Budha Gochar: ಜೂನ್ 7ರವರೆಗೆ ಈ ರಾಶಿಯವರಿಗೆ ವೃತ್ತಿ ರಂಗದಲ್ಲಿ ಭಾರೀ ಯಶಸ್ಸು

Budha Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ ಹಣ-ವ್ಯವಹಾರ, ಬುದ್ಧಿವಂತಿಕೆ, ತರ್ಕ ಮತ್ತು ಸಂವಹನಕಾರಕ ಎಂದು ಬಣ್ಣಿಸಲ್ಪಡುವ ಬುಧನೌ ಪ್ರಸ್ತುತ ಮೇಷ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಜೂನ್ 7ರವರೆಗೂ ಬುಧ ಇದೇ ರಾಶಿಯಲ್ಲಿ ಸಂಚರಿಸಲಿದ್ದು ಅಲ್ಲಿಯವರೆಗೆ ಕೆಲವು ರಾಶಿಯವರಿಗೆ ಉದ್ಯೋಗ ರಂಗದಲ್ಲಿ ಭಾರೀ ಯಶಸ್ಸನ್ನು ನೀಡಲಿದ್ದಾನೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...   

Written by - Yashaswini V | Last Updated : May 24, 2023, 08:06 AM IST
  • ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧನು ಜೂನ್ 7ರಂದು ವೃಷಭ ರಾಶಿಗೆ ಪ್ರವೇಶಿಸಲಿದ್ದಾನೆ.
  • ಇದಕ್ಕೂ ಮೊದಲು ಮೇಷ ರಾಶಿಯಲ್ಲಿರುವ ಬುಧನು ದ್ವಾದಶ ರಾಶಿಗಳಲ್ಲಿ 5 ರಾಶಿಯವರಿಗೆ ಅವರ ಉದ್ಯೋಗ, ವ್ಯವಹಾರದಲ್ಲಿ ಭಾರೀ ಯಶಸ್ಸನ್ನು ನೀಡಲಿದ್ದಾನೆ ಎಂದು ಹೇಳಲಾಗುತ್ತಿದೆ.
  • ಬುಧನ ಅನುಗ್ರಹದಿಂದಾಗಿ ಮುಂದಿನ 15 ದಿನಗಳವರೆಗೆ ಈ ರಾಶಿಯವರು ವೃತ್ತಿ-ವ್ಯವಹಾರದಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರುವರು ಎಂದು ಹೇಳಲಾಗುತ್ತಿದೆ.
Budha Gochar: ಜೂನ್ 7ರವರೆಗೆ ಈ ರಾಶಿಯವರಿಗೆ ವೃತ್ತಿ ರಂಗದಲ್ಲಿ ಭಾರೀ ಯಶಸ್ಸು  title=

Mercury Transit: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜಕುಮಾರ ಎಂದು ಬಣ್ಣಿಸಲ್ಪಡುತ್ತಾನೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ ಬುಧನು ಬಲಶಾಲಿಯಾಗಿದ್ದರೆ ಅಂತಹ ವ್ಯಕ್ತಿಯು ತುಂಬಾ ಬುದ್ದಿವಂತನಾಗಿರುತ್ತಾನೆ. ಮಾತ್ರವಲ್ಲ, ಅವನ ತಾರ್ಕಿಕ ಶಕ್ತಿ ಮತ್ತು ಸಂವಹನ ಶೈಲಿ ಅದ್ಭುತವಾಗಿರಲಿದ್ದು ಆತ ದೊಡ್ಡ ಉದ್ಯಮಿಯಾಗುತ್ತಾನೆ ಎಂದು ಹೇಳಲಾಗುತ್ತದೆ. 

ಪ್ರಸ್ತುತ, ಹಣ-ವ್ಯವಹಾರ, ಬುದ್ಧಿವಂತಿಕೆ, ತರ್ಕ ಮತ್ತು ಸಂವಹನಕಾರಕ ಎಂದು ಕರೆಯಲ್ಪಡುವ ಬುಧನು ಮೇಷ ರಾಶಿಯಲ್ಲಿ ಸಂಚರಿಸುತ್ತಿದ್ದು  ಜೂನ್ 7ರವರೆಗೆ ಇದೇ ರಾಶಿಯಲ್ಲಿ ಸಂಚರಿಸಲಿದ್ದಾನೆ. ಈ ಸಮಯದಲ್ಲಿ ಬುಧನು ಕೆಲವು ರಾಶಿಯವರಿಗೆ ಉದ್ಯೋಗ ರಂಗದಲ್ಲಿ ಭಾರೀ ಯಶಸ್ಸನ್ನು ನೀಡಲಿದ್ದಾನೆ ಎಂದು ಹೇಳಲಾಗುತ್ತಿದೆ. 

