Rahu Ketu Transit 2023: ಹತ್ತು ದಿನಗಳಲ್ಲಿ ರಾಹು-ಕೇತು ಸಂಕ್ರಮಣ, ಈ ರಾಶಿಯವರಿಗೆ ಅಪಾರ ಸಂಪತ್ತು

Rahu Ketu Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ, ಕ್ರೂರ, ಪಾಪ ಗ್ರಹಗಳು ಎಂತಲೇ ಕರೆಯಲ್ಪಡುವ ರಾಹು-ಕೇತು ಗ್ರಹಗಳು ಪ್ರತಿ ಒಂದೂವರೆ ವರ್ಷಗಳಿಗೆ ಒಮ್ಮೆ ತಮ್ಮ ರಾಶಿಚಕ್ರವನ್ನು ಬದಲಾಯಿಸುತ್ತವೆ. 

Written by - Yashaswini V | Last Updated : Oct 20, 2023, 10:01 AM IST
  • ಪ್ರತಿ ಒಂದೂವರೆ ವರ್ಷಗಳಿಗೊಮ್ಮೆ ತಮ್ಮ ರಾಶಿಚಕ್ರವನ್ನು ಬದಲಾಯಿಸುವ ರಾಹು-ಕೇತು ಗ್ರಹಗಳು 30 ಅಕ್ಟೋಬರ್ 2023 ರಂದು ತಮ್ಮ ರಾಶಿಯನ್ನು ಬದಲಾಯಿಸಲಿವೆ.
  • 18 ಮೇ 2025ರವರೆಗೂ ಇದೇ ಸ್ಥಿತಿಯಲ್ಲಿರುವ ರಾಹು-ಕೇತು ಈ ಸಮಯದಲ್ಲಿ ಕೆಲವು ರಾಶಿಯವರ ಮೇಲೆ ದಯೆ ತೋರಲಿದ್ದಾರೆ
  • ಆ ಅದೃಷ್ಟದ ರಾಶಿ ಚಕ್ರಗಳು ಯಾವುವು ಎಂದು ತಿಳಿಯೋಣ
Rahu Ketu Transit 2023: ಹತ್ತು ದಿನಗಳಲ್ಲಿ ರಾಹು-ಕೇತು ಸಂಕ್ರಮಣ, ಈ ರಾಶಿಯವರಿಗೆ ಅಪಾರ ಸಂಪತ್ತು  title=

Rahu Ketu Rashi Parivartane: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವ ಗ್ರಹಗಳಲ್ಲಿ ಯಾವುದೇ ಒಂದು ಗ್ರಹಣದ ಸಂಚಾರದಲ್ಲಿನ ಸಣ್ಣ ಬದಲಾವಣೆಯೂ ಸಹ ಎಲ್ಲಾ ಜೀವ ರಾಶಿಗಳ ಮೇಲೂ ಮಹತ್ವದ ಶುಭ-ಅಶುಭ ಪರಿಣಾಮಗಳನ್ನು ಬೀರುತ್ತದೆ. ಅಂತೆಯೇ, ಜ್ಯೋಯಿತಿಷ್ಯ ಶಾಸ್ತ್ರದಲ್ಲಿ, ರಾಹು-ಕೇತು ಗ್ರಹಗಳನ್ನು ನೆರಳು ಗ್ರಹಗಳು, ಕ್ರೂರ-ಪಾಪ ಗ್ರಹಗಳು ಎಂದು ಕೆರೆಯಲಾಗುತ್ತದೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ ಈ ಗ್ರಹಗಳು ಅಶುಭ ಸ್ಥಾನದಲ್ಲಿದ್ದರೆ ಅವರ ಜೀವನವೂ ಕಷ್ಟ ಕಾರ್ಪಣ್ಯಗಳಿಂದ ಕೂಡಿರುತ್ತದೆ. ಅಂತೆಯೇ ಯಾವುದೇ ವ್ಯಕ್ತಿಯ ಜಾತಕದಲ್ಲಿ ರಾಹು-ಕೇತು ಗ್ರಹಗಳು ಶುಭ ಸ್ಥಾನದಲ್ಲಿದ್ದರೆ ಅವರ ಜೀವನದಲ್ಲಿ ಸುಖ-ಸಂತೋಷಕ್ಕೆ, ಹಣಕ್ಕೆ ಕೊರತೆಯೇ ಇರುವುದಿಲ್ಲ ಎಂದು ನಂಬಲಾಗಿದೆ. 

