ಈ ರಾಶಿಗಳಲ್ಲಿ ನಿರ್ಮಾಣವಾಗುತ್ತಿದೆ ರಾಜಯೋಗ! 3 ರಾಶಿಯವರು ಹೋದಲೆಲ್ಲಾ ಯಶಸ್ಸು

ಒಂದೇ ರಾಶಿಯಲ್ಲಿ ಗುರು ಮತ್ತು ಶುಕ್ರರ ಈ ಸಂಯೋಗದಿಂದಾಗಿ ರಾಜಯೋಗವು ಸೃಷ್ಟಿಯಾಗುತ್ತಿದೆ. ಇದು ಮೂರು ರಾಶಿಯವರ ಜೀವನವನ್ನು ಬೆಳಗಲಿದೆ. 

Written by - Ranjitha R K | Last Updated : Jan 24, 2023, 04:05 PM IST
  • ಗ್ರಹಗಳು ತಮ್ಮ ನಿಗದಿತ ಸಮಯದಲ್ಲಿ ಸ್ಥಳಗಳನ್ನು ಬದಲಾಯಿಸುತ್ತವೆ.
  • ಈ ಸಮಯದಲ್ಲಿ ಅನೇಕ ಶುಭ ಮತ್ತು ಅಶುಭ ಯೋಗಗಳು ಸೃಷ್ಟಿ
  • ಗುರು ಶುಕ್ರರ ಸಂಯೋಗದಿಂದಾಗಿ ರಾಜಯೋಗ ನಿರ್ಮಾಣ
ಈ ರಾಶಿಗಳಲ್ಲಿ ನಿರ್ಮಾಣವಾಗುತ್ತಿದೆ ರಾಜಯೋಗ! 3 ರಾಶಿಯವರು ಹೋದಲೆಲ್ಲಾ ಯಶಸ್ಸು  title=

ಬೆಂಗಳೂರು : ವೈದಿಕ ಜ್ಯೋತಿಷ್ಯದ ಪ್ರಕಾರ, ಎಲ್ಲಾ ಗ್ರಹಗಳು ತಮ್ಮ ನಿಗದಿತ ಸಮಯದಲ್ಲಿ ಸ್ಥಳಗಳನ್ನು ಬದಲಾಯಿಸುತ್ತವೆ. ಈ ಸಮಯದಲ್ಲಿ ಅನೇಕ ಶುಭ ಮತ್ತು ಅಶುಭ ಯೋಗಗಳು ಸೃಷ್ಟಿಯಾಗುತ್ತವೆ. ಫೆಬ್ರವರಿಯಲ್ಲಿಯೂ ಗ್ರಹಗಳ ಚಲನೆಯ ಪರಿಣಾಮ ರಾಜಯೋಗ ಸೃಷ್ಟಿಯಾಗುತ್ತಿದೆ. ಗುರುವು ತನ್ನ ರಾಶಿಯಾದ ಮೀನ ರಾಶಿಯಲ್ಲಿದೆ. ಫೆಬ್ರವರಿಯ ಆರಂಭದಲ್ಲಿಯೇ ಶುಕ್ರ ಕೂಡಾ ಮೀನ ರಾಶಿಯನ್ನು ಪ್ರವೇಶಿಸುತ್ತದೆ. ಒಂದೇ ರಾಶಿಯಲ್ಲಿ ಗುರು ಮತ್ತು ಶುಕ್ರರ ಈ ಸಂಯೋಗದಿಂದಾಗಿ ರಾಜಯೋಗವು ಸೃಷ್ಟಿಯಾಗುತ್ತಿದೆ. 