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧನು ಜೂನ್ 7ರಂದು ವೃಷಭ ರಾಶಿಗೆ ಪ್ರವೇಶಿಸಲಿದ್ದಾನೆ. ಇದಕ್ಕೂ ಮೊದಲು ಮೇಷ ರಾಶಿಯಲ್ಲಿರುವ ಬುಧನು ದ್ವಾದಶ ರಾಶಿಗಳಲ್ಲಿ 5 ರಾಶಿಯವರಿಗೆ ಅವರ ಉದ್ಯೋಗ, ವ್ಯವಹಾರದಲ್ಲಿ ಭಾರೀ ಯಶಸ್ಸನ್ನು ನೀಡಲಿದ್ದಾನೆ ಎಂದು ಹೇಳಲಾಗುತ್ತಿದೆ. ಬುಧನ ಅನುಗ್ರಹದಿಂದಾಗಿ ಮುಂದಿನ 15 ದಿನಗಳವರೆಗೆ ಈ ರಾಶಿಯವರು ವೃತ್ತಿ-ವ್ಯವಹಾರದಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರುವರು ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ.... 

ಇದನ್ನೂ ಓದಿ- ಮಂಗಳ ಗೋಚಾರ, ಬುಧ ಉದಯ:  ಖುಲಾಯಿಸಲಿದೆ ಈ ರಾಶಿಯವರ ಅದೃಷ್ಟ

ಬುಧನ ಆಶೀರ್ವಾದದಿಂದ ಮುಂದಿನ 15 ದಿನಗಳಲ್ಲಿ ಈ ರಾಶಿಯವರಿಗೆ ವೃತ್ತಿಯಲ್ಲಿ ಉನ್ನತ ಸ್ಥಾನ, ಧನ, ಬಡ್ತಿ ಸಿಗಬಹುದು: 
ಮಿಥುನ ರಾಶಿ: 

ಮುಂದಿನ 15 ದಿನಗಳವರೆಗೆ ಬುಧನ ಅನುಗ್ರಹದಿಂದ ಮಿಥುನ ರಾಶಿಯವರು ಬಂಪರ್ ಹಣಕಾಸಿನ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಈ ಸಮಯದಲ್ಲಿ ಈ ರಾಶಿಯವರಿಗೆ ಉದ್ಯೋಗ ಕ್ಷೇತ್ರದಲ್ಲಿ  ಬಡ್ತಿ ಸಾಧ್ಯತೆ ಇದ್ದು ಉನ್ನತ ಹುದ್ದೆಯನ್ನು ಅಲಂಕರಿಸುವ ಯೋಗವಿದೆ. ನಿಮ್ಮ ಬಹುದಿನದ ಕನಸುಗಳು ಈಗ ಈಡೇರಲಿವೆ. 

ಕರ್ಕಾಟಕ ರಾಶಿ: 
ಮೇಷ ರಾಶಿಯಲ್ಲಿರುವ ಬುಧನು ಜೂನ್ 7ರವರೆಗೆ ಈ ರಾಶಿಯವರಿಗೂ ಕೂಡ ವೃತ್ತಿ ಬದುಕಿನಲ್ಲಿ ಭಾರೀ ಯಶಸ್ಸನ್ನು ನೀಡಲಿದ್ದಾನೆ. ಹೊಸ ಕೆಲಸಕ್ಕಾಗಿ ಹುಡುಕುತ್ತಿರುವವರಿಗೆ ಒಳ್ಳೆಯ ಅವಕಾಶಗಳು ಸಿಗುವ ಸಾಧ್ಯತೆ ಇದೆ. ನೀವು ಕೆಲಸ ಬದಲಾಯಿಸಲು ಯೋಚಿಸುತ್ತಿದ್ದರೆ ಅತ್ಯುತ್ತಮ ಸಮಯ ಎಂದು ಸಾಬೀತುಪಡಿಸಲಿದೆ. ಉದ್ಯೋಗಸ್ಥರಿಗೆ ಪ್ರಮೋಷನ್-ಇನ್ಕ್ರಿಮೆಂಟ್ ಸಾಧ್ಯತೆ ದಟ್ಟವಾಗಿದೆ. ಹೊಸ ವ್ಯಾಪಾರ-ವ್ಯವಹಾರ ಆರಂಭಿಸಲು ಕೂಡ ಇದು ಒಳ್ಳೆಯ ಸಮಯ. 

