ಮುಂದಿನ ಶನಿವಾರದಿಂದ ಈ ರಾಶಿಯವರ ಮೇಲೆ ಲಕ್ಷ್ಮೀ ಕೃಪೆ ! ಒಲಿದು ಬರುವುದು ಕುಬೇರ ಖಜಾನೆ !

Sharad Purnima Gajkesari Yoga:ಈ ಬಾರಿಯ ಶರದ್ ಪೂರ್ಣಿಮೆಯ ಸಂದರ್ಭದಲ್ಲಿ ವರ್ಷದ ಕೊನೆಯ ಚಂದ್ರಗ್ರಹಣ ಕೂಡಾ ಸಂಭವಿಸಲಿದೆ.   ಈ ಬಾರಿ ಶರದ್ ಪೂರ್ಣಿಮೆಯ ದಿನದಂದು ಅತ್ಯಂತ ಅಪರೂಪದ  ಯೋಗಗಳು ರೂಪುಗೊಳ್ಳುತ್ತಿವೆ.  

Written by - Ranjitha R K | Last Updated : Oct 24, 2023, 04:17 PM IST
  • ಅಕ್ಟೋಬರ್ 28 ರಂದು ಅಶ್ವಿನಿ ಮಾಸದ ಹುಣ್ಣಿಮೆ ಬರುತ್ತದೆ.
  • ಇದನ್ನು ಶರದ್ ಪೂರ್ಣಿಮಾ ಎಂದು ಕರೆಯಲಾಗುತ್ತದೆ.
  • ಶರದ್ ಪೂರ್ಣಿಮೆಯ ಸಂದರ್ಭದಲ್ಲಿ ವರ್ಷದ ಕೊನೆಯ ಚಂದ್ರಗ್ರಹಣ
ಮುಂದಿನ ಶನಿವಾರದಿಂದ ಈ ರಾಶಿಯವರ ಮೇಲೆ ಲಕ್ಷ್ಮೀ ಕೃಪೆ ! ಒಲಿದು ಬರುವುದು ಕುಬೇರ ಖಜಾನೆ !  title=

Sharad Purnima Gajkesari Yoga : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿ ಅಕ್ಟೋಬರ್ 28 ರಂದು ಅಶ್ವಿನಿ ಮಾಸದ ಹುಣ್ಣಿಮೆ ಬರುತ್ತದೆ. ಇದನ್ನು ಶರದ್ ಪೂರ್ಣಿಮಾ ಎಂದು ಕರೆಯಲಾಗುತ್ತದೆ. ಶರದ್ ಪೂರ್ಣಿಮೆಯ ವಿಶೇಷ ಮಹತ್ವವನ್ನು ಹಿಂದೂ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಈ ಬಾರಿಯ ಶರದ್ ಪೂರ್ಣಿಮೆಯ ಸಂದರ್ಭದಲ್ಲಿ ವರ್ಷದ ಕೊನೆಯ ಚಂದ್ರಗ್ರಹಣ ಕೂಡಾ ಸಂಭವಿಸಲಿದೆ.   ಈ ಬಾರಿ ಶರದ್ ಪೂರ್ಣಿಮೆಯ ದಿನದಂದು ಅತ್ಯಂತ ಅಪರೂಪದ  ಯೋಗಗಳು ರೂಪುಗೊಳ್ಳುತ್ತಿವೆ.  

30 ವರ್ಷಗಳ ನಂತರ ಶರದ್ ಪೂರ್ಣಿಮೆಯ ದಿನದಂದು ಸಂಭವಿಸಲಿರುವ ಚಂದ್ರಗ್ರಹಣದೊಂದಿಗೆ ಗಜಕೇಸರಿ ಯೋಗವೂ ರೂಪುಗೊಳ್ಳುತ್ತಿದೆ. ಇದು 4 ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದೆ. ಚಂದ್ರಗ್ರಹಣವು ಅಕ್ಟೋಬರ್ 28ರಂದು ರಾತ್ರಿ 11:32 ಕ್ಕೆ ಪ್ರಾರಂಭವಾಗಿ ಮುಂಜಾನೆ  3:36 ಕ್ಕೆ ಕೊನೆಗೊಳ್ಳುತ್ತದೆ.  

ಇದನ್ನೂ ಓದಿ : ಶೀಘ್ರದಲ್ಲೇ ಮಂಗಳನ ಅಂಗಳದಲ್ಲಿ ಗುರು-ಚಂದ್ರರ ಮೈತ್ರಿ, ಶ್ರೀಹರಿ ಲಕ್ಷ್ಮಿ ಕೃಪೆಯಿಂದ ಈ ಜನ ತಿಜೋರಿ ಹಣದಿಂದ ತುಂಬಿ ತುಳುಕಲಿದೆ!

