2025 ರವರೆಗೆ ಈ ರಾಶಿಯವರಿಗೆ ಲಕ್ಷಾಧಿಪತಿ ಯೋಗ! ಹೆಜ್ಜೆ ಹೆಜ್ಜೆಗೂ ಅದೃಷ್ಟ ಕರುಣಿಸುವನು ಶನಿ ಮಹಾತ್ಮ!

2025 ರವರೆಗೆ ಶನಿಯು ಕುಂಭ ರಾಶಿಯಲ್ಲಿ ಸಾಗುತ್ತಾನೆ. ಶನಿಯು ಕುಂಭ ರಾಶಿಯಲ್ಲಿರುವುದರಿಂದ ಮಕರ, ಮೀನ ಮತ್ತು ಕುಂಭ ರಾಶಿಯವರಿಗೆ ಏಳೂವರೆ ಶನಿ ದೆಸೆ ನಡೆಯುತ್ತಿದೆ. 

Written by - Ranjitha R K | Last Updated : Nov 15, 2023, 04:31 PM IST
  • ವಿದೇಶ ಪ್ರವಾಸ ಮಾಡುವ ಸಾಧ್ಯತೆ ಇದೆ.
  • ನ್ಯಾಯಾಲಯದ ತೀರ್ಪುಗಳು ಕುಂಭ ರಾಶಿಯವರಿಗೆ ಅನುಕೂಲವಾಗಬಹುದು.
  • ಆರ್ಥಿಕ ಲಾಭದ ಬಲವಾದ ಸಾಧ್ಯತೆಯಿದೆ
2025 ರವರೆಗೆ ಈ ರಾಶಿಯವರಿಗೆ ಲಕ್ಷಾಧಿಪತಿ ಯೋಗ! ಹೆಜ್ಜೆ ಹೆಜ್ಜೆಗೂ ಅದೃಷ್ಟ ಕರುಣಿಸುವನು ಶನಿ ಮಹಾತ್ಮ! title=

ಬೆಂಗಳೂರು : ಜ್ಯೋತಿಷ್ಯದಲ್ಲಿ, ಶನಿಯು ಒಂಬತ್ತು ಗ್ರಹಗಳಲ್ಲಿ ನಿಧಾನವಾಗಿ ಚಲಿಸುವ ಗ್ರಹ ಎಂದು ಕರೆಯಲಾಗುತ್ತದೆ. ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗಲು ಸುಮಾರು ಎರಡೂವರೆ ವರ್ಷಗಳು ಬೇಕಾಗುತ್ತದೆ. ಈ ರೀತಿಯಾಗಿ ಶನಿಯು ಒಂದು ರಾಶಿ ಚಕ್ರವನ್ನು ಪೂರ್ಣಗೊಳಿಸಲು ಸುಮಾರು 30 ವರ್ಷಗಳನ್ನು ತೆಗೆದುಕೊಳ್ಳುತ್ತಾನೆ. ಶನಿಯು ಪ್ರಸ್ತುತ ಕುಂಭ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ. ಇತ್ತೀಚೆಗಷ್ಟೇ  ವಕ್ರ ನಡೆಯಿಂದ ನೇರ ನಡೆಗೆ ಮರಳಿದ್ದಾನೆ. 

ಸಾಮಾನ್ಯವಾಗಿ, ಒಬ್ಬರ ಜಾತಕದಲ್ಲಿ ಶನಿಯ ಅನುಕೂಲಕರ ಸ್ಥಾನವು ಅಸಾಧ್ಯವಾದುದನ್ನು ಸಾಧ್ಯವಾಗಿಸುತ್ತದೆ ಎನ್ನುತ್ತಾರೆ ಜ್ಯೋತಿಷಿಗಳು. ಶನಿಯು ಕುಂಭ ರಾಶಿಯಲ್ಲಿ ಇರುವವರೆಗೆ ಕೆಲವು ರಾಶಿಯವರ ಅದೃಷ್ಟವನ್ನು ಬೆಳಗುತ್ತಾನೆ. ಶನಿ ಮಹಾತ್ಮನ ದಯೆಯಿಂದ ಮುಂದಿನ ಎರಡು ವರ್ಷಗಳವರೆಗೆ ಈ ರಾಶಿಯವರಿಗೆ ಪ್ರತಿ ಹೆಜ್ಜೆಯಲ್ಲಿಯೂ ಅದೃಷ್ಟ ಕೈ ಹಿಡಿಯುತ್ತದೆ. 

