ಇಂದು ರೂಪುಗೊಳ್ಳಲಿದೆ ಶುಭ ಗಜಕೇಸರಿ ಯೋಗ: ಈ 5 ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ, ದುಡ್ಡಿನ ಸುರಿಮಳೆ

Gajakesari Yoga Effect: ಇಂದು ಜುಲೈ 10, 2023ರಂದು ದೇವ ದೇವತೆಗಳ ಗುರು ಬೃಹಸ್ಪತಿ ಹಾಗೂ ಚಂದ್ರ ಇಬ್ಬರೂ ಒಟ್ಟಿಗೆ ಕೂಡಲಿದ್ದು ಇದರಿಂದ ಶುಭಕರ ಗಜಕೇಸರಿ ಯೋಗ ನಿರ್ಮಾಣಗೊಳ್ಳಲಿದೆ. ಈ ಯೋಗವು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಆದರೂ, ಇದನ್ನು ಕೆಲವು ರಾಶಿಯವರ ದೃಷ್ಟಿಯಿಂದ ಅತ್ಯಂತ ಮಂಗಳಕರ ಯೋಗ ಎಂದು ಬಿಂಬಿಸಲಾಗುತ್ತದೆ. 

Written by - Yashaswini V | Last Updated : Jul 10, 2023, 12:42 PM IST
  • ವೈದಿಕ ಜ್ಯೋತಿಷ್ಯದಲ್ಲಿ, ಗಜಕೇಸರಿ ಯೋಗವನ್ನು ಅತ್ಯಂತ ಶುಭ ಯೋಗಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ.
  • ಈ ಮಂಗಳಕರ ಗಜಕೇಸರಿ ಯೋಗವು ಎಲ್ಲಾ ರಾಶಿಯವರ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಬೀರುತ್ತದೆ.
  • ಆದಾಗ್ಯೂ, ಗುರು-ಚಂದ್ರರ ಯುತಿಯಿಂದ ನಿರ್ಮಾಣಗೊಳ್ಳಲಿರುವ ಈ ಯೋಗವನ್ನು ಕೆಲವು ರಾಶಿಯವರ ದೃಷ್ಟಿಯಿಂದ ತುಂಬಾ ಶುಭ ಸಮಯ ಎಂದು ಬಣ್ಣಿಸಲಾಗುತ್ತಿದೆ.
ಇಂದು ರೂಪುಗೊಳ್ಳಲಿದೆ ಶುಭ ಗಜಕೇಸರಿ ಯೋಗ: ಈ 5 ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ, ದುಡ್ಡಿನ ಸುರಿಮಳೆ  title=
Gajakesari Yoga Effect

Gajakesari Yoga Effect In Kannada: ಆಷಾಢ ಮಾಸದ ಸೋಮವಾರದ ಈ ದಿನ (ಜುಲೈ 10, 2023) ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದ ತುಂಬಾ ವಿಶೇಷ ದಿನವಾಗಿದೆ. ಇಂದು ಮೀನ ರಾಶಿಯಲ್ಲಿ ದೇವ ದೇವತೆಗಳ ಗುರು ಬೃಹಸ್ಪತಿ ಹಾಗೂ ಚಂದ್ರ  ಸಂಯೋಜಿಸಲಿದ್ದು ಗುರು-ಚಂದ್ರರ ಯುತಿಯಿಂದಾಗಿ ಶುಭಕರ "ಗಜಕೇಸರಿ ಯೋಗ" ರೂಪುಗೊಳ್ಳಲಿದೆ. 

