ಎಲ್ಲೆಂದರಲ್ಲಿ ಇಡಬೇಡಿ ಕಸದ ಬುಟ್ಟಿ !ನಿಮಗರಿವಿಲ್ಲದೆ ಹರಿದು ಹೋಗಬಹುದು ಐಶ್ವರ್ಯ!ಮನೆಯ ಈ ದಿಕ್ಕಿನಲ್ಲಿಯೇ ಇಡಿ ಡಸ್ಟ್ ಬಿನ್

Vastu Shastra For Money: ವಾಸ್ತು ಶಾಸ್ತ್ರದಲ್ಲಿ ಕಸದ ಬುಟ್ಟಿ ಇಡುವುದಕ್ಕೂ ಸರಿಯಾದ ದಿಕ್ಕನ್ನು ಸೂಚಿಸಲಾಗಿದೆ. ಮನೆಯ ಏಳಿಗೆಯಾಗಬೇಕಾದರೆ ಇದೇ ದಿಕ್ಕಿನಲ್ಲಿ ಡಸ್ಟ್ ಬಿನ್ ಇಡಬೇಕು.    

Written by - Ranjitha R K | Last Updated : Aug 22, 2024, 02:35 PM IST
  • ಪ್ರತಿಯೊಂದು ದಿಕ್ಕಿಗೂ ತನ್ನದೇ ಆದ ಶಕ್ತಿ ಇರುತ್ತದೆ.
  • ಯಾವ ವಸ್ತುವನ್ನೇ ಆಗಲಿ ಇದೇ ದಿಕ್ಕಿನಲ್ಲಿ ಇಡಬೇಕು ಎನ್ನುತ್ತದೆ ವಾಸ್ತು ಶಾಸ್ತ್ರ.
  • ಡಸ್ಟ್ ಬಿನ್ ಇಡುವುದಕ್ಕೆ ಕೂಡಾ ಸೂಕ್ತವಾದ ದಿಕ್ಕು ಇದೆ
ಎಲ್ಲೆಂದರಲ್ಲಿ ಇಡಬೇಡಿ ಕಸದ ಬುಟ್ಟಿ !ನಿಮಗರಿವಿಲ್ಲದೆ ಹರಿದು ಹೋಗಬಹುದು ಐಶ್ವರ್ಯ!ಮನೆಯ ಈ ದಿಕ್ಕಿನಲ್ಲಿಯೇ ಇಡಿ ಡಸ್ಟ್ ಬಿನ್ title=

Vastu Shastra For Money: ಪ್ರತಿಯೊಂದು ದಿಕ್ಕಿಗೂ ತನ್ನದೇ ಆದ ಶಕ್ತಿ ಇರುತ್ತದೆ.ಹೀಗಾಗಿ ಯಾವ ವಸ್ತುವನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎನ್ನುವ ನಿರ್ಧಾರ ಬಹಳ ಮುಖ್ಯ.ಯಾವ ವಸ್ತುವನ್ನೇ ಆಗಲಿ ಇದೇ ದಿಕ್ಕಿನಲ್ಲಿ ಇಡಬೇಕು ಎನ್ನುತ್ತದೆ ವಾಸ್ತು ಶಾಸ್ತ್ರ.ಒಂದು ಅದನ್ನು ತಪ್ಪಿ ಬೇರೆಡೆ ಇಟ್ಟಿದ್ದೇ ಆದರೆ ಅದರ ನಕಾರಾತ್ಮಕ ಪರಿಣಾಮ ಎದುರಿಸಬೇಕಾಗುತ್ತದೆ. 

ಕಸದ ಡಬ್ಬಿ ಅಥವಾ ಡಸ್ಟ್‌ಬಿನ್ ಪ್ರತಿ ಮನೆಯಲ್ಲಿಯೂ ಉಪಯೋಗಿಸುವ ವಸ್ತು. ಈಗ ಡಸ್ಟ್ ಬಿನ್ ಇಡುವುದಕ್ಕೂ ದಿಕ್ಕು ಇದೆಯಾ ಎಂದು ನೀವು ಯೋಚಿಸಬಹುದು. ಹೌದು, ವಾಸ್ತು ಶಾಸ್ತ್ರದಲ್ಲಿ ಡಸ್ಟ್ ಬಿನ್ ಇಡುವುದಕ್ಕೆ ಕೂಡಾ ಸೂಕ್ತವಾದ ದಿಕ್ಕು ಯಾವುದು ಎಂದು ಹೇಳಲಾಗಿದೆ.ವಾಸ್ತು ಶಾಸ್ತ್ರದಲ್ಲಿ ಡಸ್ಟ್‌ಬಿನ್ ಇಡುವ ಕುರಿತು ಕೆಲವು ಪ್ರಮುಖ ನಿಯಮಗಳನ್ನು ವಿವರವಾಗಿ ಉಲ್ಲೇಖಿಸಲಾಗಿದೆ.ಈ ನಿಯಮವನ್ನು  ಅನುಸರಿಸದಿದ್ದರೆ ಆರ್ಥಿಕ ನಷ್ಟ ಉಂಟಾಗಿ ಮನೆಯವರು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ : ಆ ಸಂತ ನುಡಿದ 6 ಭಯಾನಕ ಭವಿಷ್ಯವಾಣಿಗಳು..! 7 ದಿನ ಕಗ್ಗತ್ತಲು, ರೈತರ ಬಗ್ಗೆ ಆಘಾತಕಾರಿ ಭವಿಷ್ಯ..!

