ಪ್ರಬಲ ಧನ ಯೋಗದ ಮೂಲಕ 2023ರಲ್ಲಿ ಧನಿಕರಾಗುತ್ತಾರೆ ಈ ನಾಲ್ಕು ರಾಶಿಯವರು

2023 ರಲ್ಲಿ ರೂಪುಗೊಳ್ಳುವ ಧನ ಯೋಗವು 4 ರಾಶಿಯವರನ್ನು ಸಿರಿವಂತರನ್ನಾಗಿ ಮಾಡಲಿದೆ. 2023 ರ ವರ್ಷವು 4 ರಾಶಿಯವರ ಜೀವನದಲ್ಲಿ ಅಪಾರ ಪ್ರಮಾಣದ ಧನ ಲಾಭ ಮತ್ತು ವೃತ್ತಿಜೀವನದಲ್ಲಿ ಪ್ರಗತಿಯನ್ನು ನೀಡಲಿದೆ. 

Written by - Ranjitha R K | Last Updated : Dec 28, 2022, 08:46 AM IST
  • 2023 ರಲ್ಲಿ ಕೆಲವು ಪ್ರಮುಖ ಗ್ರಹಗಳ ಬದಲಾವಣೆಗಳು
  • ಫೆಬ್ರವರಿ ತಿಂಗಳಲ್ಲಿ ನಡೆಯುವ ಗ್ರಹಗಳ ಬದಲಾವಣೆ ವಿಶೇಷ
  • 2023 ರ ಅದೃಷ್ಟದ ರಾಶಿಚಕ್ರ ಚಿಹ್ನೆಗಳು
ಪ್ರಬಲ ಧನ ಯೋಗದ ಮೂಲಕ 2023ರಲ್ಲಿ ಧನಿಕರಾಗುತ್ತಾರೆ ಈ ನಾಲ್ಕು ರಾಶಿಯವರು  title=

ಬೆಂಗಳೂರು : ವೈದಿಕ ಜ್ಯೋತಿಷ್ಯದ ಪ್ರಕಾರ, 2023 ರಲ್ಲಿ ಕೆಲವು ಪ್ರಮುಖ ಗ್ರಹಗಳ ಬದಲಾವಣೆಗಳು ಕಂಡುಬರುತ್ತವೆ. ಇವುಗಳಲ್ಲಿ ಫೆಬ್ರವರಿ ತಿಂಗಳಲ್ಲಿ ನಡೆಯುವ ಗ್ರಹಗಳ ಬದಲಾವಣೆ ವಿಶೇಷವಾಗಿರುತ್ತದೆ. ಫೆಬ್ರವರಿಯಲ್ಲಿ ಬುಧ ಮತ್ತು ಶುಕ್ರ ಸಂಕ್ರಮಣದಿಂದ ಒಂದು ಪ್ರಮುಖ ರಾಜಯೋಗ ನಿರ್ಮಾಣವಾಗಲಿದೆ. ಇದು ಕೆಲವು ರಾಶಿಯವರಿಗೆ ಮಂಗಳಕರವಾಗಿರಲಿದೆ. ಈ ಧನ ಯೋಗವು 4 ರಾಶಿಯವರನ್ನು ಸಿರಿವಂತರನ್ನಾಗಿ ಮಾಡಲಿದೆ. 2023 ರ ವರ್ಷವು 4 ರಾಶಿಯವರ ಜೀವನದಲ್ಲಿ ಅಪಾರ ಪ್ರಮಾಣದ ಧನ ಲಾಭ ಮತ್ತು ವೃತ್ತಿಜೀವನದಲ್ಲಿ ಪ್ರಗತಿಯನ್ನು ನೀಡಲಿದೆ. 