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ಒಂದೂವರೆ ವರ್ಷಗಳಿಗೊಮ್ಮೆ ತಮ್ಮ ರಾಶಿಚಕ್ರವನ್ನು ಬದಲಾಯಿಸುವ ರಾಹು-ಕೇತು ಗ್ರಹಗಳು ಇನ್ನೂ ಹತ್ತು ದಿನಗಳಲ್ಲಿ ಎಂದರೆ 30 ಅಕ್ಟೋಬರ್ 2023 ರಂದು ತಮ್ಮ ರಾಶಿಯನ್ನು ಬದಲಾಯಿಸಲಿವೆ. 18 ಮೇ 2025ರವರೆಗೂ ಇದೇ ಸ್ಥಿತಿಯಲ್ಲಿರುವ ರಾಹು-ಕೇತು ಈ ಸಮಯದಲ್ಲಿ ಕೆಲವು ರಾಶಿಯವರ ಮೇಲೆ ದಯೆ ತೋರಲಿದ್ದಾರೆ ಎಂದು ಹೇಳಲಾಗುತ್ತದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 

ಅಕ್ಟೋಬರ್ 30ರ ಬಳಿಕ ಮುಂದಿನ ಒಂದೂವರೆ ವರ್ಷ ಈ ರಾಶಿಯವರಿಗೆ ಅಪಾರ ಧನ-ಸಂಪತ್ತು: 
ಮೇಷ ರಾಶಿ: 

ರಾಹು-ಕೇತು ರಾಶಿ ಪರಿವರ್ತನೆಯು ಮೇಷ ರಾಶಿಯವರ ಜೀವನದಲ್ಲಿ ಮಂಗಳಕರ ಫಲಗಳನ್ನು ತರಲಿವೆ. ಮುಂದಿನ ಒಂದೂವರೆ ವರ್ಷಗಳ ಕಾಲ ನಿಮಗೆ ಉದ್ಯೋಗದಲ್ಲಿ ಹೊಸ ಹೊಸ ಅವಕಾಶಗಳು ಲಭ್ಯವಾಗಳಿವೆ. ಮಾತ್ರವಲ್ಲ, ಇದನ್ನು ಸದುಪಯೋಗ ಪಡಿಸಿಕೊಂಡರೆ ನೀವು ಯಶಸ್ಸಿನ ಹೊಸ ಉತ್ತುಂಗವನ್ನು ಏರುವಿರಿ. ವ್ಯಾಪಾರ-ವ್ಯವಹಾರಕ್ಕೆ ಸಂಬಂಧಿಸಿದ ದೂರ ಪ್ರಯಾಣಗಳು ಲಾಭದಾಯಕವಾಗಿರಲಿವೆ. 