ಇದನ್ನೂ ಓದಿ : 2024ರ ವರ್ಷ ಈ ರಾಶಿಯವರಿಗೆ ಅದೃಷ್ಟ ಯೋಗ ! ಕೈ ಹಿಡಿದು ಮುನ್ನಡೆಸುವರು ಗುರು ಮತ್ತು ಶನಿ ! ಒಲಿದು ಬರುವುದು ಧನಸಂಪತ್ತು, ಕೀರ್ತಿ, ಸರ್ಕಾರಿ ನೌಕರಿ

ಮಿಥುನ ರಾಶಿ : 2025 ರವರೆಗಿನ ಅವಧಿಯು ಮಿಥುನ ರಾಶಿಯವರಿಗೆ ತುಂಬಾ ಅನುಕೂಲಕರವಾಗಿರುತ್ತದೆ. ಮಕ್ಕಳಿಂದ ನೀವು ಒಳ್ಳೆಯ ಸುದ್ದಿ ಪಡೆಯಬಹುದು. ಆರ್ಥಿಕ ಲಾಭವಾಗುವ ಸಾಧ್ಯತೆಯಿದೆ. ಈ ಅವಧಿಯಲ್ಲಿ, ಭೂಮಿ, ಕಟ್ಟಡ ಮತ್ತು ವಾಹನವನ್ನು ಖರೀದಿಸಬಹುದು. ಆದಾಯ ಹೆಚ್ಚಾದಂತೆ ಸಮಾಧಾನವೂ ಹೆಚ್ಚುವುದು. ಹೊಸ ಕೆಲಸಕ್ಕೆ ಸೇರಿಕೊಳ್ಳುವ ಅವಕಾಶ ಒಲಿದು ಬರುವುದು. 

ತುಲಾ ರಾಶಿ : ಕುಂಭ ರಾಶಿಯಲ್ಲಿ ಶನಿಯ ಉಪಸ್ಥಿತಿಯು ತುಲಾ ರಾಶಿಯವರಿಗೆ ತುಂಬಾ ಅನುಕೂಲಕರವಾಗಿದೆ. 2025ರವರೆಗಿನ ಅವಧಿ ತುಲಾ ರಾಶಿಯವರಿಗೆ ವರದಾನವಾಗಲಿದೆ. ಈ ಅವಧಿಯಲ್ಲಿ ಅದೃಷ್ಟ ನಿಮ್ಮ ಕಡೆಗೆ ಇರುತ್ತದೆ. ಉದ್ಯೋಗದಲ್ಲಿರುವವರಿಗೆ ಹೊಸ ಅವಕಾಶಗಳು ಸಿಗಲಿವೆ. ವಿದೇಶ ಪ್ರವಾಸ ಮಾಡುವ ಸಾಧ್ಯತೆ ಇದೆ. ಶನಿ ದೇವರು ನಿಮಗೆ ಉತ್ತಮ ಅವಕಾಶಗಳನ್ನು ನೀಡುತ್ತಾನೆ. ಎಲ್ಲಾ ಆಸೆಗಳು ಈಡೇರುತ್ತವೆ. 

ಇದನ್ನೂ ಓದಿ : ಮಹಾಲಕ್ಷ್ಮೀ ರಾಜ ಯೋಗ : ಈ ರಾಶಿಗಳಿಗೆ ಚಿನ್ನದಂಥ ಕಾಲ, ಯಶಸ್ಸಿನ ಶಿಖರ ಏರುವರು.. ಸಂಪತ್ತಿನ ಮಳೆ!

ಕುಂಭ ರಾಶಿ : ಕುಂಭ ರಾಶಿಯವರಿಗೆ ಶನಿಯು ಆಗಾಗ ಶುಭ ಫಲಿತಾಂಶಗಳನ್ನು ನೀಡುತ್ತಾನೆ. 2025ರ ವರೆಗೆ ಶನಿಯು ಕುಂಭ ರಾಶಿಯಲ್ಲಿ ಇರುವುದರಿಂದ ಈ ರಾಶಿಯವರ ಗೌರವ ಮತ್ತು ಧೈರ್ಯ ಹೆಚ್ಚುತ್ತದೆ. ಸಮಾಜದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗುತ್ತದೆ. ನ್ಯಾಯಾಲಯದ ತೀರ್ಪುಗಳು ಕುಂಭ ರಾಶಿಯವರಿಗೆ ಅನುಕೂಲವಾಗಬಹುದು. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು  ಪೂರ್ಣಗೊಳ್ಳಲಿವೆ. ಹೊಸ ಉದ್ಯಮಗಳು ಯಶಸ್ಸನ್ನು ತರುತ್ತವೆ. 

(ಸೂಚನೆ : ಈ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗ, ಬೋಧನೆಗಳು, ನಂಬಿಕೆಗಳು, ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಿ ನಿಮಗೆ ಒದಗಿಸಲಾಗಿದೆ. ಮಾಹಿತಿ ಒದಗಿಸುವುದು ಮಾತ್ರ ನಮ್ಮ ಉದ್ದೇಶ.  ZEE NEWS ಇದಕ್ಕೆ ಜವಾಬ್ದಾರನಾಗಿರುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News