2023 ರ ಅದೃಷ್ಟದ ರಾಶಿಚಕ್ರ ಚಿಹ್ನೆಗಳು :
ಮಿಥುನ ರಾಶಿ : 2023 ರ ವರ್ಷವು ಹಣಕಾಸಿನ ವಿಷಯದಲ್ಲಿ ಮಿಥುನ ರಾಶಿಯವರಿಗೆ ಉತ್ತಮವಾಗಿರಲಿದೆ. 2023 ರಲ್ಲಿ ನಡೆಯಲಿರುವ ಗ್ರಹಗಳ ಸಂಕ್ರಮಣವು ಈ ರಾಶಿಯವರಿಗೆ ದೊಡ್ಡ ಮಟ್ಟದ ಆರ್ಥಿಕ ಲಾಭವನ್ನು ನೀಡಲಿದೆ. ಯಾವ ಮೂಲೆಯಿಂದಲಾದರೂ  ಇದ್ದಕ್ಕಿದ್ದಂತೆ ಹಣ ಸಿಗುತ್ತದೆ. ವಿರೋಧಿಗಳಿಗೆ ಸೋಲಾಗುವುದು. 

ಇದನ್ನೂ ಓದಿ : Rahu Transit 2023: ಮುಂದಿನ ವರ್ಷ ರಾಹು ಸಂಕ್ರಮಣ, ಈ ಒಂದು ರಾಶಿಯ ಮೇಲೆ ಹೆಚ್ಚು ಪರಿಣಾಮ!

ಕನ್ಯಾ ರಾಶಿ : ಮುಂಬರುವ ವರ್ಷವು ಕನ್ಯಾ ರಾಶಿಯವರಿಗೆ ಹಣದ ವಿಷಯದಲ್ಲಿ ಬಹಳ ಮಂಗಳಕರವಾಗಿರುತ್ತದೆ. ಸಾಲ ನೀಡಿರುವ ಹಣ ವರ್ಷದ ಆರಂಭದಿಂದಲೇ ಮರಳಿ ಬರಲಾರಂಭಿಸುತ್ತದೆ. ಉದ್ಯೋಗ ಬದಲಾವಣೆಗೆ ಅವಕಾಶವಿರುತ್ತದೆ. ಹೊಸ ಅವಕಾಶಗಳು  ಉನ್ನತ ಸ್ಥಾನ ಮತ್ತು ಹಣ ಎರಡನ್ನೂ ನೀಡುತ್ತದೆ. 

ಮಕರ ರಾಶಿ : 2023 ರ ಸಮಯವು ಮಕರ ರಾಶಿಯವರನ್ನು ಬಹಳ ಬೇಗನೆ ಸಿರಿವನ್ತರನ್ನಾಗಿ ಮಾಡುತ್ತದೆ. ಈ ರಾಶಿಯಲ್ಲಿಯೇ ರಾಜಯೋಗ  ರೂಪುಗೊಳ್ಳುವುದರಿಂದ ಆದಾಯದಲ್ಲಿ ದೊಡ್ಡ ಮಟ್ಟದ ಹೆಚ್ಚಳವಾಗುತ್ತದೆ. ವ್ಯಾಪಾರಿಗಳಿಗೆ ಲಾಭವಾಗಲಿದೆ. 

ಇದನ್ನೂ ಓದಿ : Horoscope Today: ಈ ರಾಶಿಯವರಿಗೆ ಉದ್ಯೋಗ ಜೊತೆಗೆ ಯಶಸ್ಸು ದೊರೆಯಲಿದೆ

ಧನು ರಾಶಿ : 2023 ರಲ್ಲಿ ಆಗುತ್ತಿರುವ ಧನ ಯೋಗವು ಧನು ರಾಶಿಯವರಿಗೆ ಅಪಾರ ಆರ್ಥಿಕ ಲಾಭವನ್ನು ನೀಡುತ್ತದೆ. ಶನಿದೇವನ ವಿಶೇಷ ಕೃಪೆ ಈ ರಾಶಿಯವರ ಮೇಲೆ ಇರಲಿದೆ. ಹೂಡಿಕೆಯಿಂದ ಲಾಭವಾಗಲಿದೆ. ಅಪಾಯಕಾರಿ ಹೂಡಿಕೆಯಿಂದಲೂ ಲಾಭವಾಗುವ ಸಾಧ್ಯತೆಗಳಿವೆ. ಹೊಸ ಆಸ್ತಿ ಮತ್ತು ವಾಹನ ಖರೀದಿಸಬಹುದು. 

 

 ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News