Last Updated : Oct 9, 2022, 06:39 AM IST
  • ಬುಧವು ದುರ್ಬಲವಾಗಿರುವ ಜನರು ಪಚ್ಚೆಯನ್ನು ಧರಿಸಬೇಕು
  • ಯಾವುದೇ ರತ್ನವನ್ನು ಧರಿಸುವ ಮೊದಲು ಜ್ಯೋತಿಷಿಗಳ ಸಲಹೆ ತೆಗೆದುಕೊಳ್ಳಬೇಕು
  • ಪಚ್ಚೆ ರತ್ನ ಧರಿಸುವುದರಿಂದ ವ್ಯಕ್ತಿಯಲ್ಲಿ ಆತ್ಮವಿಶ್ವಾಸ ಮತ್ತು ಬುದ್ಧಿವಂತಿಕೆ ಹೆಚ್ಚಾಗುತ್ತದೆ
Ratna Shastra: ಈ ರತ್ನವನ್ನು ಧರಿಸಿದ್ರೆ ನಿಮ್ಮ ಅದೃಷ್ಟವೇ ಬದಲಾಗುತ್ತದೆ! title=
ಪಚ್ಚೆ ರತ್ನ ಧರಿಸುವುದರ ಪ್ರಯೋಜನಗಳು

ನವದೆಹಲಿ: ಅನೇಕ ಜನರು ವಿವಿಧ ರೀತಿಯ ರತ್ನಗಳನ್ನು ಧರಿಸುವುದನ್ನು ನೀವು ನೋಡಿರಬಹುದು. ಜ್ಯೋತಿಷ್ಯದ ಪ್ರಕಾರ ಈ ರತ್ನಗಳು ನಮ್ಮ ಜೀವನದ ಮೇಲೆ ಬಹಳ ದೊಡ್ಡ ಪರಿಣಾಮವನ್ನು ಬೀರುತ್ತವೆ. ಅದೃಷ್ಟವನ್ನು ಬದಲಾಯಿಸುವ ಕೆಲವು ರತ್ನಗಳಿವೆ ಎಂದು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ. ಕೆಲವು ಜನರು ಕೆಲಸದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯವಾಗುವುದಿಲ್ಲ, ಇದರಿಂದಾಗಿ ಅವರ ಆರ್ಥಿಕ ಸ್ಥಿತಿಯು ಯಾವಾಗಲೂ ದುರ್ಬಲವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಇಂದು ನಾವು ನಿಮಗೆ ಅಂತಹ ರತ್ನದ ಬಗ್ಗೆ ಹೇಳಲಿದ್ದೇವೆ. ಇದನ್ನು ಧರಿಸುವುದರಿಂದ ನೀವು ಎಲ್ಲಾ ರೀತಿಯ ಆರ್ಥಿಕ ಬಿಕ್ಕಟ್ಟುಗಳನ್ನು ಮುಕ್ತಿ ಪಡೆಯುತ್ತೀರಿ. ಇದರ ಜೊತೆಗೆ ನೀವು ಉದ್ಯೋಗದಲ್ಲಿ ಯಶಸ್ಸನ್ನು ಸಹ ಪಡೆಯುತ್ತೀರಿ.

ಪಚ್ಚೆ ರತ್ನವನ್ನು ಧರಿಸಿ

ಬುಧ ದುರ್ಬಲನಾಗಿದ್ದರೆ ಯಾವುದೇ ವ್ಯಕ್ತಿ ತಮ್ಮ ಕೆಲಸದಲ್ಲಿ ಯಶಸ್ಸನ್ನು ಪಡೆಯುವುದಿಲ್ಲ. ಬುಧನನ್ನು ಬುದ್ಧಿವಂತಿಕೆಯ ಗ್ರಹವೆಂದು ಪರಿಗಣಿಸಲಾಗಿದೆ. ಬುಧವು ದುರ್ಬಲವಾಗಿರುವ ಜನರು ಪಚ್ಚೆಯನ್ನು ಧರಿಸಬೇಕು. ಏಕೆಂದರೆ ಈ ರತ್ನವನ್ನು ಬುಧ ಗ್ರಹದ ರತ್ನವೆಂದು ಪರಿಗಣಿಸಲಾಗಿದೆ. ಯಾವುದೇ ರತ್ನವನ್ನು ಧರಿಸುವ ಮೊದಲು ನೀವು ಜ್ಯೋತಿಷಿಗಳ ಸಲಹೆ ತೆಗೆದುಕೊಳ್ಳಬೇಕು. ಏಕೆಂದರೆ ಗ್ರಹಗಳ ಸರಿಯಾದ ಸ್ಥಾನವನ್ನು ನೋಡಿ, ಅವರು ಸರಿಯಾದ ರತ್ನವನ್ನು ಧರಿಸಲು ನಿಮಗೆ ಸಲಹೆ ನೀಡುತ್ತಾರೆ.