ವೈದಿಕ ಜ್ಯೋತಿಷ್ಯದಲ್ಲಿ, ಗಜಕೇಸರಿ ಯೋಗವನ್ನು ಅತ್ಯಂತ ಶುಭ ಯೋಗಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಈ ಮಂಗಳಕರ ಗಜಕೇಸರಿ ಯೋಗವು ಎಲ್ಲಾ ರಾಶಿಯವರ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಬೀರುತ್ತದೆ. ಆದಾಗ್ಯೂ,  ಗುರು-ಚಂದ್ರರ ಯುತಿಯಿಂದ ನಿರ್ಮಾಣಗೊಳ್ಳಲಿರುವ ಈ ಯೋಗವನ್ನು ಕೆಲವು ರಾಶಿಯವರ ದೃಷ್ಟಿಯಿಂದ ತುಂಬಾ ಶುಭ ಸಮಯ ಎಂದು ಬಣ್ಣಿಸಲಾಗುತ್ತಿದೆ. ಅಂತಹ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 

ಗುರು-ಚಂದ್ರ ಯುತಿಯಿಂದ ಗಜಕೇಸರಿ ಯೋಗ: ಈ 5 ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ, ದುಡ್ಡಿನ ಸುರಿಮಳೆ :- 
ಮಿಥುನ ರಾಶಿ: 

ಗುರು ಚಂದ್ರರ ಯುತಿಯಿಂದ ನಿರ್ಮಾಣಗೊಳ್ಳಲಿರುವ ಗಜಕೇಸರಿ ಯೋಗವು ಮಿಥುನ ರಾಶಿಯವರ ದೃಷ್ಟಿಯಿಂದ ಅತ್ಯಂತ ಮಂಗಳಕರ ಸಮಯ ಎಂತಲೇ ಹೇಳಬಹುದು. ಈ ವೇಳೆ ಮಿಥುನ ರಾಶಿಯವರಿಗೆ ಹಣದ ಹರಿವು ಹೆಚ್ಚಾಗಳಿದ್ದು, ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ದೊರೆಯಲಿದೆ. ಮಾತ್ರವಲ್ಲ, ಆಸ್ತಿ ಖರೀದಿ ಯೋಗವೂ ಇದೆ. 

ಇದನ್ನೂ ಓದಿ- Weekly Horoscope: ಜುಲೈ ಎರಡನೇ ವಾರ ಈ ರಾಶಿಯವರಿಗೆ ಎಲ್ಲಾ ಕ್ಷೇತ್ರದಲ್ಲೂ ಯಶಸ್ಸು

ಸಿಂಹ ರಾಶಿ: 
ಗುರು-ಚಂದ್ರ ಸಂಯೋಗದಿಂದ ರೂಪುಗೊಳ್ಳುತ್ತಿರುವ ಗಜಕೇಸರಿ ಯೋಗವು ಸಿಂಹ ರಾಶಿಯವರಿಗೆ ವೃತ್ತಿ-ವ್ಯವಹಾರದಲ್ಲಿ ಬಂಪರ್ ಲಾಭವನ್ನು ತರಲಿದೆ. ಈ ಸಮಯದಲ್ಲಿ ನೀವು ಕೈ ಹಾಕಿದ ಕೆಲಸಗಳಲ್ಲೆಲ್ಲಾ ವಿಜಯಲಕ್ಷ್ಮಿ ನಿಮ್ಮ ಪರವಾಗಿದ್ದು,  ಹಣಕಾಸಿನ ಮೂಲಗಳು ವೃದ್ಧಿಯಾಗಲಿವೆ. ಇದರಿಂದಾಗಿ, ಇಷ್ಟು ದಿನದಿಂದ ನಿಮ್ಮ ಚಿಂತೆಗೆ ಕಾರಣವಾಗಿದ್ದ ಒತ್ತಡಗಳು ಕೂಡ ಕಡಿಮೆ ಆಗಲಿವೆ. 

