Sankranti 2023 : ಮಕರ ಸಂಕ್ರಾಂತಿ ದಿನ ಮನೆಯ ಪೂರ್ವ ದಿಕ್ಕಿನಲ್ಲಿ ಈ ವಸ್ತುವನ್ನಿಟ್ಟರೆ ವರ್ಷ ಪೂರ್ತಿ ಇರುವುದಿಲ್ಲ ಹಣದ ಕೊರತೆ

Sankranti 2023 : ಮಕರ ಸಂಕ್ರಾಂತಿಯ ದಿನ ಕೆಲವು ವಾಸ್ತು ಸಲಹೆಗಳನ್ನು ಅಳವಡಿಸಿಕೊಂಡರೆ ವರ್ಷಪೂರ್ತಿ ಮನೆಯಲ್ಲಿ ಐಶ್ವರ್ಯ ನೆಲೆಯಾಗುತ್ತದೆಯಂತೆ. 

Written by - Ranjitha R K | Last Updated : Jan 12, 2023, 04:13 PM IST
  • ಮಕರ ಸಂಕ್ರಾಂತಿ ಹಬ್ಬವನ್ನು ಈ ಬಾರಿ ಜನವರಿ 14 ರಂದು ಆಚರಿಸಲಾಗುತ್ತದೆ.
  • ಈ ದಿನ ಸೂರ್ಯದೇವನು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ.
  • ಈ ದಿನ ಮಾಡುವ ಸ್ನಾನ, ದಾನ ಮತ್ತು ಪೂಜೆಗೆ ವಿಶೇಷ ಮಹತ್ವವಿದೆ.
Sankranti 2023 : ಮಕರ ಸಂಕ್ರಾಂತಿ ದಿನ ಮನೆಯ ಪೂರ್ವ ದಿಕ್ಕಿನಲ್ಲಿ ಈ ವಸ್ತುವನ್ನಿಟ್ಟರೆ  ವರ್ಷ ಪೂರ್ತಿ ಇರುವುದಿಲ್ಲ ಹಣದ  ಕೊರತೆ  title=

ಬೆಂಗಳೂರು : Sankranti 2023 : ಮಕರ ಸಂಕ್ರಾಂತಿಯ ದಿನದಂದು ಸೂರ್ಯದೇವನು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಆದ್ದರಿಂದ ಈ ಸಂಕ್ರಾಂತಿಯನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಈ ದಿನ ಸೂರ್ಯ ದೇವರ ಪೂಜೆಗೆ ವಿಶೇಷ ಮಹತ್ವವಿದೆ. ಮಕರ ಸಂಕ್ರಾಂತಿಯ ದಿನ ಕೆಲವು ವಾಸ್ತು ಸಲಹೆಗಳನ್ನು ಅಳವಡಿಸಿಕೊಂಡರೆ ವರ್ಷಪೂರ್ತಿ ಮನೆಯಲ್ಲಿ ಐಶ್ವರ್ಯ ನೆಲೆಯಾಗುತ್ತದೆಯಂತೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಕರ ಸಂಕ್ರಾಂತಿಯ ದಿನದಂದು ಮಾಡುವ ಸ್ನಾನ, ದಾನ ಮತ್ತು ಪೂಜೆಗೆ ವಿಶೇಷ ಮಹತ್ವವಿದೆ. ಈ ಶುಭ ಸಮಯದಲ್ಲಿ ಮಾಡುವ ಕೆಲಸವು ಶುಭ ಫಲಿತಾಂಶಗಳನ್ನು ನೀಡುತ್ತದೆ. ಶಾಸ್ತ್ರಗಳ ಪ್ರಕಾರ, ಸೂರ್ಯ ದೇವನು ಶನಿದೇವನ ಮನೆಗೆ ಹೋದಾಗ, ಅವನು ತನ್ನೊಂದಿಗೆ ಕಪ್ಪು ಎಳ್ಳನ್ನು ತೆಗೆದುಕೊಂಡು ಹೋಗುತ್ತಾನೆಯಂತೆ. ಕಪ್ಪು ಎಳ್ಳು ಶನಿಗೆ ಪ್ರಿಯವಾದುದು. . ಈ ಕಾರಣದಿಂದ ಈ ದಿನದ ಕಪ್ಪು ಎಳ್ಳಿನ ಪೂಜೆಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. 

