ಡಿಸೆಂಬರ್‌ನಲ್ಲಿ ಈ ರಾಶಿಯವರ ಮೇಲೆ ಬೀಳುವುದು ಶನಿಯ ವಕ್ರ ದೃಷ್ಟಿ .! ಎದುರಾಗುವುದು ಕಷ್ಟ ನಷ್ಟಗಳ ಸರಮಾಲೆ .!

ಯಾರ ಜಾತಕದಲ್ಲಿ ಶನಿ ದೆಸೆ ನಡೆಯುತ್ತಿರುತ್ತದೆಯೋ ಅವರ ಜೀವನದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿ ಬಿಡುತ್ತದೆ. ಯಾವ ಕೆಲಸಕ್ಕೆ ಕೈ ಹಾಕಿದರೂ ಕೈ ಸುಟ್ಟುಕೊಳ್ಳಬೇಕಾಗುತ್ತದೆ.    

Written by - Ranjitha R K | Last Updated : Dec 2, 2022, 09:57 AM IST
  • ಶನಿ ದೇವರಿಗೆ ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನವಿದೆ.
  • ಶನಿ ಮಹಾತ್ಮ ಎಂದರೆ ಭಕ್ತಿ ಮೂಡುವುದರ ಜೊತೆಗೆ ಭಯ ಕೂಡಾ ಕಾಡುತ್ತದೆ.
  • ಶನಿ ದೇವನನ್ನು ಕರ್ಮ ಫಲದಾತ ಎಂದು ಕರೆಯಲಾಗುತ್ತದೆ.
ಡಿಸೆಂಬರ್‌ನಲ್ಲಿ ಈ ರಾಶಿಯವರ ಮೇಲೆ ಬೀಳುವುದು ಶನಿಯ ವಕ್ರ ದೃಷ್ಟಿ .! ಎದುರಾಗುವುದು ಕಷ್ಟ ನಷ್ಟಗಳ ಸರಮಾಲೆ .!  title=
Saturn Transit 2022-2023

ಬೆಂಗಳೂರು : ಶನಿ ದೇವರಿಗೆ ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನವಿದೆ. ಶನಿ ಮಹಾತ್ಮ ಎಂದ ಕೂಡಲೇ ಭಕ್ತಿ ಮೂಡುವುದರ ಜೊತೆಗೆ ಭಯ ಕೂಡಾ ಕಾಡುತ್ತದೆ. ಶನಿ ದೇವನನ್ನು ಕರ್ಮ ಫಲದಾತ ಎಂದು ಕರೆಯಲಾಗುತ್ತದೆ. ನಾವು ಮಾಡುವ ಕರ್ಮಕ್ಕೆ ಅನುಗುಣವಾಗಿ ಶನಿಮಹಾತ್ಮ ಫಲ ನೀಡುತ್ತಾನೆ ಎನ್ನುವುದು ನಂಬಿಕೆ. ಜನ್ಮ ಜಾತಕದಲ್ಲಿ ಶನಿಯ ಸ್ಥಾನವು ಬಹಳ ಮುಖ್ಯವಾಗಿರುತ್ತದೆ. ಯಾರ ಜಾತಕದಲ್ಲಿ ಶನಿ ದೆಸೆ ನಡೆಯುತ್ತಿರುತ್ತದೆಯೋ ಅವರ ಜೀವನದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿ ಬಿಡುತ್ತದೆ. ಯಾವ ಕೆಲಸಕ್ಕೆ ಕೈ ಹಾಕಿದರೂ ಕೈ ಸುಟ್ಟುಕೊಳ್ಳಬೇಕಾಗುತ್ತದೆ.  

2023 ರ ಆರಂಭದಲ್ಲಿ, ಶನಿಯು ಮಕರ ರಾಶಿಯಿಂದ ಹೊರಬಂದು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ಶನಿ ಸಂಕ್ರಮಣದೊಂದಿಗೆ, ಕೆಲವು ರಾಶಿಯವರಿಗೆ ಶನಿ ಸಾಡೇ ಸಾತಿಯಿಂದ ಮುಕ್ತಿ ಸಿಕ್ಕಿದರೆ ಇನ್ನು ಕೆಲವು ರಾಶಿಯವರಿಗೆ ಏಳೂವರೆ ಶನಿ ದೆಸೆ ಆರಂಭವಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜನವರಿ 2023 ರಲ್ಲಿ ಶನಿ ತನ್ನ ರಾಶಿಯನ್ನು ಪರಿವರ್ತಿಸಿಕೊಳ್ಳಲಿದ್ದಾನೆ. ಆದರೆ ಅದರ ಪರಿಣಾಮ ಅದಕ್ಕೂ  ಮುನ್ನವೇ ಕೆಲವೊಂದು ರಾಶಿಯವರು ಮೇಲೆ ಆಗಲಿದೆ. ಹಾಗಾಗಿ, ಈ ರಾಶಿಯವರು ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗುತ್ತದೆ. 

