Astro Tips: ಶುಕ್ರವಾರ ಈ ವಸ್ತುಗಳನ್ನು ಮನೆಗೆ ತಂದರೆ ದಾರಿದ್ರ್ಯ ಬರುತ್ತದೆ!

Goddess Lakshmi Devi: ಪೂಜಾ ಸಾಮಗ್ರಿಗಳು ಮಂಗಳಕರ ವಸ್ತುವಾದರೂ ಶುಕ್ರವಾರ ಇವುಗಳನ್ನು ಖರೀದಿಸಿ ತಂದರೆ ನಿಮ್ಮ ಹಾಗೂ ಮನೆಯವರ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಹೀಗಾಗಿ ಅಪ್ಪಿತಪ್ಪಿಯೂ ಶುಕ್ರವಾರ ಪೂಜಾ ಸಾಮಗ್ರಿಗಳನ್ನು ಮನೆಗೆ ತರಬಾರದು.

Written by - Puttaraj K Alur | Last Updated : Jul 10, 2024, 08:54 PM IST
  • ಪೂಜಾ ಸಾಮಗ್ರಿಗಳು ಮಂಗಳಕರ ವಸ್ತುವಾದರೂ ಶುಕ್ರವಾರ ಇವುಗಳನ್ನು ಖರೀದಿಸಬಾರದು
  • ಶುಕ್ರವಾರ ಅಡುಗೆ ಸಾಮಗ್ರಿಗಳನ್ನು ಮನೆಗೆ ತಂದರೆ ಲಕ್ಷ್ಮೀದೇವಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ
  • ಆಸ್ತಿ ಮತ್ತು ವಾಹನ ಖರೀದಿಗೂ ಶುಕ್ರವಾರ ಸೂಕ್ತ ದಿನವಲ್ಲವೆಂದು ನಂಬಲಾಗಿದೆ
Astro Tips: ಶುಕ್ರವಾರ ಈ ವಸ್ತುಗಳನ್ನು ಮನೆಗೆ ತಂದರೆ ದಾರಿದ್ರ್ಯ ಬರುತ್ತದೆ! title=
ಶುಕ್ರವಾರ ಈ ವಸ್ತುಗಳನ್ನು ಮನೆಗೆ ತರಬೇಡಿ!

Goddess Lakshmi Devi: ಶುಕ್ರವಾರ ತಾಯಿ ಲಕ್ಷ್ಮೀದೇವಿಯ ವಾರವೆಂದೇ ಪರಿಗಣಿಸಲಾಗಿದೆ. ಈ ದಿನವನ್ನು ಶುಭ ಕೆಲಸಗಳಿಗೆ ಯೋಗ್ಯವೆಂದು ನಂಬಲಾಗಿದೆ. ಆದರೆ ಕೆಲವೊಂದು ವಸ್ತುಗಳನ್ನು ಈ ದಿನ ಖರೀದಿಸಿ ಮನೆಗೆ ತಂದರೆ ದಾರಿದ್ರ್ಯ ಬರುತ್ತದೆ ಎಂದು ಹೇಳಲಾಗಿದೆ. ಇಂತಹ ವಸ್ತುಗಳು ಯಾವುವು ಅಂತಾ ತಿಳಿದುಕೊಳ್ಳಿರಿ.

ಪೂಜಾ ಸಾಮಗ್ರಿಗಳು: ಪೂಜಾ ಸಾಮಗ್ರಿಗಳು ಮಂಗಳಕರ ವಸ್ತುವಾದರೂ ಶುಕ್ರವಾರ ಇವುಗಳನ್ನು ಖರೀದಿಸಿ ತಂದರೆ ನಿಮ್ಮ ಹಾಗೂ ಮನೆಯವರ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಹೀಗಾಗಿ ಅಪ್ಪಿತಪ್ಪಿಯೂ ಶುಕ್ರವಾರ ಪೂಜಾ ಸಾಮಗ್ರಿಗಳನ್ನು ಮನೆಗೆ ತರಬಾರದು. ಹೀಗೆ ಮಾಡಿದರೆ ನಿಮಗೆ ದಾರಿದ್ರ್ಯ ಬರಬಹುದು.

ಇದನ್ನೂ ಓದಿ: ಮನೆಯಂಗಳದಲ್ಲಿ ಈ ಹೂವಿನ ಗಿಡ ಅಪ್ಪಿತಪ್ಪಿಯೂ ಬೆಳೆಸಬೇಡಿ… ಹಾವುಗಳು ಬರುತ್ತೆ!

ಅಡುಗೆ ಪಾತ್ರೆಗಳು: ಶುಕ್ರವಾರ ಅಡುಗೆ ಮನೆಗೆ ಸಂಬಂಧಿಸಿದ ಸಾಮಗ್ರಿಗಳನ್ನು ಮನೆಗೆ ತಂದರೆ ತಾಯಿ ಲಕ್ಷ್ಮೀದೇವಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಧಾನ್ಯ ನಷ್ಟವಾಗುವ ಭೀತಿಯಿರುತ್ತದೆ. ಹೀಗಾಗಿ ಈ ದಿನ ಅಡುಗೆ ಮನೆಯ ವಸ್ತುಗಳನ್ನು ಅಪ್ಪಿತಪ್ಪಿಯೂ ಖರೀದಿ ಮಾಡಬೇಡಿ.

ಆಸ್ತಿ & ವಾಹನ ಖರೀದಿಗೆ ಸೂಕ್ತವಲ್ಲ: ಶುಕ್ರವಾರ ಹುಳಿ ಪದಾರ್ಥಗಳು, ಇಲೆಕ್ಟ್ರಾನಿಕ್ ವಸ್ತುಗಳು, ಆಸ್ತಿ, ವಾಹನ ಖರೀದಿಗೂ ಸೂಕ್ತ ದಿನವಲ್ಲ. ಅಷ್ಟೇ ಏಕೆ ಶುಕ್ರವಾರ ಯಾರಾದರೂ ವಸ್ತು ಅಥವಾ ಹಣವನ್ನು ಸಾಲವಾಗಿ ಕೇಳಿದರೂ ಕೊಡಲು ಹೋಗಬೇಡಿ. ಇದರಿಂದ ನಿಮಗೆ ದಾರಿದ್ರ್ಯ ಉಂಟಾಗುವ ಅಪಾಯವಿರುತ್ತದೆ.

ಇದನ್ನೂ ಓದಿ: ಈ ಆಹಾರ ಪದಾರ್ಥಗಳನ್ನು ರೆಫ್ರಿಜರೇಟರ್‌ನಲ್ಲಿ ಇಡುವುದರಿಂದ ಕೇವಲ ರುಚಿಯಷ್ಟೇ ಹಾಳಾಗಲ್ಲ, ಆರೋಗ್ಯಕ್ಕೂ ಹಾನಿಕರ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News