Astro Tips: ಇಂತಹವರ ಮನೆಯಲ್ಲಿ ಮಾತ್ರ ತಾಯಿ ಲಕ್ಷ್ಮಿದೇವಿ ನೆಲೆಸುತ್ತಾಳೆ..!

Astro Tips for Good Luck: ದ್ವೇಷ, ಕೋಪ, ಸೇಡು ತುಂಬಿರುವ ಮನೆ-ಮನದಲ್ಲಿ ನಾನು ಎಂದಿಗೂ ನೆಲೆಸುವುದಿಲ್ಲವೆಂದು ತಾಯಿ ಲಕ್ಷ್ಮಿದೇವಿ ಇಂದ್ರನಿಗೆ ಹೇಳುತ್ತಾಳೆ. ಅಧರ್ಮಿ, ದುರ್ಗುಣ, ಕೆಟ್ಟ ಕೆಲಸ ಮಾಡುವವರ ಮನೆಯಲ್ಲಿ ನಾನು ವಾಸಿಸುವುದಿಲ್ಲವೆಂದು ಹೇಳಿದ್ದಾಳಂತೆ.

Written by - Puttaraj K Alur | Last Updated : Mar 27, 2024, 08:26 PM IST
  • ದ್ವೇಷ, ಕೋಪ, ಸೇಡು ತುಂಬಿರುವ ಮನೆ-ಮನದಲ್ಲಿ ಲಕ್ಷ್ಮಿದೇವಿ ನೆಲೆಸುವುದಿಲ್ಲ
  • ಅಧರ್ಮಿ, ದುರ್ಗುಣ, ಕೆಟ್ಟ ಕೆಲಸ ಮಾಡುವವರ ಮನೆಯಲ್ಲಿ ತಾಯಿ ಇರುವುದಿಲ್ಲ
  • ಕಪಟ, ನಾಟಕವಿಲ್ಲದ, ದಾನ-ಧರ್ಮ ಮಾಡುವವರ ಮನೆಯಲ್ಲಿ ತಾಯಿ ನೆಲೆಸುತ್ತಾಳೆ
Astro Tips: ಇಂತಹವರ ಮನೆಯಲ್ಲಿ ಮಾತ್ರ ತಾಯಿ ಲಕ್ಷ್ಮಿದೇವಿ ನೆಲೆಸುತ್ತಾಳೆ..! title=
ಲಕ್ಷ್ಮಿಯನ್ನು ಒಲಿಸಿಕೊಳ್ಳುವುದು ಹೇಗೆ?

How To Get Blessings Of Goddess Lakshmi: ಮನೆಯಲ್ಲಿ ಸದಾ ತಾಯಿ ಲಕ್ಷ್ಮಿದೇವಿ ನೆಲೆಸಿರಲಿ ಅಂತಾ ಪ್ರತಿಯೊಬ್ಬರೂ ಬಯಸುತ್ತಾರೆ. ಲಕ್ಷ್ಮಿದೇವಿಯನ್ನು ಒಲಿಸಿಕೊಳ್ಳಲು ವಿವಿಧ ರೀತಿಯ ಪೂಜೆ-ಪುನಸ್ಕಾರಗಳನ್ನು ಮಾಡುತ್ತಾರೆ. ಎಷ್ಟೇ ಭಕ್ತಿಯಿಂದ ಪೂಜಿಸಿದರೂ ಕೆಲವರ ಮನೆಗೆ ಲಕ್ಷ್ಮಿದೇವಿ ಕಾಲಿಡುವುದೇ ಇಲ್ಲ. ಇದಕ್ಕೆ ಕಾರಣವೇನು ಅಂತಾ ಖುದ್ದು ಲಕ್ಷ್ಮಿದೇವಿಯೇ ಇಂದ್ರನಿಗೆ ಹೇಳಿದ್ದಾಳಂತೆ.

ಹೌದು, ಅಸುರರ ಮನೆಯಲ್ಲಿ ವಾಸವಾಗಿದ್ದ ತಾಯಿ ಲಕ್ಷ್ಮಿದೇವಿ ಒಂದು ದಿನ ಇಂದ್ರನ ಮನೆಗೆ ಬರುತ್ತಾನೆ. ನಿಮ್ಮ ಮನೆಯಲ್ಲಿ ನಾನು ವಾಸವಾಗಲಾ ಅಂತಾ ಕೇಳುತ್ತಾಳಂತೆ. ಆಗ ಇಂದ್ರನು ಲಕ್ಷ್ಮಿದೇವಿಗೆ ಅನುಮತಿ ನೀಡುತ್ತಾನೆ. ʼಪ್ರತಿಬಾರಿ ನಾನು ಕರೆದರೂ ನೀನು ಏಕೆ ಇಲ್ಲಿಗೆ ಬರುತ್ತಾ ಇರಲಿಲ್ಲ? ಈಗ ಹೇಗೆ ಬಂದೆ ಅಂತಾ ಈ ವೇಳೆ ಕೇಳುತ್ತಾನಂತೆʼ. ಅಸುರರು ಅಧರ್ಮಿಗಳಾಗುತ್ತಿದ್ದಾರೆ, ಹೀಗಾಗಿ ಇಲ್ಲಿಗೆ ಬಂದಿರುವೆ ಎಂದು ಲಕ್ಷ್ಮಿದೇವಿ ಹೇಳುತ್ತಾಳೆ.

