ಬಸವರಾಜಪ್ಪ ಮಲ್ಲಪ್ಪ ಜರಾಲಿಯವರ ಸಾಧನೆಗೆ ಜೀ ನ್ಯೂಸ್‌ ʼಯುವರತ್ನ ಪ್ರಶಸ್ತಿʼ ಗೌರವ..!

Zee Kannada News Yuvaratna Awards : ಯುವಜನಕ್ಕೆ ಸ್ಪೂರ್ತಿಯಾಗುವ ನಿಟ್ಟಿನಲ್ಲಿ ಸಾಧಕರನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸವನ್ನು ಜೀ ಕನ್ನಡ ನ್ಯೂಸ್‌ ಮಾಡುತ್ತಿದೆ. ಅದರಂತೆ 2023-24 ರ ಸಾಲಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ, ಒಟ್ಟು 35 ಜನ ಯುವ ಸಾಧಕರನ್ನು ಗುರುತಿಸಿ, ಅವರಿಗೆ ಸನ್ಮಾನ ಮಾಡಿ ಗೌರವಿಸಿ "ಯುವರತ್ನ ಪ್ರಶಸ್ತಿ" ಪ್ರದಾನ ಮಾಡಲಾಯಿತು. 
 

1 /5

ಸಾಮಾಜಿಕ, ರಾಜಕೀಯ, ಶಿಕ್ಷಣ, ವೈದ್ಯಕೀಯ, ಕ್ರೀಕಾ, ಕೈಗಾರಿಕಾ, ಖಾಸಗೀ, ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು, ತಳಮಟ್ಟದಿಂದ ಬೆಳೆದು ಎಲೆಮರೆ ಕಾಯಿಯಂತೆ ಇರುವ ಉದ್ಯಮಿಗಳನ್ನು ಗುರ್ತಿಸುವ ಕಾರ್ಯಕ್ರಮವೇ ʼಯುವರತ್ನʼ.

2 /5

ಈ ಪೈಕಿ ಬಸವರಾಜಪ್ಪ ಮಲ್ಲಪ್ಪ ಜರಾಲಿ, ಹಿರಿಯ ವಕೀಲರು ಹಾಗೂ ಬಾರ್‌ ಅಸೋಷಿಯೇಷನ್‌ ಅಧ್ಯಕ್ಷರು  ಇವರ ಅದ್ಭುತ ಸಾಧನೆಯನ್ನು ಗುರುತಿಸಿ ಜೀ ಕನ್ನಡ ನ್ಯೂಸ್‌ ಇವರಿಗೆ ಯುವರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

3 /5

ಬಸವರಾಜ ಮಲ್ಲಪ್ಪ ಜರಾಲಿ ಅವರು ಹಿರಿಯ ವಕೀಲರು, ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕಲಗುರ್ಕಿಯಲ್ಲಿ ಜನಿಸಿದ ಇವರು, ಕಲಗುರ್ಕಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ್ರು.  ಮುಳವಾಡದ ಮಲ್ಲಿಕಾರ್ಜುನ ಶಾಲೆಯಲ್ಲಿ ಪ್ರೌಡ ಶಿಕ್ಷಣ ಮುಗಿಸಿದ್ರು.

4 /5

ಬಿಎಲ್‌ಡಿಯ ನ್ಯೂ ಆರ್ಟ್ಸ್‌ ಕಾಲೇಜ್‌ ನಲ್ಲಿ ಪದವಿ ಪಡೆದು, ಅಂಜುಮನ್‌ ಲಾ ಕಾಲೇಜಿನಲ್ಲಿ ಕಾನೂನು ವ್ಯಾಸಂಗ ಮಾಡಿದ್ರು. 2001ರಲ್ಲಿ ವಿಜಯಪುರದಲ್ಲಿ ವಕೀಲ ವೃತ್ತಿ ಆರಂಭಿಸಿ ಹೆಸರು ಗಳಿಸಿದ್ರು. 

5 /5

2018 -19 ರಲ್ಲಿ ರೊಟರಿ ಕ್ಲಬ್‌ ಅಧ್ಯಕ್ಷ ರಾಗಿ ಕಾರ್ಯನಿರ್ವಹಿಸಿದ್ರು. ಪ್ರಸ್ತುತ ಬಸವರಾಜ್‌ ವಿಜಯಪುರ ವಕೀಲರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿಸುತ್ತ ಶ್ರೀಸಾಮಾನ್ಯರ ಕಣ್ಮಣಿಯಾಗಿದ್ದಾರೆ. ಬಸವರಾಜ್‌ ಮಲ್ಲಪ್ಪ ಜರಾಳಿಯವರಿಗೆ ಯುವರತ್ನ ಪ್ರಶಸ್ತಿ ನೀಡಲು ಝೀ ಕನ್ನಡ ನ್ಯೂಸ್‌ ಹೆಮ್ಮೆ ಪಡುತ್ತದೆ.