Shravan 2022: ಶ್ರಾವಣ ಉಪವಾಸಕ್ಕೆ ಈ ವಿಶೇಷ ಖೀರ್ ಮಾಡಿ, ಶಿವ ಪ್ರಸನ್ನನಾಗುತ್ತಾನೆ

ಖೀರ್ ಶಿವನ ಮೆಚ್ಚಿನ ಭಕ್ಷ್ಯವಾಗಿದ್ದು, ಶ್ರಾವಣ ಮಾಸದಲ್ಲಿ ಖೀರ್ ತಯಾರಿಸಿ ಶಿವನ ಪ್ರಸಾದ ರೂಪದಲ್ಲಿ ಸೇವಿಸಲಾಗುತ್ತದೆ.

Written by - Puttaraj K Alur | Last Updated : Jul 18, 2022, 03:23 PM IST
  • ಶ್ರಾವಣ ಮಾಸದಲ್ಲಿ ಭಗವಾನ್ ಶಿವನನ್ನು ಭಕ್ತಯಿಂದ ಪೂಜಿಸಲಾಗುತ್ತದೆ
  • ಶ್ರಾವಣದಲ್ಲಿ ಖೀರ್‌ ತಯಾರಿಸಿ ಶಿವನ ಪ್ರಸಾದ ರೂಪದಲ್ಲಿ ಸೇವಿಸಲಾಗುತ್ತದೆ
  • ಮಖಾನಾ ಖೀರ್ ದೇಹಕ್ಕೆ ಮತ್ತು ಆರೋಗ್ಯಕ್ಕೆ ಉತ್ತಮವೆಂದು ಹೇಳಲಾಗಿದೆ
Shravan 2022: ಶ್ರಾವಣ ಉಪವಾಸಕ್ಕೆ ಈ ವಿಶೇಷ ಖೀರ್ ಮಾಡಿ, ಶಿವ ಪ್ರಸನ್ನನಾಗುತ್ತಾನೆ title=
ಮಖಾನಾ ಖೀರ್ ತಯಾರಿಸುವುದು ಹೇಗೆ..?

ನವದೆಹಲಿ: ಶ್ರಾವಣ ಮಾಸದಲ್ಲಿ ಭಗವಾನ್ ಶಿವನನ್ನು ಭಕ್ತಯಿಂದ ಪೂಜಿಸಲಾಗುತ್ತದೆ. ಭೋಲೆನಾಥನನ್ನು ಮೆಚ್ಚಿಸಲು ಜನರು ಉಪವಾಸ, ಪೂಜೆ ಇತ್ಯಾದಿಗಳನ್ನು ಮಾಡುತ್ತಾರೆ. ಅದೇ ರೀತಿ ಭಗವಾನ್ ಶಿವನಿಗೆ ಇಷ್ಟವಾದ ಭಕ್ಷ್ಯಗಳನ್ನು ಸಹ ಶ್ರಾವಣದಲ್ಲಿ ತಯಾರಿಸಲಾಗುತ್ತದೆ. ಖೀರ್ ಈಶ್ವರನ ನೆಚ್ಚಿನ ಆಹಾರ. ಹೀಗಾಗಿಯೇ ಶ್ರಾವಣ ಮಾಸದಲ್ಲಿ ಜನರು ಖೀರ್ ತಯಾರಿಸುತ್ತಾರೆ. ಖೀರ್‌ ತಯಾರಿಸಿ ಶಿವನ ಪ್ರಸಾದ ರೂಪದಲ್ಲಿ ಸೇವಿಸಲಾಗುತ್ತದೆ.

ಶ್ರಾವಣದಲ್ಲಿ ನೀವು ಉಪವಾಸ ಮಾಡದಿದ್ದರೂ ಸಹ ಆಹಾರದೊಂದಿಗೆ ಖೀರ್ ಸೇವಿಸಬಹುದು. ಸಾಮಾನ್ಯವಾಗಿ ಸಾದಾ ಅಕ್ಕಿ ಬಳಸಿ ಖೀರ್ ಮಾಡಲಾಗುತ್ತದೆ. ಅಕ್ಕಿಯ ಖೀರ್ ಸವಿದು ನಿಮಗೆ ಬೇಜಾರಾಗಿದ್ದರೆ ಮಖಾನಾ ಬಳಸಿಯೂ ಖೀರ್ ತಯಾರಿಸಬಹುದು. ಮಖಾನಾವನ್ನು ಉಪವಾಸದಲ್ಲಿ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದು ನಿಮ್ಮ ದೇಹಕ್ಕೆ ಸಾಕಷ್ಟು ಶಕ್ತಿಯನ್ನು ನೀಡುತ್ತದೆ. ಇದು ಉಪವಾಸದ ಸಮಯದಲ್ಲಿ ನಿಮ್ಮನ್ನು ಸಂಪೂರ್ಣವಾಗಿ ಆರೋಗ್ಯವಾಗಿರಿಸುತ್ತದೆ ಮತ್ತು ಶಿವನು ಸಹ ಸಂತೋಷಪಡುತ್ತಾನೆ. ಮಖಾನಾ ಖೀರ್ ಹೇಗೆ ತಯಾರಿಸುವುದು ಅನ್ನೋದರ ಬಗ್ಗೆ ತಿಳಿಯಿರಿ.  

