ಇನ್ನೊಂದೇ ದಿನದಲ್ಲಿ ಐದು ರಾಜಯೋಗ ! ಈ ರಾಶಿಯವರ ಮೇಲಾಗುವುದು ಧನವೃಷ್ಟಿ ! ಇನ್ನಿರುವುದಿಲ್ಲ ಸಂಪತ್ತಿನ ಕೊರತೆ

 ನವೆಂಬರ್ ಒಂದರಂದು ಶಶಿರಾಜಯೋಗ ನಿರ್ಮಾಣವಾಗುತ್ತಿದೆ. ಇದನ್ನು ಅತ್ಯಂತ ಮಂಗಳಕರ ಯೋಗವೆಂದು  ಕರೆಯಲಾಗುತ್ತದೆ. 

Written by - Ranjitha R K | Last Updated : Oct 30, 2023, 02:39 PM IST
  • ನವೆಂಬರ್ ಒಂದರಂದು ಶಶಿರಾಜಯೋಗ ನಿರ್ಮಾಣ
  • ಇದನ್ನು ಅತ್ಯಂತ ಮಂಗಳಕರ ಯೋಗವೆಂದು ಕರೆಯಲಾಗುತ್ತದೆ.
  • ಯಾರ ಅದೃಷ್ಟ ಬೆಳೆಗಲಿದೆ ಈ ಶುಭ ಯೋಗಗಳು
ಇನ್ನೊಂದೇ ದಿನದಲ್ಲಿ ಐದು ರಾಜಯೋಗ ! ಈ ರಾಶಿಯವರ ಮೇಲಾಗುವುದು ಧನವೃಷ್ಟಿ ! ಇನ್ನಿರುವುದಿಲ್ಲ ಸಂಪತ್ತಿನ ಕೊರತೆ  title=

ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನವೆಂಬರ್ ಒಂದರಂದು ಶಶಿರಾಜಯೋಗ ನಿರ್ಮಾಣವಾಗುತ್ತಿದೆ. ಇದನ್ನು ಅತ್ಯಂತ ಮಂಗಳಕರ ಯೋಗವೆಂದು ಕರೆಯಲಾಗುತ್ತದೆ. ಈ ಯೋಗವು ಅತ್ಯಂತ ಅಪರೂಪದ ಗ್ರಹಗಳ ಸಂಯೋಜನೆಯೊಂದಿಗೆ ರೂಪುಗೊಳ್ಳಲಿದೆ. ಈ ಬಾರಿ ಚಂದ್ರನು ತನ್ನ ಉಚ್ಛ ರಾಶಿಯಾದ ವೃಷಭ ರಾಶಿಯಲ್ಲಿದ್ದು ಶಶಿ ರಾಜಯೋಗವನ್ನು ರೂಪಿಸುತ್ತಾನೆ. ಇನ್ನು ತುಲಾ ರಾಶಿಯಲ್ಲಿ ಮಂಗಳ, ಬುಧ ಮತ್ತು ಸೂರ್ಯ ಇರುತ್ತಾರೆ. ಸೂರ್ಯ ಮತ್ತು ಬುಧರು ಬುಧಾದಿತ್ಯ ಯೋಗವನ್ನು ರೂಪಿಸುತ್ತಿದ್ದರೆ, ಮಂಗಳ ಮತ್ತು ಸೂರ್ಯನು ಸೇರಿ ಮಂಗಳಾದಿತ್ಯ ಯೋಗವನ್ನು ರೂಪಿಸುತ್ತಿದ್ದಾರೆ. ಈ ಬಾರಿ ಶಿವಯೋಗ, ಸರ್ವಾರ್ಥ ಸಿದ್ಧಿ ಯೋಗಗಳು ಕೂಡಾ ರೂಪುಗೊಳ್ಳುತ್ತಿದೆ. 

ಯಾರ ಅದೃಷ್ಟ ಬೆಳೆಗಲಿದೆ ಈ ಶುಭ ಯೋಗಗಳು : 
ಮೇಷ ರಾಶಿ : 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೇಷ ರಾಶಿಯವರಿಗ ಈ ಯೋಗಗಳು ಬಹಳ ಶುಭಾವಾಗಿದೆ. ಈ ರಾಶಿಯವರ ಸಂಬಂಧದಲ್ಲಿನ ಪ್ರೀತಿ ಹೆಚ್ಚುತ್ತವೆ. ಆರ್ಥಿಕ ಲಾಭದ ಸಾಧ್ಯತೆಗಳು ಸಹ ಗೋಚರಿಸುತ್ತವೆ. ಗ್ರಹಗಳ ಶುಭ ಸಂಯೋಜನೆಯು ಮೇಷ ರಾಶಿಯ ಜನರ ಆರ್ಥಿಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಬಹಳ ದಿನಗಳಿಂದ ಬಾಕಿ ಉಳಿದಿದ್ದ ಕೆಲಸಗಳು ಈ ಅವಧಿಯಲ್ಲಿ ಪೂರ್ಣಗೊಳ್ಳಬಹುದು. ಉದ್ಯಮಿಗಳಿಗೂ ಲಾಭವಾಗಲಿದೆ.  ಸಂಪತ್ತು ವೃದ್ಧಿಯಾಗಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. 

