ಇನ್ನೊಂದೇ ತಿಂಗಳಲ್ಲಿ ಈ ರಾಶಿಯವರ ಭಾಗ್ಯೋದಯ ! ಮುಂದಿನ ಒಂದೂವರೆ ವರ್ಷ ಸುಖ, ಸಮೃದ್ದಿ, ಸಂತಸದ ಜೀವನ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಹುವಿನ ಸಂಚಾರವು ಕೆಲವು ರಾಶಿಗಳಿಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ರಾಹು ಸಂಕ್ರಮಣದೊಂದಿಗೆ ಕೆಲವು ರಾಶಿಯವರ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ. 

Written by - Ranjitha R K | Last Updated : Sep 21, 2023, 02:28 PM IST
  • ವೃಷಭ ರಾಶಿಯವರಿಗೆ ರಾಹುವಿನ ಸಂಚಾರವು ತುಂಬಾ ಅನುಕೂಲಕರವಾಗಿರುತ್ತದೆ.
  • ಈ ಅವಧಿಯಲ್ಲಿ, ನಿಮ್ಮ ಆರ್ಥಿಕ ಪರಿಸ್ಥಿತಿಯು ಸ್ಥಿರವಾಗಿರುತ್ತದೆ.
  • ಹೂಡಿಕೆಯಲ್ಲಿ ಲಾಭ ಮತ್ತು ಒಲಿದು ಬರುವುದು ಸಂಪತ್ತು
ಇನ್ನೊಂದೇ ತಿಂಗಳಲ್ಲಿ ಈ ರಾಶಿಯವರ ಭಾಗ್ಯೋದಯ ! ಮುಂದಿನ ಒಂದೂವರೆ ವರ್ಷ ಸುಖ, ಸಮೃದ್ದಿ, ಸಂತಸದ ಜೀವನ  title=

ಬೆಂಗಳೂರು : ಜ್ಯೋತಿಷ್ಯದಲ್ಲಿ, ರಾಹು ಮತ್ತು ಕೇತು ಎರಡನ್ನೂ ನೆರಳು ಗ್ರಹಗಳು ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಈ ಗ್ರಹಗಳ ಹೆಸರು ಕೇಳಿದರೆ ಜನ ಹೆದರುತ್ತಾರೆ. ರಾಹು ಮತ್ತು ಕೇತು ಪ್ರತಿ 18 ತಿಂಗಳಿಗೊಮ್ಮೆ ರಾಶಿಯನ್ನು ಬದಲಾಯಿಸುತ್ತಾರೆ. ಪ್ರಸ್ತುತ, ರಾಹು ಮೇಷ ರಾಶಿಯಲ್ಲಿದೆ. ರಾಹುವು 30 ಅಕ್ಟೋಬರ್ 2023 ರಂದು ಮೀನ ರಾಶಿಯನ್ನು ಪ್ರವೇಶಿಸಲಿದೆ.  

ಅಕ್ಟೋಬರ್ 30, 2023 ರಂದು ಸಂಜೆ 04:37 ಕ್ಕೆ ರಾಹು ಗ್ರಹವು ಮೇಷ ರಾಶಿಯಿಂದ ಮೀನ ರಾಶಿಗೆ ಸಾಗುತ್ತದೆ. ಇದಾದ ನಂತರ 2025  ಮೇ 18, ರವರೆಗೆ ಇದೆ ರಾಶಿಯಲ್ಲಿ ರಾಹು ಇರುತ್ತಾನೆ. ಮೇ 18, 2025 ರಂದು ರಾತ್ರಿ 07:35 ಕ್ಕೆ ಮೀನ ರಾಶಿಯನ್ನು ಬಿಟ್ಟು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಕೇತು ಪ್ರಸ್ತುತ ರಾಹುವಿನ ಜೊತೆ ತುಲಾ ರಾಶಿಯಲ್ಲಿದೆ. 30 ಅಕ್ಟೋಬರ್ 2023 ರಂದು ಕನ್ಯಾರಾಶಿಯಲ್ಲಿ ಕೇತು ಸಂಕ್ರಮಿಸುತ್ತದೆ. ರಾಹು ಮತ್ತು ಕೇತು ಯಾವಾಗಲೂ ಹಿಮ್ಮುಖವಾಗಿಯೇ ಚಲಿಸುವ ಗ್ರಹಗಳು.

ಇದನ್ನೂ ಓದಿ :  ಚಂದ್ರಗ್ರಹಣದ ಬಳಿಕ ರಾಹು-ಕೇತು ಹಾಗೂ ಶನಿ ನಡೆಯಲ್ಲಿ ಬದಲಾವಣೆ, 3 ರಾಶಿಗಳ ಜನರಿಗೆ ಲಕ್ಷ್ಮಿನಾರಾಯಣ ಕೃಪೆಯಿಂದ ಅಪಾರ ಧನ-ಸಂಪತ್ತು ಯಶಸ್ಸು ಪ್ರಾಪ್ತಿ!

ಸಾಮಾನ್ಯವಾಗಿ ಎಲ್ಲಾ ಗ್ರಹಗಳ ಬದಲಾವಣೆಯು ಪ್ರತಿಯೊಬ್ಬರ ಜಾತಕದ ಬದಲಾವಣೆಗಳನ್ನು ಉಂಟುಮಾಡುತ್ತದೆ. ರಾಹುವಿನ ಸಂಕ್ರಮಣವು ಎಲ್ಲಾ ರಾಶಿಗಳ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತದೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಹುವಿನ ಸಂಚಾರವು ಕೆಲವು ರಾಶಿಗಳಿಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ರಾಹು ಸಂಕ್ರಮಣದೊಂದಿಗೆ ಕೆಲವು ರಾಶಿಯವರ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ. 