ಇದನ್ನೂ ಓದಿ: Green Teaಯಲ್ಲಿ ಈ 4 ವಸ್ತುಗಳನ್ನು ಸೇರಿಸಿ ಕುಡಿದರೆ ಕ್ಯಾನ್ಸರ್ ತಡೆಗಟ್ಟುವಲ್ಲಿ ಪರಿಣಾಮಕಾರಿ

ಮಖಾನ ಖೀರ್ ಮಾಡಲು ಬೇಕಾಗುವ ಸಾಮಾಗ್ರಿಗಳು: ಅಗತ್ಯಕ್ಕೆ ತಕ್ಕಷ್ಟು ಮಖಾನಾ, 2 ಚಮಚ ತುಪ್ಪ, ಒಂದು ಚಮಚ ಗೋಡಂಬಿ, ಒಂದು ಚಮಚ ಪಿಸ್ತಾ, ಒಂದು ಚಮಚ ಒಣದ್ರಾಕ್ಷಿ ಮತ್ತು ಒಂದು ಚಮಚ ಬಾದಾಮಿ, ಮಿಲ್ಕ್‌ಮೇಡ್, ಒಂದು ಲೀಟರ್ ಫುಲ್ ಕ್ರೀಮ್ ಹಾಲು, 2 ಚಮಚ ಕೇಸರಿ, ಕಾಲು ಚಮಚ ಏಲಕ್ಕಿ ಪುಡಿ ಬೇಕಾಗುತ್ತದೆ.

ಮಖಾನ ಖೀರ್ ಮಾಡುವ ವಿಧಾನ: ಮೊದಲನೆಯದಾಗಿ ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ ಅದರಲ್ಲಿ ಮಖಾನವನ್ನು ಹುರಿಯಿರಿ. ಅದೇ ಬಾಣಲೆಯಲ್ಲಿ ಮತ್ತೆ ತುಪ್ಪವನ್ನು ಬಿಸಿ ಮಾಡಿ ಡ್ರೈ ಫ್ರೂಟ್ಸ್ ಅನ್ನು ಹುರಿದು ಪಕ್ಕಕ್ಕೆ ಇರಿಸಿ. ಈಗ ದಪ್ಪ ತಳದ ಬಾಣಲೆಯಲ್ಲಿ ಹಾಲು ಸೇರಿಸಿ ಕುದಿಸಿ, ಈಗ ಹಾಲನ್ನು ಅರ್ಧಕ್ಕೆ ಇಳಿಸುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸಿ ನಂತರ ಅದಕ್ಕೆ ಮಖಾನಾ ಸೇರಿಸಿ ಸ್ವಲ್ಪ ಸಮಯ ಬೇಯಿಸಿ. ತದನಂತರ ಡ್ರೈ ಫ್ರೂಟ್ಸ್ ಹಾಕಿ ಮುಚ್ಚಳ ಹಾಕಿ ಬೇಯಿಸಲು ಬಿಡಿ. ಇದಕ್ಕೆ ಮಿಲ್ಕ್‌ಮೇಡ್, ಕೇಸರಿ, ಬಾದಾಮಿ ಪುಡಿ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ 5 ರಿಂದ 7 ನಿಮಿಷ ಬೇಯಿಸಿ. ಹೀಗೆ ಮಾಡಿದ್ರೆ ರುಚಿ ರುಚಿಯಾದ ಮಖಾನಾ ಖೀರ್ ಸವಿಯಲು ರೆಡಿಯಾಗುತ್ತದೆ. ಬಿಸಿಯಾಗಿ ನಿಮ್ಮ ಮನೆಯರಿಗೆ ಬಡಿಸಿ ಮತ್ತು ನೀವೂ ಸಹ ಆನಂದಿಸಿರಿ.

ಇದನ್ನೂ ಓದಿ: ಚಹಾದ ಜೊತೆ ಈ ಆಹಾರಗಳನ್ನು ಸೇವಿಸಿದರೆ ಅಪಾಯ ಖಂಡಿತಾ .!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News