ವಾರದ ಈ ಮೂರು ದಿನ ಏಕೆ ಉಗುರು ಕತ್ತರಿಸಬಾರದು ಗೊತ್ತೇ!

Astro Tips: ಹಿಂದೂ ಧರ್ಮದಲ್ಲಿ, ಉಗುರು ಕತ್ತರಿಸಲು ಕೂಡ ಕೆಲವು ನಿಯಮಗಳಿವೆ. ಧರ್ಮ ಶಾಸ್ತ್ರಗಳ ಪ್ರಕಾರ, ವಾರದ ಕೆಲವು ದಿನಗಳಂದು ಉಗುರು ಕತ್ತರಿಸುವುದನ್ನು ನಿಷೇಧಿಸಲಾಗಿದೆ. ಹಾಗಿದ್ದರೆ, ಯಾವ ದಿನಗಳಲ್ಲಿ ಉಗುರು ಕತ್ತರಿಸಬಾರದು? ಒಂದೊಮ್ಮೆ ಈ ದಿನಗಳಲ್ಲಿ ಉಗುರು ಕತ್ತರಿಸುವುದರಿಂದ ಏನಾಗುತ್ತದೆ ಎಂದು ತಿಳಿಯಿರಿ. 

Written by - Yashaswini V | Last Updated : Aug 3, 2023, 04:09 PM IST
  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಉಗುರು ಕತ್ತರಿಸಲು ಕೆಲವು ದಿನ ಸೂಕ್ತವಲ್ಲ
  • ವಾರದ ಮೂರು ದಿನಗಳಲ್ಲಿ ಯಾವುದೇ ಕಾರಣಕ್ಕೂ ಉಗುರು ಕತ್ತರಿಸಬಾರದು
  • ಮಾತ್ರವಲ್ಲ, ಈ ದಿನಗಳಂದು ಉಗುರು ಕತ್ತರಿಸುವುದರಿಂದ ಜೀವನದಲ್ಲಿ ನಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ ಎಂದು ಹೇಳಲಾಗುತ್ತದೆ.
ವಾರದ ಈ ಮೂರು ದಿನ  ಏಕೆ ಉಗುರು ಕತ್ತರಿಸಬಾರದು ಗೊತ್ತೇ! title=

Astro Tips For Nail Cutting: ಹಿಂದೂ ಧರ್ಮದಲ್ಲಿ ವಾರದ ಪ್ರತಿ ದಿನಕ್ಕೂ ಸಹ ಅದರದ್ದೇ ಆದ ಮಹತ್ವವಿದೆ. ವಾರದ ಏಳು ದಿನಗಳಿಗೂ ಕೂಡ ವಿಶೇಷ ಪ್ರಾಮುಖ್ಯತೆ ಇದೆ. ಧರ್ಮ ಶಾಸ್ತ್ರಗಳ ಪ್ರಕಾರ, ವಾರದ ಕೆಲವು ದಿನಗಳಂದು ಕೆಲವು ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಅಂತೆಯೇ ವಾರದ ಕೆಲವು ದಿನಗಳಲ್ಲಿ ಉಗುರು ಕತ್ತರಿಸುವುದಂತೆ ಕೂಡ ನಿಷೇಧಿಸಲಾಗಿದೆ. 

ವಾರದ ಈ ಮೂರು ದಿನ ಉಗುರು ಕತ್ತರಿಸಬಾರದು: 
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವಾರದ ಮೂರು ದಿನಗಳಲ್ಲಿ ಯಾವುದೇ ಕಾರಣಕ್ಕೂ ಉಗುರು ಕತ್ತರಿಸಬಾರದು ಎಂದು ಹೇಳಲಾಗುತ್ತದೆ. ಅದರನ್ವಯ ಮಂಗಳವಾರ, ಗುರುವಾರ ಮತ್ತು ಶನಿವಾರದ ದಿನಗಳಲ್ಲಿ ಉಗುರು ಕತ್ತರಿಸುವುದನ್ನು ಅಶುಭ ಎಂದು ಹೇಳಲಾಗುತ್ತದೆ. ಮಾತ್ರವಲ್ಲ, ಈ ದಿನಗಳಂದು ಉಗುರು ಕತ್ತರಿಸುವುದರಿಂದ ಜೀವನದಲ್ಲಿ ನಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ- Astro Tips: ಹಿಟ್ಟು ಕಲಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಟ್ಟರೆ ಆ ಮನೆಯಲ್ಲಿ ಎಂದಿಗೂ ಕಾಡಲ್ಲ ಹಣದ ಕೊರತೆ

