Astro Tips: ಹಳೆಯ ಪೊರಕೆ ಎಸೆಯುವ ಮೊದಲು ಈ ವಿಷಯ ತಿಳಿದುಕೊಳ್ಳಿರಿ!

ಹಳೆಯ ಮತ್ತು ಹೊಸ ಪೊರಕೆಯ ಸಲಹೆಗಳು: ಹಿಂದೂ ಧರ್ಮದಲ್ಲಿ ತಾಯಿ ಲಕ್ಷ್ಮಿದೇವಿ ಪೊರಕೆಯಲ್ಲಿ ವಾಸಿಸುತ್ತಾಳೆ ಎಂದು ನಂಬಲಾಗಿದೆ. ಪೊರಕೆ ಮನೆಯಲ್ಲಿರುವ ಕೊಳೆಯನ್ನು ತೆಗೆದುಹಾಕುವುದು ಮಾತ್ರವಲ್ಲದೆ ನಕಾರಾತ್ಮಕತೆ ಮತ್ತು ದುರಾದೃಷ್ಟವನ್ನು ತೆಗೆದುಹಾಕುತ್ತದೆ. ಪೊರಕೆಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ, ಇದನ್ನು ಅಳವಡಿಸಿಕೊಂಡರೆ ಹಣದ ಕೊರತೆ ನಿಮ್ಮನ್ನು ಕಾಡುವುದಿಲ್ಲ.

Written by - Puttaraj K Alur | Last Updated : Jul 4, 2023, 09:11 PM IST
  • ಹಿಂದೂ ಧರ್ಮದಲ್ಲಿ ತಾಯಿ ಲಕ್ಷ್ಮಿದೇವಿಯು ಪೊರಕೆಯಲ್ಲಿ ವಾಸಿಸುತ್ತಾಳೆಂದು ನಂಬಲಾಗಿದೆ
  • ಶುಕ್ರವಾರ & ಗುರುವಾರ ಲಕ್ಷ್ಮಿದೇವಿಯ ಆರಾಧನೆಯ ದಿನಗಳಾಗಿದ್ದು, ಆ ದಿನ ಹಳೆಯ ಪೊರಕೆ ಎಸೆಯಬಾರದು
  • ಧರ್ಮಗ್ರಂಥಗಳ ಪ್ರಕಾರ ಹಳೆಯ ಪೊರಕೆಯನ್ನು ಸುಟ್ಟರೆ ಮನೆಯಲ್ಲಿ ಬಡತನ ನೆಲೆಸುತ್ತದೆಂದು ಹೇಳಲಾಗುತ್ತದೆ
Astro Tips: ಹಳೆಯ ಪೊರಕೆ ಎಸೆಯುವ ಮೊದಲು ಈ ವಿಷಯ ತಿಳಿದುಕೊಳ್ಳಿರಿ!   title=
ಹಳೆಯ ಮತ್ತು ಹೊಸ ಪೊರಕೆಯ ಸಲಹೆಗಳು

ನವದೆಹಲಿ: ಹಿಂದೂ ಧರ್ಮದಲ್ಲಿ ತಾಯಿ ಲಕ್ಷ್ಮಿದೇವಿ ಪೊರಕೆಯಲ್ಲಿ ವಾಸಿಸುತ್ತಾಳೆ ಎಂದು ನಂಬಲಾಗಿದೆ. ಹೀಗಾಗಿಯೇ ಪಾದಗಳಿಂದ ಪೊರಕೆಯನ್ನು ಮುಟ್ಟುವುದಿಲ್ಲ. ಪೊರಕೆ ಮನೆಯನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ, ಜೊತೆಗೆ ಬಡತನವನ್ನು ದೂರವಿರಿಸುತ್ತದೆ. ತಾಯಿ ಲಕ್ಷ್ಮಿದೇವಿಯ ಸ್ವಭಾವವು ಚಂಚಲವಾಗಿದೆ, ಅವಳು ಒಂದೇ ಮನೆಯಲ್ಲಿ ಹೆಚ್ಚು ಕಾಲ ಇರುವುದಿಲ್ಲವೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಪೊರಕೆ ವಿಷಯದಲ್ಲಿ ಅನೇಕರು ತಪ್ಪುಗಳನ್ನು ಮಾಡುತ್ತಾರೆ. ಇದರಿಂದಾಗಿ ತಾಯಿ ಲಕ್ಷ್ಮಿದೇವಿ ಕೋಪಗೊಂಡು ಆ ಮನೆ ಬಿಟ್ಟು ಹೋಗುತ್ತಾಳೆ.

