Daan Niyam: ದಾನ ಮಾಡುವುದಕ್ಕಿಂತ ಶ್ರೇಷ್ಠವಾದ ಪುಣ್ಯದ ಕೆಲಸ ಮತ್ತೊಂದಿಲ್ಲ. ಪ್ರತಿಯೊಬ್ಬರೂ ತಮ್ಮ ಕೈಲಾದ ಮಟ್ಟಿಗೆ ದಾನ ಮಾಡುವುದರಿಂದ ಒಳ್ಳೇ ಫಲಗಳನ್ನು ಪಡೆಯುತ್ತಾರೆ. ಆದರೆ, ಧಾರ್ಮಿಕ ಗ್ರಂಥಗಳ ಪ್ರಕಾರ, ಕೆಲವು ಪದಾರ್ಥಗಳನ್ನು ದಾನ ಮಾಡುವುದನ್ನು ಆಶುಭವೆಂತಲೂ ಇವುಗಳನ್ನು ದಾನ ಮಾಡುವುದರಿಂದ ಸಂಪತ್ತಿನ ಅಧಿದೇವತೆ ಲಕ್ಷ್ಮಿ ಕೋಪಗೊಳ್ಳುವಳು ಹಾಗೂ ಕರ್ಮಗಳಿಗೆ ತಕ್ಕ ಫಲ ನೀಡುವ ಕರ್ಮಫಲದಾತ ಶನಿ ದೇವ ಹೆಗಲೇರಲಿದ್ದಾನೆ ಎಂದು ಹೇಳಲಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವ ಪದಾರ್ಥಗಳನ್ನು ದಾನ ಮಾಡುವುದು ಅಮಂಗಳಕರ. ಯಾವ ಪದಾರ್ಥಗಳನ್ನು ದಾನ ಮಾಡಬಾರದು ಎಂದು ತಿಳಿಯೋಣ...
1. ಪೊರಕೆ:
ಧಾರ್ಮಿಕ ನಂಬಿಕೆಗಳ ಪ್ರಕಾರ, ಪೊರಕೆಯನ್ನು ತಾಯಿ ಮಹಾಲಕ್ಷ್ಮಿಯ ಸ್ವರೂಪ ಎಂದು ಹೇಳಲಾಗುತ್ತದೆ. ಹೊಸತೇ ಇರಲಿ ಇಲ್ಲವೇ ಹಳೆಯ ಪೊರಕೆಯನ್ನೆ ಆಗಲಿ ಬೇರೆಯವರಿಗೆ ನೀಡುವುದು ಅಮಂಗಳಕರ. ಇದರಿಂದ ನಿಮ್ಮ ಮನೆಯಲ್ಲಿರುವ ಲಕ್ಷ್ಮಿಯನ್ನು ನೀವಾಗಿಯೇ ಬೇರೆಯವರ ಮನೆಗೆ ಕಳುಹಿಸಿದಂತೆ ಎಂದು ಹೇಳಲಾಗುತ್ತದೆ. ಈ ರೀತಿ ಮಾಡುವುದರಿಂದ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ಹೆಚ್ಚಾಗಲಿವೆ ಎಂದು ನಂಬಲಾಗಿದೆ.
2. ಹರಿತವಾದ ವಸ್ತುಗಳು:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾರಿಗೂ ಸಹ ಹರಿತವಾದ, ತೀಕ್ಷ್ಣವಾದ ಪದಾರ್ಥಗಳನ್ನು ದಾನವಾಗಿ ನೀಡಬಾರದು. ಇದು ಕುಟುಂಬಸ್ಥರ ನಡುವೆ ವೈಮನಸ್ಸನ್ನು ಹೆಚ್ಚಿಸುವುದಲ್ಲದೆ, ದುರದೃಷ್ಟವನ್ನು ತರಲಿದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- Shani Margi: ಈ ರಾಶಿಯವರ ಜೀವನದಲ್ಲಿ ಮಹತ್ವದ ಬದಲಾವಣೆ, ಬಂಪರ್ ಪ್ರಯೋಜನ
3. ಎಣ್ಣೆ:
ಯಾರಿಗೆ ಆದರೂ ಎಣ್ಣೆಯನ್ನು ದಾನವಾಗಿ ನೀಡುವುದರಿಂದ ಶನಿ ದೇವ ಕೋಪಿಸಿಕೊಳ್ಳುತ್ತಾನೆ ಎಂದು ಹೇಳಲಾಗುತ್ತದೆ. ಅದರಲ್ಲೂ, ನೀವು ಬಳಸಿರುವ, ಹಾಳಾದ ಎಣ್ಣೆಯನ್ನು ಬೇರೆಯವರಿಗೆ ದಾನ ಮಾಡುವುದರಿಂದ ಶನಿ ಹೆಗಲೇರುತ್ತಾನೆ. ಶನಿ ದೋಷದಿಂದ ಮುಕ್ತಿ ಪಡೆಯಲು ಬಯಸಿದರೆ, ಶುದ್ಧವಾದ ಎಳ್ಳೆಣ್ಣೆ ಇಲ್ಲವೇ, ಸಾಸಿವೆ ಎಣ್ಣೆಯನ್ನು ದಾನ ಮಾಡಿದರೆ ಒಳಿತು.
4. ಹಳಸಿದ ಆಹಾರ:
ಹಸಿದವರಿಗೆ ಆಹಾರ ನೀಡುವುದಕ್ಕಿಂತ ಪುಣ್ಯದ ಕೆಲಸ ಮತ್ತೊಂದಿಲ್ಲ. ಆದರೆ, ನಿಮ್ಮ ಕೈಲಾದ ಮಟ್ಟಿಗೆ ಶುಚಿ, ರುಚಿಯಾದ ತಿನ್ನಲು ಯೋಗ್ಯವಾದ ಆಹಾರವನ್ನಷ್ಟೇ ಬೇರೆಯವರಿಗೆ ದಾನವಾಗಿ ನೀಡಿ. ಹಳಸಿದ, ತಿನ್ನಲು ಅಸಾಧ್ಯವಾದ ಆಹಾರವನ್ನು ದಾನವಾಗಿ ನೀಡುವುದರಿಂದ ಪುಣ್ಯದ ಬದಲಿಗೆ ಪಾಪ ನಿಮ್ಮನ್ನು ಬಾಧಿಸಬಹುದು.
ಇದನ್ನೂ ಓದಿ- Morning Astro Tips: ಸೂರ್ಯನಿಗೆ ಅರ್ಘ್ಯವಾಗಿ ಅರ್ಪಿಸುವ ನೀರಿನಲ್ಲಿರಲಿ ಈ 5 ವಸ್ತುಗಳು
5. ಪ್ಲಾಸ್ಟಿಕ್ ಪದಾರ್ಥಗಳು:
ಬೇರೆಯವರಿಗೆ ಪ್ಲಾಸ್ಟಿಕ್ ಪದಾರ್ಥಗಳನ್ನು ದಾನವಾಗಿ ನೀಡುವುದು ಕೂಡ ಅಶುಭ ಎಂದು ಪರಿಗಣಿಸಲಾಗಿದೆ. ಇದರಿಂದ ವ್ಯಾಪಾರ-ವ್ಯವಹಾರದಲ್ಲಿ ನಷ್ಟ ಉಂಟಾಗುತ್ತದೆ ಎಂತಲೂ ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.