ʼಅನುಷ್ಕಾ ಶರ್ಮಾ ನನ್ನ ಜೀವನದಲ್ಲಿ ಬರದೇ ಇದ್ದಿದ್ದರೆ..ʼ ಪತ್ನಿಯ ಬಗ್ಗೆ ವಿರಾಟ್‌‌ ಕೊಹ್ಲಿ ಶಾಕಿಂಗ್‌ ಕಾಮೆಂಟ್!!

Virat kohli About Anushka Sharma: ವಿರುಷ್ಕಾ ಜೋಡಿ ಏನೇ ಮಾಡಿದರೂ ವಿಶೇಷ. ಇಬ್ಬರೂ ವೈಯಕ್ತಿಕ ಜೀವನ ಸುಖಮಯವಾಗಿ ಸಾಗುತ್ತಿದೆ. ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಎಷ್ಟು ಆ್ಯಕ್ಟೀವ್ ಆಗಿದ್ದಾರೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. 
 

1 /6

ಶಾಂಪೂ ಜಾಹೀರಾತಿನ ಶೂಟಿಂಗ್‌ ವೇಳೆ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೊದಲ ಬಾರಿಗೆ ಭೇಟಿಯಾದರು.. ಐದು ವರ್ಷಗಳವರೆಗೆ ಡೇಟಿಂಗ್‌ ಮಾಡಿ ಡಿಸೆಂಬರ್ 2017 ರಲ್ಲಿ ವಿವಾಹವಾದರು.      

2 /6

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಇತ್ತೀಚೆಗಷ್ಟೇ ಕೊಹ್ಲಿ ತಮ್ಮ ವೃತ್ತಿ ಜೀವನದ ಯಶಸ್ಸಿಗೆ ಪತ್ನಿ ಅನುಷ್ಕಾ ಕಾರಣ ಎಂದು ವಿವರಿಸಿದ್ದಾರೆ.  

3 /6

ಕ್ರಿಕೆಟಿಗ ದಿನೇಶ್ ಕಾರ್ತಿಕ್ ಜೊತೆಗಿನ ಸಂದರ್ಶನದಲ್ಲಿ ಕೊಹ್ಲಿ ಅನುಷ್ಕಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಆದರೆ, ಅನುಷ್ಕಾ ಅವರ ಜೀವನದಲ್ಲಿ ಬರದಿದ್ದರೆ, ನಾನು ಎಲ್ಲಿರುತ್ತಿದ್ದೆ ಎಂದು ನನಗೆ ತಿಳಿದಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ. ಇಂದು ಈ ಮಟ್ಟಕ್ಕೆ ಬರಲು ಅನುಷ್ಕಾ ಕಾರಣ ಎಂದು ತಿಳಿಸಿದ್ದಾರೆ..   

4 /6

ಅಲ್ಲದೇ ಅನುಷ್ಕಾ ಪಕ್ಕದಲ್ಲಿದ್ದರೆ ಸಮಾಧಾನವಾಗುತ್ತದೆ ಎಂದರು. ಆಕೆಯಂತಹ ಜೀವನ ಸಂಗಾತಿ ಸಿಕ್ಕಿದ್ದು ನನ್ನ ಅದೃಷ್ಟ ಎಂದು ಕೊಹ್ಲಿ ಹೇಳಿದ್ದಾರೆ. ಇನ್ನು ತಮ್ಮ ಕೆಲವೊಂದಿಷ್ಟು ಸಮಯವನ್ನು ಮಗಳು ವಾಮಿಕಾ ಹಾಗೂ ಅಕಾಯ್‌ಗೆ ಮೀಸಲಿಟ್ಟಿದ್ದೇನೆ ಎಂದಿದ್ದಾರೆ.    

5 /6

ಸದ್ಯ ವಿರುಷ್ಕಾ ಜೋಡಿ ಲಂಡನ್‌ನಲ್ಲಿದ್ದಾರೆ. ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಅವರ ಇತ್ತೀಚಿನ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ..   

6 /6

ಇನ್ನು ಇತ್ತೀಚೆಗೆ ನಟಿ ಅನುಷ್ಕಾ ಮಕ್ಕಳು ಹಾಗೂ ವಿರಾಟ್‌ ಇಲ್ಲದೇ ಒಬ್ಬರೇ ಮುಂಬೈನ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದರು.. ಹೆರಿಗೆಯ ನಂತರ ಅನುಷ್ಕಾ ಅವರನ್ನು ಮೊದಲ ಬಾರಿಗೆ ನೋಡಿ ನೆಟ್ಟಿಗರು ಶಾಕ್‌ ಆಗಿದ್ದರು.