ಇಂತಹ ಮನೆಯಲ್ಲಿ ಹಣಕ್ಕೆ ಸಂಬಂಧಿಸಿದ ಸಮಸ್ಯೆ ಯಾವಾಗಲೂ ಇರುತ್ತದೆ. ಇದಕ್ಕಾಗಿಯೇ ಪೊರಕೆಗೆ ಸಂಬಂಧಿಸಿದ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ವಾಸ್ತು ಮತ್ತು ಜ್ಯೋತಿಷ್ಯದಲ್ಲಿ ಪೊರಕೆಗೆ ಸಂಬಂಧಿಸಿದಂತೆ ಕೆಲವು ಮುನ್ನೆಚ್ಚರಿಕೆ ಮತ್ತು ಕ್ರಮಗಳ ಬಗ್ಗೆ ವಿವರಿಸಲಾಗಿದೆ. ಇವುಗಳನ್ನು ಅಳವಡಿಸಿಕೊಂಡರೆ ಲಕ್ಷ್ಮಿದೇವಿಯ ಆಶೀರ್ವಾದ ಪಡೆಯಬಹುದು.

ಇದನ್ನೂ ಓದಿ: Guru Purnima 2023: ಇಂದು ಮುಸ್ಸಂಜೆ ವೇಳೆ ಈ ಕೆಲಸ ಮಾಡಿದರೆ ವರ್ಷವಿಡೀ ಇರುತ್ತೆ ಲಕ್ಷ್ಮೀ ಕೃಪಾಕಟಾಕ್ಷ

ಪೊರಕೆಗೆ ಸಂಬಂಧಿಸಿದ ನಿಯಮಗಳು

- ವಾಸ್ತು ಶಾಸ್ತ್ರದ ಪ್ರಕಾರ ಶನಿವಾರ ಯಾವಾಗಲೂ ಹೊಸ ಪೊರಕೆಯನ್ನು ಬಳಸಬೇಕು. ಹೊಸ ಪೊರಕೆಯನ್ನು ಬಳಸಲು ಶನಿವಾರವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರಿಂದ ಲಕ್ಷ್ಮಿದೇವಿಯು ಮನೆಯಲ್ಲಿ ನೆಲೆಸುತ್ತಾಳೆ ಮತ್ತು ಸಂತೋಷ-ಸಮೃದ್ಧಿಯನ್ನು ತರುತ್ತಾಳೆ ಎಂದು ಹೇಳಲಾಗುತ್ತದೆ.

- ಶಾಸ್ತ್ರಗಳ ಪ್ರಕಾರ ಹಳೆಯ ಪೊರಕೆಯನ್ನು ಎಸೆಯಲು ಕೆಲವು ನಿಯಮಗಳಿವೆ. ಇದನ್ನು ಮುಖ್ಯವಾಗಿ ನೆನಪಿನಲ್ಲಿಟ್ಟುಕೊಳ್ಳಬೇಕೆಂದು ವಾಸ್ತು ತಜ್ಞರು ಹೇಳುತ್ತಾರೆ. ನೀವು ಹಳೆಯ ಪೊರಕೆಯನ್ನು ಗುರುವಾರ ಅಥವಾ ಶುಕ್ರವಾರ ಎಸೆಯಬಾರದು. ಏಕೆಂದರೆ ಶುಕ್ರವಾರ ಮತ್ತು ಗುರುವಾರ ಲಕ್ಷ್ಮಿದೇವಿಯ ಆರಾಧನೆಯ ದಿನಗಳು. ಈ ದಿನ ಪೊರಕೆಯನ್ನು ಹೊರಗೆ ಎಸೆದರೆ ತಾಯಿ ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳೆ.

