ಬೆಂಗಳೂರು : ಹಿಂದೂ ಶಾಸ್ತ್ರದ ಪ್ರಕಾರ, ಲಕ್ಷ್ಮೀ ದೇವಿಯನ್ನು ಸಂಪತ್ತಿನ ಅಧಿದೇವತೆ ಎಂದು ಕರೆಯಲಾಗುತ್ತದೆ. ಲಕ್ಷ್ಮೀ ದೇವಿಯೊಂದಿಗೆ ಕುಬೇರ ದೇವನನ್ನು ಪೂಜಿಸುವವರ ಜೀವನದಲ್ಲಿ ಯಾವಾಗಲೂ ಹಣ ಮತ್ತು ಸಂಪತ್ತಿನ ಕೊರತೆಯಾಗುವುದಿಲ್ಲ ಎಂದು ಹೇಳಲಾಗುತ್ತದೆ. ಕುಬೇರನ ಆಶೀರ್ವಾದವಿದ್ದರೆ ಜೀವನದುದ್ದಕ್ಕೂ ಹಣದ ಕೊರತೆಯನ್ನು ಎದುರಾಗುವುದಿಲ್ಲ. ಈ ಕಾರಣದಿಂದಲೇ ಅನೇಕ ಮನೆಗಳಲ್ಲಿ ಕುಬೇರನ ವಿಗ್ರಹ ಇತ್ತು ಪೂಜೆ ಮಾಡಲಾಗುತ್ತದೆ.
ಕುಬೇರನು ತನ್ನ ಆರಾಧಕರಿಗೆ ಹಣದ ಕೊರತೆ, ಬಡತನ, ದುಃಖ, ಆರ್ಥಿಕ ಮುಗ್ಗಟ್ಟುಗಳು ಎದುರಾಗದಂತೆ ನೋಡಿಕೊಳ್ಳುತ್ತನೆಯಂತೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, 12 ರಾಶಿಗಳನ್ನು ಹೇಳಲಾಗಿದೆ. ಪ್ರತಿಯೊಂದು ರಾಶಿಯೂ ವಿಭಿನ್ನ ಗುಣ ಲಕ್ಷಣಗಳನ್ನು ಹೊಂದಿವೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕೆಲವು ರಾಶಿಯವರ ಮೇಲೆ ಕುಬೇರ ದೇವ ಮತ್ತು ಲಕ್ಷ್ಮೀ ದೇವಿಯ ಅನುಗ್ರಹ ಹೆಚ್ಚಿರುತ್ತದೆಯಂತೆ.
ಇದನ್ನೂ ಓದಿ : Nag Panchami Astrology: ನಾಗರ ಪಂಚಮಿ ಹಬ್ಬ ಈ ರಾಶಿಗಳ ಜನರ ಜೀವನದಲ್ಲಿ ಹಣದ ಹೊಳೆಯೇ ಹರಿಸಲಿದೆ!
ಕಟಕ ರಾಶಿ :
ಕರ್ಕ ರಾಶಿಯವರ ಮೇಲೆ ಕುಬೇರನ ಕೃಪೆ ಹೆಚ್ಚು ಇರುತ್ತದೆ . ಕುಬೇರನು ಯಾವಾಗಲೂ ಈ ರಾಶಿಯವರ ಮೇಲೆ ತನ್ನ ಕೃಪಾ ದೃಷ್ಟಿ ಹರಿಸುತ್ತಾನೆ. ಈ ರಾಶಿಯವರು ಏನೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಕಾಣುತ್ತಾರೆ. ಅದೃಷ್ಟ ಯಾವಾಗಲೂ ಇವರ ಪರವಾಗಿ ಇರುತ್ತದೆ. ಕರ್ಕಾಟಕ ರಾಶಿಯವರ ಜೀವನದಲ್ಲಿ ಹಣದ ಕೊರತೆ ಎದುರಾಗುವುದೇ ಇಲ್ಲ. ತಮ್ಮ ಕಠಿಣ ಪರಿಶ್ರಮದಿಂದ ಎಲ್ಲಾ ಕ್ಷೇತ್ರಗಳಲ್ಲಿಯೂ ಯಶಸ್ಸು ಇವರು ಸಾಧಿಸುವರು.
ವೃಶ್ಚಿಕ ರಾಶಿ :
ವೃಶ್ಚಿಕ ರಾಶಿಯವರ ಮೇಲೆ ಕೂಡಾ ಕುಬೇರ ದೇವ ಸದಾ ದಯೆ ತೋರುತ್ತಾನೆ. ಕುಬೇರನ ಅನುಗ್ರಹದಿಂದ ವೃಶ್ಚಿಕ ರಾಶಿಯವರಿಗೆ ಸಮಾಜದಲ್ಲಿ ಸ್ಥಾನಮಾನ, ಗೌರವ, ಪ್ರಾಪ್ತಿಯಾಗಲಿದೆ. ಅವರ ಮನೆಯಲ್ಲಿ ಸದಾ ಹಣದ ಹರಿವು ಇರುತ್ತದೆ. ಈ ರಾಶಿಯವರು ಯಾವಾಗಲೂ ಲಕ್ಷ್ಮೀ ಮತ್ತು ಕುಬೇರನ ಕೃಪೆಯನ್ನು ಪಡೆಯುತ್ತಾರೆ.
ಇದನ್ನೂ ಓದಿ : ವರ್ಷ 2024ರವರೆಗೆ ಈ ರಾಶಿಗಳ ಜನರಿಗೆ ಐಶ್ವರ್ಯಲಕ್ಷ್ಮಿಯ ಕೃಪೆಯಿಂದ ಭಾರಿ ಧನಲಾಭ ಪ್ರಾಪ್ತಿಯ ಯೋಗ!
ತುಲಾ ರಾಶಿ :
ಕುಬೇರನು ಯಾವಾಗಲೂ ತುಲಾ ರಾಶಿಯವರಿಗೆ ವಿಶೇಷವಾದ ಆಶೀರ್ವಾದವನ್ನು ಕರುಣಿಸುತ್ತಾನೆ. ಕುಬೇರನ ಕೃಪೆಯಿಂದ ಈ ರಾಶಿಯವರು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿಯಾಗುತ್ತಾರೆ. ಇವರ ಜೀವನದಲ್ಲಿ ಸದಾ ಹಣದ ಸುರಿಮಳೆಯಾಗುತ್ತದೆ. ತುಲಾ ರಾಶಿಯವರ ಜೀವನದಲ್ಲಿ ಹಣ ಅಥವಾ ಆನಂದಕ್ಕೆ ಕೊರತೆಯಿರುವುದಿಲ್ಲ. ಕುಬೇರ ಭಗವಂತ ಮತ್ತು ಲಕ್ಷ್ಮೀಯ ಕೃಪೆಯಿಂದ ಅವರು ಯಾವಾಗಲೂ ಸಂತೋಷದಿಂದ ಇರುತ್ತಾರೆ.
( ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