ಈ ದಿಕ್ಕಿನಲ್ಲಿ ಡಸ್ಟ್‌ಬಿನ್ ಇಡಬೇಡಿ : 
ಮನೆಯಲ್ಲಿ ಕಸದ ಬುಟ್ಟಿಯನ್ನು ತಪ್ಪಾದ ಸ್ಥಳದಲ್ಲಿ ಇಟ್ಟರೆ  ಮೊದಲು ಕೊಪಗೊಳ್ಳುವುದೇ ಲಕ್ಷ್ಮೀ ದೇವಿ.ವಾಸ್ತು ಶಾಸ್ತ್ರದ ಪ್ರಕಾರ,ಮನೆಯ ಈಶಾನ್ಯ ದಿಕ್ಕಿನಲ್ಲಿ ಕಸದ ಬುಟ್ಟಿಯನ್ನು ಇಡಬೇಡಿ.ಈಶಾನ್ಯ ದಿಕ್ಕಿನಲ್ಲಿ ಇಡುವ ಡಸ್ಟ್‌ಬಿನ್ ಮನೆಯ ಜನರಿಗೆ ಒತ್ತಡ,ಚಡಪಡಿಕೆ ಮತ್ತು ಅಶಾಂತಿಯನ್ನು ಉಂಟುಮಾಡುತ್ತದೆ. ಈ ಮನೆಯ ಮುಖ್ಯಸ್ಥರು ಯಾವಾಗಲೂ ಚಿಂತೆಯಿಂದಲೇ ಕೂಡಿರುತ್ತಾರೆ.  ಮನೆಯ ಆಗ್ನೇಯ ದಿಕ್ಕಿನಲ್ಲಿ ಕಸದ ಬುಟ್ಟಿ ಇಡುವುದರಿಂದಲೂ ಆರ್ಥಿಕ ನಷ್ಟ ಉಂಟಾಗುತ್ತದೆ.ಅಂತಹ ಮನೆಯಲ್ಲಿ ಹಣವು ಎಂದಿಗೂ ಉಳಿಯುವುದಿಲ್ಲ.  ಸಾಲದ ಹೊರೆ ಹೆಚ್ಚುತ್ತಲೇ ಇದೆ.ಮನೆಯಲ್ಲಿರುವ ಜನರು ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುವುದಿಲ್ಲ. 

ಈ ದಿಕ್ಕಿನಲ್ಲಿ ಡಸ್ಟ್‌ಬಿನ್ ಇರಿಸಿ :
ವಾಸ್ತು ಶಾಸ್ತ್ರದ ಪ್ರಕಾರ ಡಸ್ಟ್ ಬಿನ್ ಅನ್ನು ಯಾವಾಗಲೂ ಮನೆಯ ನೈಋತ್ಯ ಅಥವಾ ವಾಯುವ್ಯ ದಿಕ್ಕಿನಲ್ಲಿ ಇಡಬೇಕು.ಮನೆಯ ಕೊಳಚೆ ನೀರು ಕೂಡಾ ಈ ದಿಕ್ಕಿನಿಂದಲೇ ಹೊರ ಬರಬೇಕು.ಇನ್ನು ಡಸ್ಟ್‌ಬಿನ್ ಅನ್ನು ವಾಯುವ್ಯ ದಿಕ್ಕಿನಲ್ಲಿ ಇಟ್ಟರೂ ತಪ್ಪಿಲ್ಲ. 

ಇದನ್ನೂ ಓದಿ: ಮುಂದಿನ ವಾರದಲ್ಲಿ ಈ ರಾಶಿಯವರಿಗೆ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಸಿಗುವುದು ಉದ್ಯೋಗ ! ಬಡ್ತಿ, ಉನ್ನತಿಗೆ ಇಲ್ಲ ತಡೆ

ಈ ಸ್ಥಳಗಳಲ್ಲಿ ಕಸದ ತೊಟ್ಟಿಗಳನ್ನು ಇಡಬೇಡಿ : 
- ಡಸ್ಟ್‌ಬಿನ್ ಅನ್ನು ಎಂದಿಗೂ ಮನೆಯ ಹೊರಗೆ ಇಡಬೇಡಿ.ಅದರಲ್ಲೂ ಮನೆಯ ಮುಖ್ಯ ದ್ವಾರದ ಬಳಿ ಕಸದ ಬುಟ್ಟಿ ಇಡುವ ತಪ್ಪನ್ನು ಮಾಡಬೇಡಿ. 
-ಇದಲ್ಲದೆ,ಅಡುಗೆ ಕೋಣೆ,ದೇವರ ಮನೆ, ಮಲಗುವ ಕೋಣೆಗಳಲ್ಲಿ ಕಸದ ಬುಟ್ಟಿ ಇಡಬೇಡಿ. 
-ತುಳಸಿ ಗಿಡದ ಬಳಿಯೂ ಡಸ್ಟ್‌ಬಿನ್  ಇಡಬಾರದು.  

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News