ಯಾರಿಗೆ ಒಲಿದು ಬರುವುದು ಅದೃಷ್ಟ : 
ವೃಷಭ ರಾಶಿ : 

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶರದ್ ಪೂರ್ಣಿಮೆಯ ದಿನದಂದು ಸಂಭವಿಸುವ ಈ ಅಪರೂಪದ ಯೋಗ ವೃಷಭ ರಾಶಿಯ ಜನರ ಜೀವನದ ಮೇಲೆ ಮಂಗಳಕರ ಪರಿಣಾಮವನ್ನು ಬೀರುತ್ತದೆ. ಪರಿಣಾಮವಾಗಿ, ಉದ್ಯೋಗಿಗಳು ಮತ್ತು ವ್ಯಾಪಾರಿಗಳು ಎದುರಿಸುತ್ತಿರುವ ಸಮಸ್ಯೆಗಳು ಕೊನೆಗೊಳ್ಳುತ್ತವೆ. ವೃತ್ತಿಯಲ್ಲಿ ಪ್ರಗತಿಯ ಹಾದಿಗಳು ತೆರೆದುಕೊಳ್ಳುತ್ತವೆ.  ವೇತನ ಹೆಚ್ಚಾಗುತ್ತದೆ. ಅನಿರೀಕ್ಷಿತ ಹಣ ಹರಿದು ಬರುತ್ತದೆ. 

ಮಿಥುನ ರಾಶಿ : 
ಚಂದ್ರಗ್ರಹಣದಂದು ರೂಪುಗೊಂಡ ಗಜಕೇಸರಿ ಯೋಗವು ಈ ರಾಶಿಯವರಿಗೆ ಬಹಳ ಮಂಗಳಕರವಾಗಿರಲಿದೆ. ಈ ಅವಧಿಯಲ್ಲಿ, ಗ್ರಹಣದ ಶುಭ ಫಲಿತಾಂಶಗಳು ಸಿಗಲಿವೆ. ಇದರಿಂದ ಜನರಿಗೆ ಮಾನಸಿಕ ಒತ್ತಡದಿಂದ ಮುಕ್ತಿ ಸಿಗಲಿದೆ. ದುಂದು ವೆಚ್ಚಕ್ಕೆ ಕಡಿವಾಣ ಬೀಳಲಿದೆ. ಈ ಅವಧಿಯಲ್ಲಿ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಹೆಚ್ಚಿನ ಲಾಭವಾಗುವುದು.

ಇದನ್ನೂ ಓದಿ : ಒಂದು ವರ್ಷದ ಬಳಿಕ ಶುಕ್ರನಿಂದ ನೀಚ್ ಭಂಗ್ ರಾಜಯೋಗ ರಚನೆ, ಶುಕ್ರದೆಸೆಯಿಂದ ಈ ಜನರ ಮೇಲೆ ಭಾರಿ ಕನಕವೃಷ್ಟಿ!

ಕನ್ಯಾರಾಶಿ :
ಜ್ಯೋತಿಷ್ಯದ ಪ್ರಕಾರ, ಕನ್ಯಾ ರಾಶಿಯವರಿಗೆ ಅಕ್ಟೋಬರ್ 28 ಅತ್ಯಂತ ಮಂಗಳಕರ ಮತ್ತು ವಿಶೇಷವಾಗಿರಲಿದೆ. ಈ ದಿನ ಈ ರಾಶಿಯವರು  ಸಾಕಷ್ಟು ಲಾಭವನ್ನು ಗಳಿಸುತ್ತಾರೆ. ಸಾಲದಿಂದ ಶಾಶ್ವತವಾಗಿ ಮುಕ್ತಿ ಸಿಗಲಿದೆ. ಆಸ್ತಿಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ದೀರ್ಘಕಾಲದವರೆಗೆ ಲಾಭವನ್ನು ಗಳಿಸುವಿರಿ. ಒಟ್ಟಾರೆಯಾಗಿ, ಚಂದ್ರಗ್ರಹಣವು ದೈಹಿಕ, ಮಾನಸಿಕ ಮತ್ತು ಆರ್ಥಿಕ ಜೀವನಕ್ಕೆ ಮಂಗಳಕರವಾಗಿರುತ್ತದೆ. 

ಕುಂಭ ರಾಶಿ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕುಂಭ ರಾಶಿಯ ಜನರು ಚಂದ್ರನ ಪ್ರಭಾವದಿಂದ ಪ್ರತಿಯೊಂದು ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಈ ಅವಧಿಯಲ್ಲಿ ವ್ಯಾಪಾರದಲ್ಲಿ ಅಪಾರವಾದ ಆರ್ಥಿಕ ಲಾಭಗಳಿರುತ್ತವೆ. ಿ ಅನಿರೀಕ್ಷಿತವಾಗಿ ಹಣ ಕೈ ಸೇರುತ್ತದೆ. ಪೂರ್ವಿಕರ ಆಸ್ತಿಯಿಂದ ಲಾಭವಾಗುವುದು. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಯಾಗುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಧನಾತ್ಮಕ ಫಲಿತಾಂಶಗಳನ್ನು ಕಾಣಬಹುದು. 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News