ಮಿಥುನ ರಾಶಿ :
 ಗುರು ಮತ್ತು ಶುಕ್ರ ಒಂದೇ ರಾಶಿಗೆ ಬಂದು ನಿರ್ಮಾಣವಾಗುತ್ತಿರುವ   ರಾಜಯೋಗ  ಮಿಥುನ ರಾಶಿಯವರಿಗೆ ಪ್ರಯೋಜನಕಾರಿಯಾಗಿ ಸಾಬೀತಗಾಲಿದೆ. ಮಿಥುನ ರಾಶಿಯವರ ಜಾತಕದ ಹತ್ತನೇ ಮನೆಯಲ್ಲಿ ಹಂಸ ಮತ್ತು ಮಾಳವ್ಯ ರಾಜಯೋಗ ನಿರ್ಮಾಣವಾಗುತ್ತಿದೆ. ಈ ರಾಶಿಯವರ ಜಾತಕದಲ್ಲಿ ಶನಿಯು ಅದೃಷ್ಟ ಸ್ಥಾನದಲ್ಲಿದ್ದು, ಇವರು ಮಾಡುವ ಕೆಲಸದಲ್ಲಿ ಅದೃಷ್ಟ ಸಂಪೂರ್ಣ ಕೈ ಹಿಡಿಯಲಿದೆ. ಈ ಸಮಯದಲ್ಲಿ ಗುರು ಮತ್ತು ಶುಕ್ರನ ಪ್ರಭಾವದಿಂದ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ದೊರೆಯಬಹುದು. ಉದ್ಯೋಗ ವೃತ್ತಿಯಲ್ಲಿರುವವರಿಗೆ ಬಡ್ತಿಯಾಗಿ ವೇತನ ಹೆಚ್ಚಾಗುವುದು. ಆಕಸ್ಮಿಕ ಧನ ಲಾಭ ಪಡೆಯಬಹುದು.

ಇದನ್ನೂ ಓದಿ : 20 ವರ್ಷಗಳ ನಂತರ ರೂಪುಗೊಳ್ಳುತ್ತಿರುವ 4 ‘ರಾಜಯೋಗ’: ಈ ರಾಶಿಗಳ ಜನರಿಗೆ ಬಂಪರ್ ಹಣ ಪಡೆಯುತ್ತಾರೆ!

ಕರ್ಕಾಟಕ ರಾಶಿ :
ಗುರು ಮತ್ತು ಶುಕ್ರನ ಈ ಸಂಯೋಗವು ನಿಮ್ಮ ಜಾತಕದ ತ್ರಿಕೋನ ಮನೆಯಲ್ಲಿ ಸಂಭವಿಸಲಿದೆ. ಶುಕ್ರನು ಉತ್ಕೃಷ್ಟನಾಗಿರುವುದರಿಂದ ಮತ್ತು ಗುರು ತನ್ನದೇ ಆದ ರಾಶಿಯಲ್ಲಿರುವುದರಿಂದ, ಈ ಅವಧಿಯಲ್ಲಿ ಆಸ್ತಿ ಮತ್ತು ವಾಹನಗಳನ್ನು ಖರೀದಿಸಬಹುದು. ಗುರುಗ್ರಹದ ಪ್ರಭಾವದಿಂದ ಷೇರು,  ಮತ್ತು ಲಾಟರಿ ಇತ್ಯಾದಿಗಳಲ್ಲಿ ಹಣ ಒಲಿದು ಬರುವ ಎಲ್ಲಾ ಸಾಧ್ಯತೆಗಳಿವೆ. 

ಕನ್ಯಾರಾಶಿ :
ಈ ರಾಜಯೋಗವು ಕನ್ಯಾ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ. ಕನ್ಯಾ ರಾಶಿಯ ಸಂಕ್ರಮಣ ಜಾತಕದಲ್ಲಿ ಗುರು ಮತ್ತು ಶುಕ್ರರ ಸಂಯೋಗವು ಏಳನೇ ಮನೆಯಲ್ಲಿ ನಡೆಯುತ್ತಿದೆ. ಹೀಗಾಗಿ ದೈನಂದಿನ ಆದಾಯದಲ್ಲಿ ಹೆಚ್ಚಳವಾಗಬಹುದು. ನ್ಯಾಯಾಲಯದ ವಿಷಯಗಳಲ್ಲಿ ಯಶಸ್ಸು ನಿರೀಕ್ಷಿಸಬಹುದು. ದಾಂಪತ್ಯ ಜೀವನದಲ್ಲಿ ಮಧುರತೆ ಇರುತ್ತದೆ. ಹಣದ  ಹರಿವು ಚೆನ್ನಾಗಿರುತ್ತದೆ. ಏನೇ ಕೆಲಸ ಮಾಡಿದರೂ ಅದೃಷ್ಟ ಜೊತೆಗಿರುತ್ತದೆ. 

ಇದನ್ನೂ ಓದಿ :  Basant Panchami 2023: ವಸಂತ ಪಂಚಮಿ ಯಾವ ದಿನ? ಇದರ ಮಹತ್ವ ತಿಳಿಯಿರಿ

 

( ಸೂಚನೆ :ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News