ಮಂಗಳವಾರದ ದಿನ ಉಗುರು ಕತ್ತರಿಸುವುದರಿಂದ ಏನಾಗುತ್ತದೆ? 
ಹಿಂದೂ ಧರ್ಮದಲ್ಲಿ ಮಂಗಳವಾರದಂದು ಕೆಲವು ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಇದರನ್ವಯ ಮಂಗಳವಾರದ ದಿನ ಉಗುರು ಕತ್ತರಿಸುವುದು ಕೂಡ ನಿಷಿದ್ಧ. ಮಂಗಳವಾರದಂದು ಉಗುರು ಕತ್ತರಿಸುವುದರಿಂದ ವ್ಯಕ್ತಿಯ ಆತ್ಮವಿಶ್ವಾಸ ಕುಗ್ಗುತ್ತದೆ ಎಂಬ ನಂಬಿಕೆ ಇದೆ. 

ಗುರುವಾರದಂದು ಏಕೆ ಉಗುರು ಕತ್ತರಿಸಬಾರದು? 
ಧರ್ಮ ಶಾಸ್ತ್ರಗಳ ಪ್ರಕಾರ, ಗುರುವಾರದ ದಿನವೂ ಕೂಡ ಉಗುರು ಕತ್ತರಿಸಬಾರದು. ಹಿಂದೂ ಧರ್ಮದಲ್ಲಿ ಗುರುವಾರವನ್ನು ಗುರು ದೇವ, ಸಾಯಿ ಬಾಬಾ, ರಾಘವೇಂದ್ರ ಸ್ವಾಮಿಗೆ ಸಮರ್ಪಿಸಲಾಗಿದೆ. ಈ ದಿನದಂದು ಉಗುರು ಕತ್ತರಿಸುವುದರಿಂದ ಜಾತಕದಲ್ಲಿ ಗುರು ಗ್ರಹ ದುರ್ಬಲಗೊಳ್ಳುತ್ತದೆ. ಮಾತ್ರವಲ್ಲ, ಅಂತಹ ಮನೆಯಲ್ಲಿ ಶಾಂತಿ-ನೆಮ್ಮದಿಗೆ ಭಂಗವಾಗುತ್ತದೆ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ- Surya Gochar 2023: ವರ್ಷದ ಬಳಿಕ ಈ 5 ರಾಶಿಯವರ ಭಾಗ್ಯದ ಬಾಗಿಲು ತೆರೆಯಲಿದ್ದಾನೆ ಸೂರ್ಯ

ಶನಿವಾರವೂ ಉಗುರು ಕತ್ತರಿಸಬಾರದು ಏಕೆ? 
ಮಂಗಳವಾರ, ಗುರುವಾರವನ್ನು ಹೊರತುಪಡಿಸಿ ಶನಿವಾರದ ದಿನವೂ ಕೂಡ ಉಗುರು ಕತ್ತರಿಸುವುದನ್ನು ನಿಷೇಧಿಸಲಾಗಿದೆ. ಶನಿವಾರದಂದು ಉಗುರು ಕತ್ತರಿಸುವುದರಿಂದ ಶನಿ ಹೆಗಲೇರುತ್ತಾನೆ ಎಂದು ಹೇಳಲಾಗುತ್ತದೆ. ಇದರಿಂದ ಕುಟುಂಬದಲ್ಲಿ ಆರ್ಥಿಕ ಸಮಸ್ಯೆಗಳು ಉಲ್ಬಣಗೊಳ್ಳುತ್ತದೆ ಎಂದು ಸಹ ಹೇಳಲಾಗುತ್ತದೆ. ಮಾತ್ರವಲ್ಲ, ಶನಿವಾರದ ದಿನ ಉಗುರು ಕತ್ತರಿಸುವುದರಿಂದ ಸಹೋದರರ ನಡುವೆ ಬಿರುಕು ಮೂಡುತ್ತದೆ ಎಂತಲೂ ಹೇಳಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News