ಇದನ್ನೂ ಓದಿ- ಮನೆಯಲ್ಲಿ ಸುಖ-ಶಾಂತಿ-ಸಮೃದ್ಧಿಗಾಗಿ ಶುಕ್ರವಾರದ ವಿಶೇಷ ಪರಿಹಾರಗಳಿವು

ಕರ್ಕಾಟಕ ರಾಶಿ: 
ರಾಹು-ಕೇತು ಸಂಚಾರವು ಕರ್ಕಾಟಕ ರಾಶಿಯವರಿಗೆ ಆನಂದದ ದಿನಗಳನ್ನು ತರಲಿವೆ. ಈ ಸಂದರ್ಭದಲ್ಲಿ ನಿಮ್ಮ ದೀರ್ಘಕಾಲದ ಸಮಸ್ಯೆಗಳಿಂದ ಪರಿಹಾರ ದೊರೆತು ಕೌಟುಂಬಿಕ ಬದುಕಿನಲ್ಲಿ ನೆಮ್ಮದಿಯನ್ನು ಕಾಣಬಹುದು. ವೃತ್ತಿ ಬದುಕಿನಲ್ಲೂ ಒಳ್ಳೆಯ ಅವಕಾಶಗಳು ಕಂಡು ಬರಲಿದ್ದು ಅದೃಷ್ಟದ ಸಂಪೂರ್ಣ ಬೆಂಬಲದೊಂದಿಗೆ ಅಂದುಕೊಂಡದ್ದನ್ನು ಸಾಧಿಸುವಿರಿ. 

ಸಿಂಹ ರಾಶಿ: 
ರಾಹು-ಕೇತು ಸಂಚಾರದಲ್ಲಿನ ಬದಲಾವಣೆಯು ಸಿಂಹ ರಾಶಿಯವರಿಗೆ ಮದುವೆ ಸಂಬಂಧಿತ ಕಾರ್ಯಗಳಲ್ಲಿ ಎದುರಾಗಿದ್ದ ತೊಡಕುಗಳಿಂದ ಮುಕ್ತಿಯನ್ನು ನೀಡಲಿದೆ. ಈ ಸಂದರ್ಭದಲ್ಲಿ ಸಂಗಾತಿಯೊಂದಿಗಿನ ನಿಮ್ಮ ಭಿನ್ನಾಭಿಪ್ರಾಯವು ದೂರವಾಗಲಿದ್ದು, ಸುಖ ಸಾಂಸಾರಿಕ ಜೀವನವನ್ನು ಅನುಭವಿಸುವಿರಿ. ಉದ್ಯೋಗ ಕ್ಷೇತ್ರದಲ್ಲಿಯೂ ಪ್ರಗತಿಯನ್ನು ಕಾಣುವಿರಿ. 

ತುಲಾ ರಾಶಿ: 
ರಾಹು-ಕೇತು ರಾಶಿ ಪರಿವರ್ತನೆಯು ತುಲಾ ರಾಶಿಯವರ ಬದುಕಿನಲ್ಲಿ ದೀರ್ಘಕಾಲದ ಸಮಸ್ಯೆಗಳನ್ನು ಬಗೆಹರಿಸಲಿದೆ. ಹಣಕಾಸಿನ ಹರಿವು ಹೆಚ್ಚಾಗಲಿದ್ದು ಭವಿಷ್ಯಕ್ಕಾಗಿ ಒಂದಿಷ್ಟು ಹಣವನ್ನು ಉಳಿತಾಯ ಮಾಡಲು ಯೋಚಿಸಿದರೆ ಉತ್ತಮ. ಆರೋಗ್ಯವೂ ಉತ್ತಮವಾಗಿರಲಿದೆ. 

ಇದನ್ನೂ ಓದಿ- 2025 ರವರೆಗೆ ಈ ರಾಶಿಗಳ ಮೇಲೆ ಶನಿಯ ಕೃಪೆ.. ಝಣಝಣಿಸಲಿದೆ ಕಾಂಚಾಣ, ಕೀರ್ತಿ-ಸಂಪತ್ತು ಪ್ರಾಪ್ತಿ!

ಮೀನ ರಾಶಿ: 
ಅಕ್ಟೋಬರ್ 30ರ ಬಳಿಕ ರಾಹು-ಕೇತು ಮೀನ ರಾಶಿಯವರ ಜೀವನದಲ್ಲಿ ಶುಭ ಫಲಗಳನ್ನು ನೀಡಲಿದ್ದಾರೆ. ಹೊಸ ಕೆಲಸಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ನಿಮ್ಮ ಇಷ್ಟದ ಸ್ಥಳದಿಂದ ಜಾಬ್ ಆಫರ್ ಬರಬಹುದು. ಅಷ್ಟೇ ಅಲ್ಲದೆ, ಉದಯೋನ್ಮುಖ ಉದ್ಯಮಿಗಳಿಗೆ ಭರ್ಜರಿ ಲಾಭವಾಗಲಿದೆ.

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News