Mahashivratri 2023: ಮಹಾಶಿವರಾತ್ರಿಯಂದು ಈ ವಸ್ತುವನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಿ: ಕೆಟ್ಟ ದಿನಗಳು ದೂರವಾಗುತ್ತೆ, ಪವಾಡವೇ ಸಂಭವಿಸುತ್ತದೆ!

Maha Shivratri Remedies: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮಹಾಶಿವರಾತ್ರಿಯಂದು ಭಗವಾನ್ ಶಿವನಿಗೆ ಪ್ರಿಯವಾದ ವಸ್ತುಗಳನ್ನು ಅರ್ಪಿಸುವ ಮೂಲಕ, ದೇವರೊಂದಿಗೆ ನೇರ ಸಂಪರ್ಕಕ್ಕೆ ಬರುತ್ತಾರೆ. ಶಿವನಿಗೆ ಬಿಲ್ವಪತ್ರೆಯ ಎಲೆಗಳನ್ನು ಅರ್ಪಿಸಿದ ನಂತರ, ಕೆಲವರು ಆ ಎಲೆಗಳನ್ನು ಪೂಜೆಯ ತಟ್ಟೆಯಲ್ಲಿ ಇಟ್ಟು ಮನೆಗೆ ತರುವುದನ್ನು ನೀವು ಅನೇಕ ಬಾರಿ ನೋಡಿರಬೇಕು.

Written by - Bhavishya Shetty | Last Updated : Feb 18, 2023, 12:05 AM IST
    • ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯು ಮಹಾದೇವನಿಗೆ ಸಮರ್ಪಿತವಾಗಿದೆ.
    • ಈ ದಿನ ದೇಶದೆಲ್ಲೆಡೆ ಮಹಾಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ.
    • ಮಹಾಶಿವರಾತ್ರಿಯಂದು ಶಿವ ಮತ್ತು ತಾಯಿ ಪಾರ್ವತಿಯನ್ನು ಪೂಜಿಸುವ ಆಚರಣೆ ಇದೆ.
Mahashivratri 2023: ಮಹಾಶಿವರಾತ್ರಿಯಂದು ಈ ವಸ್ತುವನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಿ: ಕೆಟ್ಟ ದಿನಗಳು ದೂರವಾಗುತ್ತೆ, ಪವಾಡವೇ ಸಂಭವಿಸುತ್ತದೆ!  title=
Mahashivratri 2023

Maha Shivratri Remedies: ಲಕ್ಷಾಂತರ ಶಿವ ಭಕ್ತರಿದ್ದಾರೆ. ಮಹಾದೇವನನ್ನು ಮೆಚ್ಚಿಸಲು ಮತ್ತು ಅವರ ಆಶೀರ್ವಾದ ಪಡೆಯಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ. ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯು ಮಹಾದೇವನಿಗೆ ಸಮರ್ಪಿತವಾಗಿದೆ. ಈ ದಿನ ದೇಶದೆಲ್ಲೆಡೆ ಮಹಾಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ. ಮಹಾಶಿವರಾತ್ರಿಯಂದು ಶಿವ ಮತ್ತು ತಾಯಿ ಪಾರ್ವತಿಯನ್ನು ಪೂಜಿಸುವ ಆಚರಣೆ ಇದೆ. ಬಿಲ್ವಪತ್ರೆಯನ್ನು ಮಹಾಶಿವರಾತ್ರಿಯ ಪೂಜೆಯಲ್ಲಿ ವಿಶೇಷವಾಗಿ ಬಳಸಲಾಗುತ್ತದೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮಹಾಶಿವರಾತ್ರಿಯಂದು ಭಗವಾನ್ ಶಿವನಿಗೆ ಪ್ರಿಯವಾದ ವಸ್ತುಗಳನ್ನು ಅರ್ಪಿಸುವ ಮೂಲಕ, ದೇವರೊಂದಿಗೆ ನೇರ ಸಂಪರ್ಕಕ್ಕೆ ಬರುತ್ತಾರೆ. ಶಿವನಿಗೆ ಬಿಲ್ವಪತ್ರೆಯ ಎಲೆಗಳನ್ನು ಅರ್ಪಿಸಿದ ನಂತರ, ಕೆಲವರು ಆ ಎಲೆಗಳನ್ನು ಪೂಜೆಯ ತಟ್ಟೆಯಲ್ಲಿ ಇಟ್ಟು ಮನೆಗೆ ತರುವುದನ್ನು ನೀವು ಅನೇಕ ಬಾರಿ ನೋಡಿರಬೇಕು. ಶಿವಲಿಂಗದ ಮೇಲೆ ಬಿಲ್ವಪತ್ರೆಯನ್ನು ಇರಿಸಿದ ನಂತರ ಅದನ್ನು ಎತ್ತಿಕೊಂಡು ಮನೆಗೆ ತಂದರೆ ಕೆಲವು ದಿನಗಳವರೆಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ ಎಂದು ನಂಬಲಾಗಿದೆ. ಅಷ್ಟೇ ಅಲ್ಲ ಈ ಎಲೆಗಳನ್ನು ಜೇಬಿನಲ್ಲೂ ಇಟ್ಟುಕೊಳ್ಳಬಹುದು.