ಇದನ್ನೂ ಓದಿ : Adhika Maas 2023: ಹಲವು ವರ್ಷಗಳ ಬಳಿಕ ಈ ಬಾರಿ ಶ್ರಾವಣ ಮಾಸದಲ್ಲಿರಲಿವೆ 8 ಸೋಮವಾರಗಳು

ಮಕರ ಸಂಕ್ರಾಂತಿಯ ದಿನದಂದು ಈ ವಸ್ತುಗಳನ್ನು ಮನೆಗೆ ತನ್ನಿ :
ಮಕರ ಸಂಕ್ರಾಂತಿಯ ದಿನದಂದು ಮನೆಗೆ ಹಿತ್ತಾಳೆಯ ಸೂರ್ಯನನ್ನು ತರಬೇಕು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಈ ಕಾರಣದಿಂದಾಗಿ, ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ನೆಲೆಯಾಗುತ್ತದೆಯಂತೆ. ಈ ದಿನ ಹಿತ್ತಾಳೆಯ ಸೂರ್ಯನನ್ನು ಮನೆಯ ಪೂರ್ವ ದಿಕ್ಕಿನಲ್ಲಿ ಇರಿಸುವುದರಿಂದ ವರ್ಷ ಪೂತ್ರಿ ಮನೆಯಲ್ಲಿ ಹಣದ ಕೊರತೆ ಎದುರಾಗುವುದೇ ಇಲ್ಲವಂತೆ. 

ಮಕರ ಸಂಕ್ರಾಂತಿಯ  ಪೂಜಾ ವಿಧಾನ ಹೀಗಿರಲಿ : 
ಮಕರ ಸಂಕ್ರಾಂತಿಯ ದಿನದಂದು ಭಗವಾನ್ ವಿಷ್ಣು ಮತ್ತು ಸೂರ್ಯ ದೇವರನ್ನು ಪೂಜಿಸುವುದರಿಂದ ಶುಭ ಫಲಿತಾಂಶ ಸಿಗಲಿದೆ. ಈ ಸಮಯದಲ್ಲಿ ಪೂಜೆ ಮಾಡುವುದರಿಂದ ಅರ್ಧಕ್ಕೆ ನಿಂತಿರುವ ವ್ಯಕ್ತಿಯ ಎಲ್ಲಾ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಈ ದಿನ, ಸೂರ್ಯ ದೇವರಿಗೆ ತಾಮ್ರದ ಪಾತ್ರೆಯಲ್ಲಿ ಕೆಂಪು ಹೂವುಗಳು ಮತ್ತು ಅಕ್ಷತೆ ಅರ್ಪಿಸಬೇಕು. ಹಾಗೆಯೇ ಸೂರ್ಯದೇವನ ಮಂತ್ರವನ್ನು 108 ಬಾರಿ ಜಪಿಸಬೇಕು. ಇಷ್ಟು ಮಾತ್ರವಲ್ಲದೆ ಈ ದಿನ ಎಳ್ಳು, ಹೊದಿಕೆ ಮತ್ತು ಅನ್ನದಾನ ಮಾಡಿದರೆ ವಿಶೇಷ ಫಲ ಸಿಗುತ್ತದೆ. ವೃತ್ತಿಯಲ್ಲಿ ಯಶಸ್ಸು ಸಿಗಬೇಕಾದರೆ ಈ ದಿನದಂದು ನಿರ್ಗತಿಕರಿಗೆ  ಪೊಂಗಲ್ ದಾನ ಮಾಡಬೇಕು. 

ಇದನ್ನೂ ಓದಿ : Rahu Gochar 2023: ಮಂಗಳನ ರಾಶಿಯಲ್ಲಿ ರಾಹು ಗೋಚರ, ಈ ರಾಶಿಗಳ ಜನರ ಜೀವನದಲ್ಲಿ ಹಣದ ಸುರಿಮಳೆ

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News