Guru Margi: ಹೊಸ ವರ್ಷದ ಮೊದಲ ದಿನದಿಂದಲೇ ಹೆಚ್ಚಾಗಲಿದೆ ಈ ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್

Guru Margi: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಒಂದು ಗ್ರಹದ ಸಂಚಾರದಲ್ಲಿನ ಸಣ್ಣ ಬದಲಾವಣೆಯೂ ಸಹ ಎಲ್ಲಾ 12 ರಾಶಿಯವರ ಮೇಲೆ ಮಃತ್ವದ ಪರಿಣಾಮವನ್ನು ಬೀರುತ್ತದೆ. ಪ್ರಸ್ತುತ, ಗ್ರಹಗಳಲ್ಲಿ ಅತ್ಯಂತ ಮಂಗಳಕರ ಗ್ರಹ ಎಂದು ಕರೆಯಲ್ಪಡುವ ಗುರು ಹಿಮ್ಮುಖವಾಗಿ ಚಲಿಸುತ್ತಿದ್ದು, ಈ ವರ್ಷಾಂತ್ಯದಲ್ಲಿ ತನ್ನ ನೇರ ಚಲನೆಯನ್ನು ಆರಂಭಿಸಲಿದ್ದಾನೆ. 

Written by - Yashaswini V | Last Updated : Oct 31, 2023, 08:03 AM IST
  • ಸದ್ಯ ಹಿಮ್ಮುಖವಾಗಿ ಚಲಿಸುತ್ತಿರುವ ದೇವಗುರು ಬೃಹಸ್ಪತಿ
  • ಈ ವರ್ಷಾಂತ್ಯದಲ್ಲಿ 31 ಡಿಸೆಂಬರ್ 2023ರಂದು ಮಾರ್ಗಿಯಾಗಲಿದ್ದಾನೆ ಗುರು
  • ಗುರುವಿನ ನೇರ ಸಂಚಾರದಿಂದ ಮೂರು ರಾಶಿಯವರ ಬಾಳೇ ಬಂಗಾರವಾಗಲಿದೆ
Guru Margi: ಹೊಸ ವರ್ಷದ ಮೊದಲ ದಿನದಿಂದಲೇ ಹೆಚ್ಚಾಗಲಿದೆ ಈ ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್ title=

Margi Guru Effect: ಜ್ಯೋತಿಷ್ಯ ಶಾಸ್ತ್ರದಲ್ಲಿ ದೇವಗುರು ಸ್ಥಾನಮಾನವನ್ನು ಪಡೆದಿರುವ ಬೃಹಸ್ಪತಿ ಸದ್ಯ ಹಿಮ್ಮುಖ ಸ್ಥಿತಿಯಲ್ಲಿ ಚಲಿಸುತ್ತಿದ್ದಾನೆ. ಈ ವರ್ಷಾಂತ್ಯದಲ್ಲಿ ಎಂದರೆ ಡಿಸೆಂಬರ್ 31, 2023ರಂದು ಗುರು  ಮೇಷ ರಾಶಿಯಲ್ಲಿ ಮಾರ್ಗಿಯಾಗಲಿದ್ದಾನೆ. ಮಾರ್ಗಿ ಗುರು ಎಲ್ಲಾ 12 ರಾಶಿಯವರ ಜೀವನದ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತಾನೆ. ಆದಾಗ್ಯೂ, ಈ ಸಮಯದಲ್ಲಿ ಕೆಲವು ರಾಶಿಯವರಿಗೆ ಸುವರ್ಣ ಯುಗ ಎಂದು ಹೇಳಲಾಗುತ್ತಿದೆ.

ಹೊಸ ವರ್ಷದ ಮೊದಲ ದಿನದಿಂದಲೇ ಹೆಚ್ಚಾಗಲಿದೆ ಈ ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್: 
ಗುರುವಿನ ನೇರ ಸಂಚಾರದ ಪರಿಣಾಮವಾಗಿ ಮೂರು ರಾಶಿಯವರ ಜೀವನದಲ್ಲಿ ಸುಖ-ಸಂಪತ್ತು ಹರಿದು ಬರಿಗಲಿದೆ. ಗುರುವಿನ ಅನುಗ್ರಹದಿಂದ ಈ ರಾಶಿಯವರಿಗೆ ಹಠಾತ್ ಧನಲಾಭ ಸಾಧ್ಯತೆಯೂ ಇದ್ದು ಹೊಸ ವರ್ಷದ ಮೊದಲ ದಿನದಿಂದಲೇ ಈ ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ನೋಡುವುದಾದರೆ.... 