ಇದನ್ನೂ ಓದಿ: ಗ್ರೀನ್ ಟೀ ಸೇವನೆ ಆರೋಗ್ಯಕ್ಕೆ ಲಾಭಕಾರಿ.. ಆದರೆ, ಅತಿಯಾದ ಗ್ರೀನ್ ಟೀ ಸೇವನೆ!

ಹಿಂದೂ ಧರ್ಮಗ್ರಂಥಗಳಲ್ಲಿ ಬಿಲ್ವಪತ್ರೆಯ ಬಗ್ಗೆ ಅನೇಕ ನಂಬಿಕೆಗಳಿವೆ. ಬಿಲ್ವಪತ್ರೆಯ ಮೂರು ಎಲೆಗಳು ಒಟ್ಟಿಗೆ ಸೇರಿಕೊಳ್ಳುತ್ತವೆ. ಮೂರು ಎಲೆಗಳಲ್ಲಿ ತ್ರಿದೇವ (ಬ್ರಹ್ಮ, ವಿಷ್ಣು, ಶಿವ) ನೆಲೆಸಿದ್ದಾನೆ ಎಂದು ಹೇಳಲಾಗುತ್ತದೆ. ಮೂರು ಎಲೆಗಳನ್ನು ಮಹಾದೇವನ ಮೂರು ಕಣ್ಣುಗಳು ಅಥವಾ ಆಯುಧ-ತ್ರಿಶೂಲದ ಸಂಕೇತವೆಂದು ಪರಿಗಣಿಸಲಾಗಿದೆ ಎಂದು ಹೇಳಲಾಗುತ್ತದೆ. ಬಿಲ್ವಪತ್ರೆಯಿಲ್ಲದೆ ಶಿವನ ಆರಾಧನೆ ಅಪೂರ್ಣ ಎಂದು ಹೇಳಲಾಗುತ್ತದೆ. ಮಹಾಶಿವರಾತ್ರಿಯ ದಿನದಂದು ಶಿವಲಿಂಗದ ಮೇಲೆ ಅರ್ಪಿಸಿದ ಬಿಲ್ವಪತ್ರೆಯನ್ನು ಜೇಬಿನಲ್ಲಿ ಇಟ್ಟುಕೊಳ್ಳುವುದರಿಂದ, ವ್ಯಕ್ತಿಯು ಜೀವನದಲ್ಲಿ ಯಾವುದೇ ಆರ್ಥಿಕ ಬಿಕ್ಕಟ್ಟನ್ನು ಎದುರಿಸುವುದಿಲ್ಲ.

ಕಥೆಯ ಪ್ರಕಾರ, ಸಾಗರ ಮಂಥನದ ಸಮಯದಲ್ಲಿ ಹೊರಬಂದ ವಿಷದಿಂದ ಭೂಮಿಯನ್ನು ರಕ್ಷಿಸಲು ಶಿವನು ವಿಷವನ್ನು ಕುಡಿದರು. ಈ ವಿಷದ ಪ್ರಭಾವದಿಂದ ಅವರ ಗಂಟಲು ನೀಲಿ ಬಣ್ಣಕ್ಕೆ ತಿರುಗಿತು ಮತ್ತು ಇಡೀ ದೇಹವು ತುಂಬಾ ಬಿಸಿಯಾಗಿತ್ತು. ಇದರಿಂದ ಸುತ್ತಲಿನ ಪರಿಸರವೂ ಹೊತ್ತಿ ಉರಿಯತೊಡಗಿತು. ಬಿಲ್ವಪತ್ರೆಯು ವಿಷದ ಪರಿಣಾಮವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಎಲ್ಲಾ ದೇವತೆಗಳು ಶಿವನಿಗೆ ಬಿಲ್ವಪತ್ರೆ ತಿನ್ನಿಸಲು ಪ್ರಾರಂಭಿಸಿದರು. ಬಿಲ್ವಪತ್ರೆಯ ಜೊತೆಗೆ ಶಿವನನ್ನು ತಂಪಾಗಿಸಲು ನೀರನ್ನು ಸಹ ಅರ್ಪಿಸುತ್ತಾರೆ. ಬಿಲ್ವಪತ್ರೆ ಮತ್ತು ನೀರಿನ ಪ್ರಭಾವದಿಂದ ಶಿವನ ದೇಹದಲ್ಲಿ ಉಂಟಾದ ಶಾಖವು ಶಾಂತವಾಯಿತು. ಅಂದಿನಿಂದ ಬಿಲ್ವಪತ್ರೆ ಮತ್ತು ನೀರನ್ನು ಅರ್ಪಿಸುವ ಸಂಪ್ರದಾಯವಿದೆ.

ಇದನ್ನೂ ಓದಿ: Aghori Baba: ಕರಾಳ ರಾತ್ರಿ, ತಂತ್ರ-ಮಂತ್ರ.. ಶವ ತಿನ್ನುತ್ತಾ ಶಿವಾರಾಧನೆ.. ಹೀಗಿರುತ್ತೆ ಅಘೋರ ಸಾಧನ.!

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News