ಈ ರಾಶಿಯವರಿಗೆ ರಾಹುವಿನ ಸಂಚಾರ ಅನುಕೂಲಕರವಾಗಿರುತ್ತದೆ:
ಮೇಷ ರಾಶಿ :  

ಪ್ರಸ್ತುತ ರಾಹು ಮೇಷ ರಾಶಿಯಲ್ಲಿದ್ದಾನೆ . ಗುರು ಗ್ರಹ ಕೂಡಾ ಮೇಷ ರಾಶಿಯಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಮೇಷ ರಾಶಿಯಲ್ಲಿ ಗುರು  ಚಾಂಡಾಲ ದೋಷ ಕಂಡು ಬರುತ್ತಿದೆ. ಆದರೆ ರಾಹುವು ಮೀನ ರಾಶಿಯನ್ನು ಪ್ರವೇಶಿಸಿದಾಗ, ಮೇಷ ರಾಶಿಯವರು ಈ ದೋಷದಿಂದ  ಮುಕ್ತಿ ಹೊಂದುತ್ತಾರೆ. ನಂತರ ಗುರುವು ಮೇಷ ರಾಶಿಯವರನ್ನು ಹರಸಲು ಆರಂಭಿಸುತ್ತಾನೆ. ಆದ್ದರಿಂದ ರಾಹು ಸಂಚಾರವು ಮೇಷ ರಾಶಿಯವರಿಗೆ ಹೆಚ್ಚು ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ.

ಇದನ್ನೂ ಓದಿ : ಅಕ್ಟೋಬರ್ ಆರಂಭದಲ್ಲಿಯೇ ಶುಕ್ರ ದೆಸೆ ! ಈ ರಾಶಿಯವರು ಇಟ್ಟ ಹೆಜ್ಜೆಗೆ ಸೋಲಿಲ್ಲ! ಕೈ ಹಿಡಿದು ಮುನ್ನಡೆಸುವಳು ಧನ ಲಕ್ಷ್ಮೀ 

ವೃಷಭ ರಾಶಿ:
ವೃಷಭ ರಾಶಿಯವರಿಗೆ ರಾಹುವಿನ ಸಂಚಾರವು ತುಂಬಾ ಅನುಕೂಲಕರವಾಗಿರುತ್ತದೆ. ಈ ಅವಧಿಯಲ್ಲಿ, ನಿಮ್ಮ ಆರ್ಥಿಕ ಪರಿಸ್ಥಿತಿಯು ಸ್ಥಿರವಾಗಿರುತ್ತದೆ. ಹೂಡಿಕೆಯಲ್ಲಿ ಲಾಭವಾಗಿ ಸಂಪತ್ತಿನ ಹೆಚ್ಚಳವಾಗುವುದು. ಈ ಸಮಯದಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿರುವ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ರಾಹುವಿನ ಶುಭ ಪ್ರಭಾವದಿಂದ ನಿಮ್ಮ ಮುಂದಿನ ಸವಾಲುಗಳು ಕೂಡಾ ಕಡಿಮೆಯಾಗುತ್ತದೆ.  

ಕನ್ಯಾ ರಾಶಿ :
ಮೀನ ರಾಶಿಯಲ್ಲಿ ರಾಹುವಿನ ಸಂಚಾರವು ಕನ್ಯಾ ರಾಶಿಯವರ ಜೀವನದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ತರುತ್ತದೆ. ಈ ಸಮಯದಲ್ಲಿ, ಜೀವನದಲ್ಲಿ ಅನಿರೀಕ್ಷಿತ ಆರ್ಥಿಕ ಲಾಭ ಮತ್ತು ಸಂತೋಷ  ಹೆಚ್ಚಾಗುತ್ತದೆ. ಈ ಸಮಯದಲ್ಲಿ ಕೆಲವು ಒಳ್ಳೆಯ ಸುದ್ದಿಗಳನ್ನು  ಕೇಳಬಹುದು. 

ಇದನ್ನೂ ಓದಿ :  Solar and Lunar Eclipse 2023: ಹದಿನೈದು ದಿನಗಳೊಳಗೆ 2 ಗ್ರಹಣ, ಹೆಚ್ಚಾಗಲಿದೆ ಈ ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್

ಮಕರ ರಾಶಿ : 
ಮಕರ ರಾಶಿಯವರ ಜೀವನದಲ್ಲಿ ರಾಹುವಿನ ಸಂಚಾರವು ಸಕಾರಾತ್ಮಕ ಫಲಿತಾಂಶಗಳನ್ನು ತರುತ್ತದೆ. ಈ ಅವಧಿಯಲ್ಲಿ ಆದಾಯ ವೃದ್ಧಿಗೆ ಹೊಸ ಅವಕಾಶಗಳು ಹುಟ್ಟಿಕೊಳ್ಳುತ್ತವೆ. ಆರ್ಥಿಕವಾಗಿ ಸದೃಢರಾಗಲು ಹೊಸ ಹೊಸ ಅವಕಾಶಗಳು ಒದಗಿ ಬರುತ್ತವೆ. ರಾಹುವಿನ ಸಂಚಾರವು ಮಕರ ರಾಶಿಯವರ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

( ಸೂಚನೆ : ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಈ ಮಾಹಿತಿಯನ್ನು ಝೀ ಮೀಡಿಯಾ ಖಚಿತಪಡಿಸಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News