ಇದನ್ನೂ ಓದಿ: ಮನೆ ಅಂಗಳದಲ್ಲೇ ಸಿಗುವ ಈ ಹೂವು ನಿಮಿಷಗಳಲ್ಲಿ ಬಿಳಿಕೂದಲನ್ನು ಬುಡದಿಂದಲೇ ಶಾಶ್ವತವಾಗಿ ಕಪ್ಪಾಗಿಸುತ್ತೆ!

ದ್ವೇಷ, ಕೋಪ, ಸೇಡು ತುಂಬಿರುವ ಮನೆ-ಮನದಲ್ಲಿ ನಾನು ಎಂದಿಗೂ ನೆಲೆಸುವುದಿಲ್ಲವೆಂದು ತಾಯಿ ಲಕ್ಷ್ಮಿದೇವಿ ಇಂದ್ರನಿಗೆ ಹೇಳುತ್ತಾಳೆ. ಅಧರ್ಮಿ, ದುರ್ಗುಣ, ಕೆಟ್ಟ ಕೆಲಸ ಮಾಡುವವರ ಮನೆಯಲ್ಲಿ ನಾನು ವಾಸಿಸುವುದಿಲ್ಲ. ವಿವೇಕವಿಲ್ಲದ, ಧರ್ಮದ ಬಗ್ಗೆ ಮಾತನಾಡದ ಮತ್ತು ಜ್ಞಾನಿಗಳ ಅಪಮಾನ ಮಾಡುವ ಜಾಗದಲ್ಲಿ ನಾನು ನೆಲೆ ನಿಲ್ಲುವುದಿಲ್ಲವೆಂದು ಲಕ್ಷ್ಮಿದೇವಿ ಹೇಳಿದ್ದಾಳಂತೆ. ಪಾಪ, ಅಧರ್ಮ, ಸ್ವಾರ್ಥ ತುಂಬಿರುವ ಮನೆಗೆ ಅಪ್ಪಿತಪ್ಪಿಯೂ ತಾಯಿ ಲಕ್ಷ್ಮಿದೇವಿ ಕಾಲಿಡುವುದಿಲ್ಲವಂತೆ. ಗುರು, ತಂದೆ-ತಾಯಿ ಹಿರಿಯರಿಗೆ ಗೌರವವಿಲ್ಲದ ಮನೆಯಲ್ಲಿ ನಾನು ಯಾವುದೇ ಕಾರಣಕ್ಕೂ ಇರುವುದಿಲ್ಲವೆಂದು ಲಕ್ಷ್ಮಿದೇವಿ ಹೇಳಿದ್ದಾಳಂತೆ.

ಹಾಗಾದ್ರೆ ತಾಯಿ ಲಕ್ಷ್ಮಿದೇವಿ ಯಾರ ಮನೆಯಲ್ಲಿ ನೆಲಸುತ್ತಾಳೆ? ಅನ್ನೋ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿರಬಹುದು. ಇದಕ್ಕೆ ಉತ್ತರ ಇಲ್ಲಿದೆ ನೋಡಿ. ಧರ್ಮದಲ್ಲಿ ನಂಬಿಕೆ ಇರುವ, ಮನಸ್ಸು ಪವಿತ್ರವಾಗಿರುವ, ಎಲ್ಲರನ್ನೂ ಗೌರವಿಸುವ, ಕಪಟ, ನಾಟಕವಿಲ್ಲದ, ಬಡವರಿಗೆ ದಾನ-ಧರ್ಮ ಮಾಡುವವರ ಮನೆಯಲ್ಲಿ ಲಕ್ಷ್ಮಿದೇವಿ ನೆಲೆಸುತ್ತಾಳೆ. ಕಮಲದ ಮೇಲೆ ಕುಳಿತಿರುವ ಲಕ್ಷ್ಮಿದೇವಿ ಅಥವಾ ಭಗವಾನ್ ವಿಷ್ಣು ಹಾಗೂ ವಿಷ್ಣು ವಾಹನ ಗರುಡನ ಜೊತೆಗಿರುವ ಲಕ್ಷ್ಮಿದೇವಿ ಫೋಟೋಗಳನ್ನು ಪೂಜಿಸಿದರೆ ಲಕ್ಷ್ಮಿದೇವಿ ಬಹುಬೇಗ ಪ್ರಸನ್ನಳಾಗ್ತಾಳಂತೆ. ನಿಷ್ಕಲ್ಮಶ ಪ್ರೀತಿ, ಮನಸ್ಸು ಹೊಂದಿರುವ ಜನರಿಗೆ ಲಕ್ಷ್ಮಿದೇವಿ ಒಲಿಯುತ್ತಾಳಂತೆ. ಪ್ರತಿದಿನ ಲಕ್ಷ್ಮಿದೇವಿಯನ್ನು ಭಕ್ತಿಯಿಂದ ಪೂಜಿಸುವ ವ್ಯಕ್ತಿಗಳ ಮನೆಯಲ್ಲಿ ಸದಾ ಸುಖ-ಸಂಪತ್ತು ತುಂಬಿ ತುಳುಕುತ್ತಿರುತ್ತದೆ ಎಂಬ ನಂಬಿಕೆಯಿದೆ.  

ಇದನ್ನೂ ಓದಿ: ಸದ್ಗುರು ಸನ್ನಿಧಿಯಲ್ಲಿ ಸಪ್ತಋಷಿ ಆವಾಹನವನ್ನು ನಡೆಸಿಕೊಟ್ಟ ಕಾಶಿ ವಿಶ್ವನಾಥ ದೇವಸ್ಥಾನದ ಏಳು ಅರ್ಚಕರು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News