ಇದನ್ನೂ ಓದಿ: Dhanteras 2022: ಧನತ್ರಯೋದಶಿಯ ದಿನ ಈ ಚಿಕ್ಕ ಕೆಲಸ ಮಾಡಿ, ಜೀವನದಲ್ಲಿ ಹಣಕಾಸಿನ ಮುಗ್ಗಟ್ಟು ಎದುರಾಗುವುದಿಲ್ಲ

ಪಚ್ಚೆ ರತ್ನ ಧರಿಸುವುದರ ಪ್ರಯೋಜನಗಳು

ಪಚ್ಚೆ ರತ್ನವನ್ನು ಧರಿಸುವುದರಿಂದ ವ್ಯಕ್ತಿಯಲ್ಲಿ ಆತ್ಮವಿಶ್ವಾಸ ಮತ್ತು ಬುದ್ಧಿವಂತಿಕೆ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಇದಲ್ಲದೆ ಯಾವುದೇ ಒಬ್ಬ ವ್ಯಕ್ತಿ ಯಶಸ್ಸನ್ನು ಪಡೆಯಲು ಸಾಧ್ಯವಾಗದಿದ್ದರೆ, ಆತ ನಷ್ಟ ಅನುಭವಿಸುತ್ತಿದ್ದರೆ ಈ ರತ್ನವನ್ನು ಧರಿಸುವುದು ಲಾಭ ನೀಡುತ್ತದೆ. ಇಂತಹ ವ್ಯಕ್ತಿಗಳು ಆರೋಗ್ಯದ ಜೊತೆಗೆ ಸಂತೋಷವನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ.

ಪಚ್ಚೆ ರತ್ನವನ್ನು ಧರಿಸುವ ಮೊದಲು ಅದನ್ನು ಧರಿಸುವ ಸರಿಯಾದ ವಿಧಾನವನ್ನು ತಿಳಿದುಕೊಳ್ಳಬೇಕು. ಪಚ್ಚೆಯನ್ನು ಯಾವಾಗಲೂ ಕಿರುಬೆರಳಿನಲ್ಲಿ ಧರಿಸಲಾಗುತ್ತದೆ. ಇದಲ್ಲದೆ ಇದನ್ನು ಬೆಳ್ಳಿ ಸರಪಳಿಯಲ್ಲಿ ಲಾಕೆಟ್ ಆಗಿಯೂ ಧರಿಸಬಹುದು. ಪಚ್ಚೆಯನ್ನು ಧರಿಸಲು ಮಂಗಳಕರ ದಿನ ಬುಧವಾರ. ಈ ದಿನ ರತ್ನವನ್ನು ಧರಿಸುವ ಮೊದಲು ಪಚ್ಚೆಗೆ ಗಂಗಾಜಲ ಮತ್ತು ಹಸಿ ಹಾಲಿನಿಂದ ಅಭಿಷೇಕ ಮಾಡಿ, ನಂತರ ಬುಧ ಮಂತ್ರವನ್ನು 3 ಸುತ್ತುಗಳವರೆಗೆ ಪಠಿಸಿ. ಇದರ ನಂತರ ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ಪಚ್ಚೆ ರತ್ನವನ್ನು ಧರಿಸಬೇಕು.

ಇದನ್ನೂ ಓದಿ: Hindu God and Tree: ಈ ಅಪರೂಪದ ಮರಗಳಲ್ಲಿದೆ ದೇವರ ವಾಸ: ಪೂಜೆ ಮಾಡಿದರೆ ಊಹಿಸದಷ್ಟು ಲಾಭ ಗ್ಯಾರಂಟಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News