ಸಿಂಹ ರಾಶಿ: 
ಮೇಷ ರಾಶಿಯಲ್ಲಿ ಬುಧನ ಸಂಚಾರದ ಪರಿಣಾಮವಾಗಿ ಸಿಂಹ ರಾಶಿಯವರಿಗೆ ಸಂಪತ್ತಿನ ಹೊಳೆಯೇ ಹರಿಯಲಿದೆ. ನಿಮ್ಮ ಮಾತೇ ನಿಮ್ಮ ಶಕ್ತಿಯಾಗಿರಲಿದ್ದು ಅದೃಷ್ಟದ ಬೆಂಬಲದಿಂದ ನೀವು ಕೈ ಹಾಕಿದ ಎಲ್ಲಾ ಕೆಲಸಗಳಲ್ಲಿಯೂ ಯಶಸ್ಸನ್ನು ಕೂಡ ಪಡೆಯಲಿದ್ದೀರಿ. ಆದಾಯದ ಹರಿವು ಹೆಚ್ಚಿರುವುದರಿಂದ ಲೌಕಿಕ ಸುಖಕ್ಕಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡುವಿರಿ. 

ಇದನ್ನೂ ಓದಿ- Shukra Gochar 2023: ವಾರದ ಬಳಿಕ ಈ 3 ರಾಶಿಯವರಿಗೆ ಹಣದ ಸುರಿಮಳೆ ಸುರಿಸಲಿದ್ದಾನೆ ಶುಕ್ರ

ಧನು ರಾಶಿ:
ಧನು ರಾಶಿಯವರಿಗೆ ಜೂನ್ 7 ರವರೆಗಿನ ಸಮಯವು ವೈಯಕ್ತಿಕ-ವೃತ್ತಿಪರ ಜೀವನ ಮತ್ತು ಹಣಕಾಸಿನ ವಿಷಯಗಳಲ್ಲಿ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ. ಹಣದ ಹೊಸ ಮೂಲಗಳು ಸೃಷ್ಟಿಯಾಗಲಿದ್ದು ದೊಡ್ಡ ಲಾಭಗಳಿರಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಹೊಸ ಉದ್ಯೋಗಕ್ಕಾಗಿ ಹುಡುಕುತ್ತಿರುವ ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ. ಇನ್ನೂ ಮದುವೆಯಾಗದ ಯುವಕ-ಯುವತಿಯರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. 

ಕುಂಭ ರಾಶಿ:
ಗ್ರಹಗಳ ರಾಜಕುಮಾರನಾದ ಕುಂಭ ರಾಶಿಯವರಿಗೆ ಹೊಸ ಅವಕಾಶಗಳನ್ನು ನೀಡುತ್ತಾನೆ. ಹೊಸ ಕೆಲಸಕ್ಕೆ ಸೇರಲು ಪ್ರಯತ್ನಿಸುತ್ತಿರುವವರಿಗೆ ನಿಮ್ಮ ನೆಚ್ಚಿನ ಉದ್ಯೋಗ ದೊರೆಯಲಿದೆ. ಉದ್ಯೋಗಸ್ಥರಿಗೆ ಬಡ್ತಿ, ಇನ್ಕ್ರಿಮೆಂಟ್ ಪಡೆಯಬಹುದು. ನಿಮ್ಮ ಪ್ರತಿ ಕೆಲಸದಲ್ಲೂ ಅದೃಷ್ಟದ ಬೆಂಬಲ ದೊರೆಯಲಿದ್ದು ಯಶಸ್ಸು ನಿಮ್ಮದಾಗಲಿದೆ. 

ಸೂಚನೆ:  ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News