ತುಲಾ ರಾಶಿ: 
ತುಲಾ ರಾಶಿಯ ಜನರಿಗೆ ಗಜಕೇಸರಿ ಯೋಗವು ತುಂಬಾ ವಿಶೇಷ ಎಂದು ಸಾಬೀತುಪಡಿಸಲಿದೆ. ಗಜಕೇಸರಿ ಯೋಗದ ಶುಭ ಪರಿಣಾಮದಿಂದಾಗಿ ನೀವು ನಿಮ್ಮ ಕ್ಷೇತ್ರದಲ್ಲಿ ಪ್ರಗತಿಯನ್ನು ಕಾಣುವಿರಿ. ಪ್ರತಿ ಕ್ಷೇತ್ರದಲ್ಲೂ, ಯಶಸ್ಸಿನ ಹೊಸ ಅವಕಾಶಗಳು ಕಾಣಿಸಿಕೊಳ್ಳಲಿವೆ. ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಂಡರೆ ಯಶಸ್ಸಿನ ಉತ್ತುಂಗವನ್ನು ಏರುವಿರಿ. ವ್ಯಾಪಾರಸ್ಥರಿಗೆ ಭರ್ಜರಿ ಲಾಭವಾಗಲಿದ್ದು, ನಿಮ್ಮ ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಪಡೆಯುವಿರಿ. 

ಇದನ್ನೂ ಓದಿ- Surya Grahana: ಈ ದಿನ ಸಂಭವಿಸಲಿದೆ ವರ್ಷದ ಎರಡನೇ ಸೂರ್ಯಗ್ರಹಣ, ನಾಲ್ಕು ರಾಶಿಯವರಿಗೆ ಭಾರೀ ನಷ್ಟ

ಧನು ರಾಶಿ: 
ಆಷಾಢ ಸೋಮವಾರದಂದು ರೂಪುಗೊಳ್ಳುತ್ತಿರುವ ಶುಭಕರ ಗಜಕೇಸರಿ ಯೋಗವು ಧನು ರಾಶಿಯವರ ಜೀವನದಲ್ಲಿ ಬಂಗಾರದ ಸಮಯವನ್ನು ತರಲಿದೆ. ಈ ಸಮಯದಲ್ಲಿ ಧನು ರಾಶಿಯವರು ವೃತ್ತಿ ಬದುಕಿನಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸುವಿರಿ. ಮಕ್ಕಳ ಕಡೆಯಿಂದಲೂ ಒಳ್ಳೆಯ ಸುದ್ದಿಗಳನ್ನು ಆಳಿಸುವಿರಿ. ಸ್ವಂತ ಬ್ಯುಸಿನೆಸ್ ಮಾಡುವವರಿಗೆ ಸಮಯ ಅತ್ಯುತ್ತಮವಾಗಿದ್ದು, ನೀವು ಪ್ರಗತಿಯನ್ನು ಕಾಣುವಿರಿ. ಒಟ್ಟಾರೆಯಾಗಿ ನಿಮ್ಮ ಜೀವನದಲ್ಲಿ ಸಕಾರಾತ್ಮಕತೆ ಹೆಚ್ಚಿರುತ್ತದೆ. 

ಮೀನ ರಾಶಿ: 
ಸ್ವ ರಾಶಿಯಲ್ಲಿಯೇ ಬೃಹಸ್ಪತಿ-ಚಂದ್ರನ ಸಂಯೋಗದಿಂದ ರೂಪುಗೊಳ್ಳುತ್ತಿರುವ ಗಜಕೇಸರಿ ಯೋಗವು ಮೀನ ರಾಶಿಯವರ ಜೀವನದಲ್ಲಿ ಮಂಗಳಕರ ಫಲಗಳನ್ನು ನೀಡಲಿದೆ. ಈ ವೇಳೆ ನಿಮಗೆ ವಿದೇಶ ಪ್ರವಾಸದ ಯೋಗವಿದ್ದು, ವೃತ್ತಿ ಬದುಕಿನಲ್ಲಾಗಲಿ, ಇಲ್ಲವೇ, ವಿದ್ಯಾರ್ಥಿಗಳು  ತಮ್ಮ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಶುಭ ಸುದ್ದಿಗಳನ್ನು ಕೇಳಬಹುದು. ಹಣಕಾಸಿನ ವಿಷಯದಲ್ಲೂ ಶುಭ ಸಮಯ ಇದಾಗಿದ್ದು ನೀವು ಪ್ರತಿ ಕೆಲಸದಲ್ಲೂ ಬಂಪರ್ ಹಣಕಾಸಿನ ಪ್ರಯೋಜನವನ್ನು ಪಡೆಯುವಿರಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=38l6m8543Vk

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News