2024ರ ಮೊದಲ ದಿನದಿಂದಲೇ ಮೂರು ರಾಶಿಯವರ ಜೀವನದಲ್ಲಿ ಹಠಾತ್ ಧನಲಾಭ, ಸುಖ-ಸಂಪತ್ತು ಕರುಣಿಸಲಿದ್ದಾನೆ ಮಾರ್ಗಿ ಗುರು:- 
ಮಿಥುನ ರಾಶಿ: 

ದೇವಗುರು ಬೃಹಸ್ಪತಿಯ ನೇರ ಸಂಚಾರವು ಮಿಥುನ ರಾಶಿಯವರಿಗೆ ಆದಾಯದ ಹೊಸ ಮೂಲಗಳನ್ನು ಸೃಷ್ಟಿಸಲಿದೆ. ಈ ಸಮಯದಲ್ಲಿ ನಿಮ್ಮ ದೀರ್ಘ ಸಮಯದಿಂದ ಬಾಕಿ ಉಳಿದಿದ್ದ ಕೆಲಸಗಳು ಪೂರ್ಣಗೊಳ್ಳಲಿದ್ದು ಅನಿರೀಕ್ಷಿತ ಧನ ಲಾಭವನ್ನು ಪಡೆಯುವಿರಿ. ವಿವಾಹಿತರು ನಿಮ್ಮ ಪ್ರತಿ ಕೆಲಸದಲ್ಲೂ ನಿಮ್ಮ ಸಂಗಾತಿಯ ಸಂಪೂರ್ಣ ಬೆಂಬಲವನ್ನು ಪಡೆಯುವಿರಿ. ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಉದ್ಯೋಗ, ಸರ್ಕಾರಿ ನೌಕರರಿಗೆ ನಿಮ್ಮ ಇಚ್ಚೆಯ ಸ್ಥಳಕ್ಕೆ ವರ್ಗಾವಣೆ ಸಾಧ್ಯತೆಯೂ ಇದೆ. 

ಇದನ್ನೂ ಓದಿ- November Grah Gochar: ನವೆಂಬರ್‌ನಲ್ಲಿ 5 ಪ್ರಮುಖ ಗ್ರಹಗಳ ಸಂಚಾರದಲ್ಲಿ ಬದಲಾವಣೆ, ಈ ರಾಶಿಯವರಿಗೆ ವಿಶೇಷ ಲಾಭ

ಕರ್ಕಾಟಕ ರಾಶಿ: 
ಮಾರ್ಗಿ ಗುರು ಕರ್ಕಾಟಕ ರಾಶಿಯವರಿಗೆ ಹಲವು ರೀತಿಯಲ್ಲಿ ಪ್ರಯೋಜನವನ್ನು ನೀಡಲಿದ್ದಾನೆ. ಅದರಲ್ಲೂ ವಿಶೇಷವಾಗಿ, ಕರ್ಕಾಟಕ ರಾಶಿಯವರಿಗೆ ಉದ್ಯೋಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇದನ್ನು ಗೋಲ್ಡನ್ ಟೈಮ್ ಎಂತಲೇ ಹೇಳಲಾಗುತ್ತಿದ್ದು, ಉದ್ಯೋಗಸ್ಥರಿಗೆ ಬಡ್ತಿ ಯೋಗವಿದೆ. ಹೊಸದಾಗಿ ಕೆಲಸಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ನೀವು ಬಯಸಿದಂತೆ ಆಫರ್ ಲೆಟರ್ ಕೈ ಸೇರಬಹುದು. ವ್ಯಾಪಾರ-ವ್ಯವಹಾರಗಳಲ್ಲಿ ಪ್ರಗತಿ ಜೊತೆಗೆ ಬಂಪರ್ ಧನ ಲಾಭವನ್ನು ಸಹ ನಿರೀಕ್ಷಿಸಬಹುದು. 

ಇದನ್ನೂ ಓದಿ- ತಿಂಗಳ ಅಂತ್ಯದಲ್ಲಿ ತೆರೆಯುವುದು ಈ ರಾಶಿಯವರ ಅದೃಷ್ಟದ ಬಾಗಿಲು ! ಮುಂದಿನ 18 ತಿಂಗಳು ಧನ ಸಂಪತ್ತಿಗೆ ಇಲ್ಲ ಕೊರತೆ

ಧನು ರಾಶಿ:
ಗುರು ನೇರ ಸಂಚಾರದ ಪ್ರಭಾವದಿಂದಾಗಿ ಧನೌ ರಾಶಿಯವರು ಉದ್ಯೋಗ ರಂಗದಲ್ಲಿ ಮಾತ್ರವಲ್ಲದೆ ವೈಯಕ್ತಿಕ ಬದುಕಿನಲ್ಲಿಯೂ ಸಾಕಷ್ಟು ಪ್ರಯೋಜನವನ್ನು ಪಡೆಯಲಿದ್ದಾರೆ. ಈ ಸಮಯದಲ್ಲಿ ಉದ್ಯೋಗದಲ್ಲಿ ಪ್ರಮೋಷನ್ ಜೊತೆಗೆ ಅನಿರೀಕ್ಷಿತ ಹಣಕಾಸಿನ ಲಾಭವನ್ನು ನಿರೀಕ್ಷಿಸಬಹುದು. ನೀವು ಭೂಮಿ ಕೊಳ್ಳಲು ಯೋಚಿಸುತ್ತಿದ್ದರೆ ಈ ಸಮಯ ಅತ್ಯುತ್ತಮವಾಗಿದ್ದು, ಹೊಸ ಮನೆ, ವಾಹನ ಖರೀದಿಸುವ ಯೋಗವಿದೆ. ನವ ವಿವಾಹಿತರಿಗೆ ಸಂತಾನ ಭಾಗ್ಯವೂ ಇದೆ. ಒಟ್ಟಾರೆಯಾಗಿ ಇದು ನಿಮಗೆ ಬಂಗಾರದಂತಹ ಸಮಯ ಎಂತಲೇ ಹೇಳಬಹುದು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News