ಇದನ್ನೂ ಓದಿ : Bedroom Vastu Tips : ವೈವಾಹಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಬೆಡ್ ರೂಮ್ ಅಲ್ಲಿರುವ ಈ ವಸ್ತುಗಳು 

ಡಿಸೆಂಬರ್ 2022 ರಲ್ಲಿ ಯಾರ ಮೇಲೆ ಬೀಳುವುದು ಶನಿಯ ವಕ್ರ ದೃಷ್ಟಿ : 
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಡಿಸೆಂಬರ್ ತಿಂಗಳಿನಲ್ಲಿ ಶನಿಯು ಮಕರ ರಾಶಿಯಲ್ಲಿ ನೇರ ಚಲನೆಯಲ್ಲಿರುತ್ತಾನೆ. ಆದರೆ ಈ ಹೊತ್ತಿನಲ್ಲಿ ಶನಿಯ ವಕ್ರ ದೃಷ್ಟಿ ಕೆಲವೊಂದು ರಾಶಿಗಳ ಮೇಲಿರುತ್ತದೆ. ಶನಿಯು ಮಕರ ರಾಶಿಯಲ್ಲಿರುವ ಹೊತ್ತಿನಲ್ಲಿ ಐದು ರಾಶಿಯವರ  ಜೀವನದಲ್ಲಿ ಏಳೂವರೆ ವರ್ಷದ ಶನಿ ದೆಸೆ ನಡೆಯುತ್ತಿರುತ್ತದೆ. ಡಿಸೆಂಬರ್ ತಿಂಗಳಿನಲ್ಲಿ ಕುಂಭ, ಮಕರ ಮತ್ತು ಧನು ರಾಶಿಯವರಿಗೆ ಏಳೂವರೆ ವರ್ಷದ ಶನಿ ದೆಸೆ ನಡೆಯುತ್ತಿರುತ್ತದೆ. ಇದೇ ವೇಳೆ ಶನಿಯ ದೃಷ್ಟಿ ಮಿಥುನ ಮತ್ತು ತುಲಾ ರಾಶಿಯವರ ಮೇಲೆ ಕೂಡಾ ಇರಲಿದೆ. ಶನಿಯ ದೃಷ್ಟಿ ಈ ಐದು ರಾಶಿಯವರ ಮೇಲಿರುವ ಕಾರಣ, ಇವರು ಈ ತಿಂಗಳು ಪೂರ್ತಿ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ವಿಶೇಷವಾಗಿ ಶನಿದೇವನಿಗೆ ಕೋಪ ಬರುವಂತಹ ಯಾವುದೇ ಕೆಲಸಕ್ಕೆ ಕೈ ಹಾಕಲು ಹೋಗಬಾರದು. ಅಂದರೆ ಬಡವರು, ಅಸಹಾಯಕರು, ಕಾರ್ಮಿಕರನ್ನು ಅವಮಾನಿಸಬಾರದು. ಮೂಕ ಪ್ರಾಣಿಗಳನ್ನು ಹಿಂಸಿಸಬಾರದು. ಸುಳ್ಳು, ಮೋಸ, ಅಪ್ರಾಮಾಣಿಕತೆ ಬೇಡವೇ ಬೇಡ. ನಿಮ್ಮ ಮಿ ಕೆಳಗೆ ಯಾರಾದರೂ ದುಡಿಯುತ್ತಿದ್ದರೆ ಅವರಿಗೆ ತೊಂದರೆ ನೀಡಬೇಡಿ. 

ಇದನ್ನೂ ಓದಿ : Perl Disadvantages: ಈ ರಾಶಿಗಳ ಜನರು ಮರೆತೂ ಕೂಡ ಮುತ್ತನ್ನು ಧರಿಸಬಾರದು

ಶನಿಯ  ಪ್ರಕೋಪದಿಂದ ಪಾರಾಗಲು ಇರುವ ಮಾರ್ಗಗಳು
- ಯಾವುದೇ ಕಾರಣಕ್ಕೂ ಯಾರೊಂದಿಗೂ ಅನುಚಿತವಾಗಿ ವರ್ತಿಸಬೇಡಿ. ನಿಯಮಗಳನ್ನು ಮೀರಿ ನಡೆದುಕೊಳ್ಳಬೇಡಿ. ಶಿಸ್ತುಗಳನ್ನು ಪಾಲಿಸಿ. ಸೋಮಾರಿಗಳು, ಅನುಚಿತವಾಗಿ ವರ್ತಿಸುವವರು ಮತ್ತು ನಿಯಮಗಳನ್ನು ಉಲ್ಲಂಘಿಸುವವರೂ ಶನಿಯ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. 
- ಅಂಗವಿಕಲರನ್ನು ಅವಮಾನಿಸಬೇಡಿ. ಅನಗವಿಕಲರಿಗೆ ಯಾವುದೇ ರೀತಿಯಲ್ಲಿಯೂ ತೊಂದರೆ ನೀಡಬೇಡಿ. ಮಹಿಳೆಯರನ್ನು ಗೌರವಿಸಿ. 
 ಅಶ್ವತ್ಥ ಮರದ ಕೆಳಗೆ ಎಳ್ಳೆಣ್ಣೆ ದೀಪವನ್ನು ಬೆಳಗಿಸಿ. 
- ಕಪ್ಪು ಎಳ್ಳು, ಚರ್ಮದ ಪಾದರಕ್ಷೆಗಳು, ಉದ್ದು, ಕಪ್ಪು ಬಟ್ಟೆ, ಕಂಬಳಿ ಮುಂತಾದವುಗಳನ್ನು ಶನಿಗೆ ಸಂಬಂಧಿಸಿದ ವಸ್ತುಗಳು ಎಂದು ಹೇಳಲಾಗುತ್ತದೆ. ಹಾಗಾಗಿ ಈ ವಸ್ತುಗಳನ್ನು ದಾನ ಮಾಡಿ.  

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News