- ನೀವು ಮನೆಯಲ್ಲಿ ಹೊಸ ಪೊರಕೆಯನ್ನು ತಂದಿದ್ದರೆ, ಹಳೆಯ ಪೊರಕೆಯನ್ನು ತಕ್ಷಣಕ್ಕೆ ಎಸೆಯಬೇಡಿ. ಹೀಗೆ ಮಾಡುವುದು ಅಶುಭವೆಂದು ಪರಿಗಣಿಸಲಾಗಿದೆ. ಶನಿವಾರ, ಅಮವಾಸ್ಯೆ ಅಥವಾ ಹೋಲಿಕಾ ದಹನದ ದಿನ ಪೊರಕೆ ಎಸೆಯಲು ಅತ್ಯುತ್ತಮ ದಿನವೆಂದು ಪರಿಗಣಿಸಲಾಗಿದೆ.

- ಧರ್ಮಗ್ರಂಥಗಳ ಪ್ರಕಾರ ಹಳೆಯ ಪೊರಕೆಯನ್ನು ಎಂದಿಗೂ ಸುಡಬಾರದು. ಇದರಿಂದ ಮನೆಯಲ್ಲಿ ಬಡತನ ನೆಲೆಸುತ್ತದೆಂದು ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ಮನೆಯ ಸದಸ್ಯರು ಒಂದೊಂದು ರೂಪಾಯಿಗೂ ಹಾತೊರೆಯಬೇಕಾಗುತ್ತದೆ.

ಇದನ್ನೂ ಓದಿ: Astro Tips: ವ್ಯಕ್ತಿಯ ಜಾತಕದಲ್ಲಿ ಗ್ರಹಗಳ ಈ ಕೆಟ್ಟ ದೆಸೆ ಆರ್ಥಿಕ ಮುಗ್ಗಟ್ಟಿಗೆ ಕಾರಣವಾಗುತ್ತವೆ!

ಅದೃಷ್ಟಕ್ಕೆ ಹೀಗೆ ಮಾಡಿರಿ  

- ಶಾಸ್ತ್ರಗಳ ಪ್ರಕಾರ ಯಾವುದೇ ಒಬ್ಬ ವ್ಯಕ್ತಿಯು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದರೆ, ಸಣ್ಣ ಚಿನ್ನದ ಪೊರಕೆ ಮಾಡಿ ಅದನ್ನು ಗುರುವಾರ ದೇವಸ್ಥಾನದಲ್ಲಿ ಇರಿಸಿ. ಇದರ ನಂತರ ಅದನ್ನು ಎತ್ತಿಕೊಂಡು ಸುರಕ್ಷಿತವಾಗಿ ಇರಿಸಿ. ಇದರಿಂದ ನಿಮ್ಮ ಮನೆಯ ತಿಜೋರಿ ಯಾವಾಗಲೂ ಹಣದಿಂದ ತುಂಬಿ ತುಳುಕುತ್ತಿರುತ್ತದೆ.  

- ಧರ್ಮಗ್ರಂಥಗಳ ಪ್ರಕಾರ ಯಾವುದೇ ಪ್ರಾಣಿಯನ್ನು ಪೊರಕೆಯಿಂದ ಹೊಡೆದು ಕೊಲ್ಲಬಾರದು. ಇದು ಕೆಟ್ಟ ಶಕುನವೆಂದು ಪರಿಗಣಿಸಲಾಗಿದೆ. ಇದರಿಂದ ಮನೆಯಲ್ಲಿ ಬಡತನ ಬರುತ್ತದೆ ಎಂದು ಹೇಳಲಾಗುತ್ತದೆ.

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News