ಇದನ್ನೂ ಓದಿ : ನವೆಂಬರ್ ನಿಂದ ಈ ರಾಶಿಯವರ ಬಂಗಾರದ ಬದುಕು ಶುರು ! ಸದಾ ಬೆನ್ನಿಗಿರುವುದು ಅದೃಷ್ಟ ! ಪ್ರತಿ ಹೆಜ್ಜೆಗೂ ವಿಜಯಮಾಲೆಯೇ !

ವೃಷಭ ರಾಶಿ : 
ನವೆಂಬರ್ 1, 2023 ರಂದು ರೂಪುಗೊಳ್ಳುವ ಶಶಿ ರಾಜ ಯೋಗದಿಂದ ವೃಷಭ ರಾಶಿಯವರ ವೈವಾಹಿಕ ಜೀವನದಲ್ಲಿ ಸಂತೋಷ ಹೆಚ್ಚುತ್ತದೆ. ಸಂಗಾತಿಯೊಂದಿಗಿನ ಸಂಬಂಧವು ಗಟ್ಟಿಯಾಗುತ್ತದೆ. ಲಕ್ಷ್ಮೀ ದೇವಿಯ ಅನುಗ್ರಹದಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ನಿಮ್ಮ ಸಂಗಾತಿಯ ಸಹಾಯದಿಂದ ಯಾವುದೇ ಕೆಲಸವನ್ನು ಮಾಡಿದರೂ ಅದರಲ್ಲಿ ಯಶಸ್ಸು ಕಾಣುವಿರಿ. ಸಾಲ ನೀಡಿದ ಹಣ ಈ ಸಮಯದಲ್ಲಿ ಕೈ ಸೇರುವುದು. ವೃತ್ತಿಜೀವನದಲ್ಲಿ ಹೊಸ ಮತ್ತು ಮಂಗಳಕರ ಅವಕಾಶಗಳು ಸಿಗುತ್ತವೆ. 

ಕಟಕ ರಾಶಿ : 
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಚಂದ್ರನು ಕರ್ಕ ರಾಶಿಯ ಅಧಿಪತಿ. ಶಶಿ ರಾಜಯೋಗದಿಂದ ಕಟಕ ರಾಶಿಯವರು ಪ್ರಯೋಜನ ಪಡೆಯಲಿದ್ದಾರೆ. ಈ ಸಮಯದಲ್ಲಿ, ಈ ರಾಶಿಯವರ ಪ್ರೀತಿಯ ಸಂಬಂಧಗಳಲ್ಲಿ ಮಾಧುರ್ಯ ಇರುತ್ತದೆ. ಸಂಗಾತಿಯೊಂದಿಗೆ ಸಾಮರಸ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹೊಸ ಕೆಲಸವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ, ಈ ಸಮಯವು ಸೂಕ್ತವಾಗಿರಲಿದೆ. ಗ್ರಹಗಳ ಶುಭ ಪ್ರಭಾವದಿಂದಾಗಿ ನಿಮ್ಮ ಸಂಗಾತಿಯೊಂದಿಗೆ ನಡೆಯುತ್ತಿರುವ  ಕಲಹ ಪರಿಹಾರವಾಗುತ್ತದೆ. 

ಇದನ್ನೂ ಓದಿ : Shukra Gochar: ಮುಂದಿನ 27 ದಿನ ಈ ರಾಶಿಯವರಿಗೆ ಕೈತುಂಬಾ ಹಣ, ರಾಜಯೋಗ

ಕನ್ಯಾರಾಶಿ :
ಕನ್ಯಾ ರಾಶಿಯವರು ಕೂಡಾ ಶುಭ ಯೋಗದ ವಿಶೇಷ ಲಾಭವನ್ನು ಪಡೆಯಲಿದ್ದಾರೆ. ಈ ಸಮಯದಲ್ಲಿ, ವೈವಾಹಿಕ ಜೀವನದಲ್ಲಿ ಸಂತೋಷ, ಸಮೃದ್ಧಿ ಕಾಣ ಸಿಗುವುದು. ಹಠಾತ್ ಆರ್ಥಿಕ ಲಾಭವಾಗಲಿದೆ. ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಈ ಸಮಯ ತುಂಬಾ ಮಂಗಳಕರವಾಗಿರಲಿದೆ. ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಬಹುದು.

ಮಕರ ರಾಶಿ :
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳ ಶುಭ ಸಂಯೋಗದ ಪರಿಣಾಮವು ಮಕರ ರಾಶಿಯ ಜನರ ಜೀವನದ ಮೇಲೆ ಗೋಚರಿಸುತ್ತದೆ. ಈ ಅವಧಿಯಲ್ಲಿ ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಜೀವನದಲ್ಲಿ ಸಂತೋಷ ಇರುತ್ತದೆ. ಅಷ್ಟೇ ಅಲ್ಲ ಪತಿ-ಪತ್ನಿಯರ ಸಂಬಂಧದಲ್ಲಿ ಪರಸ್ಪರ ಸಾಮರಸ್ಯ ಹೆಚ್ಚುತ್ತದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗುವುದು. ಕಠಿಣ ಪರಿಶ್ರಮದಿಂದ ಶುಭ ಫಲಿತಾಂಶ ಮತ್ತು ಹೊಸ ಉದ್ಯೋಗಾವಕಾಶ  ಸಿಗುವುದು. 

ಇದನ್ನೂ ಓದಿ : Weekly Horoscope: ನವೆಂಬರ್ ಮೊದಲ ವಾರ ಐದು ರಾಶಿಯವರಿಗೆ ಹಣದ ಸುರಿಮಳೆ, ಭಾರೀ ಅದೃಷ್ಟ

 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News