ಅಜ್ಜ-ಮೊಮ್ಮಕಳ ಭರ್ಜರಿ ಸವಾರಿ : ʼಅಪ್ಪ ಜಗತ್ತಿನಲ್ಲಿಯೇ ಸೇಫ್ ಡ್ರೈವರ್ʼ ಎಂದ ರಾಧಿಕಾ..!

Radhika Pandit : ಅಜ್ಜ, ಅಜ್ಜಿ-ಮೊಮ್ಮಕ್ಕಳ ಸಂಬಂಧವೇ ಅದ್ಭುತ.. ಅವರ ಮಡಿಲಲ್ಲಿ ಮಲಗಿ ಕೇಳುವ ಕಥೆ ಟಾಮ್ ಅಂಡ್ ಜೆರ್ರಿ ನೋಡಿದ್ರೂ ಸಿಗದು. ಅಲ್ಲದೆ, ಮಗಳು ಎಷ್ಟೇ ದೊಡ್ಡವಳಾದ್ರೂ ಅಪ್ಪಂಗೆ ಇನ್ನು ಪುಟ್ಟ ಮಗಳೇ ಅಲ್ವಾ. ಇದೀಗ ರಾಕಿ ಭಾಯ್‌ ಮಕ್ಕಳು ಅಜ್ಜನ ಗಾಡಿಯಲ್ಲಿ ಕುಂತು.. ನೋಡಿ ನಮ್ಮ ಸವಾರಿ ಹೇಗಿದೆ ಅಂತ.. ಪೋಸ್‌ ಕೊಟ್ಟಿರುವ ಫೋಟೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಅಜ್ಜ, ಅಜ್ಜಿ-ಮೊಮ್ಮಕ್ಕಳ ಸಂಬಂಧವೇ ಅದ್ಭುತ.. ಅವರ ಮಡಿಲಲ್ಲಿ ಮಲಗಿ ಕೇಳುವ ಕಥೆ ಟಾಮ್ ಅಂಡ್ ಜೆರ್ರಿ ನೋಡಿದ್ರೂ ಸಿಗದು. ಅಲ್ಲದೆ, ಮಗಳು ಎಷ್ಟೇ ದೊಡ್ಡವಳಾದ್ರೂ ಅಪ್ಪಂಗೆ ಇನ್ನು ಪುಟ್ಟ ಮಗಳೇ ಅಲ್ವಾ. ಇದೀಗ ರಾಕಿ ಭಾಯ್‌ ಮಕ್ಕಳು ಅಜ್ಜನ ಗಾಡಿಯಲ್ಲಿ ಕುಂತು.. ನೋಡಿ ನಮ್ಮ ಸವಾರಿ ಹೇಗಿದೆ ಅಂತ.. ಪೋಸ್‌ ಕೊಟ್ಟಿರುವ ಫೋಟೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

1 /5

ನಟ ಯಶ್‌-ರಾಧಿಕಾ ಚಂದನವನದ ಮುದ್ದಾದ ಜೋಡಿಗಳಲ್ಲಿ ಒಂದು. ಸೋಷಿಯಲ್‌ ಮೀಡಿಯಾದಲ್ಲಿ ಸದಾ ಆಕ್ಟಿವ್‌ ಇರುವ ರಾಧಿಕಾ ತಮ್ಮ ಮಕ್ಕಳ ತುಂಟಾಟದ ವಿಡಿಯೋವನ್ನು ಫ್ಯಾನ್ಸ್‌ ಜೊತೆ ಹಂಚಿಕೊಳ್ಳುತ್ತಿರುತ್ತಾರೆ. 

2 /5

ಇದೀಗ ಅಜ್ಜನ ಬೈಕ್‌ ಮೇಲೆ ಐರಾ, ಅಥರ್ವ ಕುಳಿತಿರುವ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ಅಪ್ಪನ ಗಾಡಿಯ ಮೇಲೆ ಮಕ್ಕಳ ಜೊತೆ ತಾವು ಕುಳಿತು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ ರಾಧಿಕಾ ಪಂಡಿತ್‌.  

3 /5

ʼನನ್ನ ಅಪ್ಪ ಜಗತ್ತಿನಲ್ಲಿಯೇ ಸೇಫ್ ಡ್ರೈವರ್. ಅವರು ಡ್ರೈವ್ ಮಾಡುವಾಗ ನಾನು ನಿಜಕ್ಕೂ ಮಲಗಬಹುದು. ಶಾಲೆ ಹಾಗೂ ಕಾಲೇಜ್ ಲೈಫ್​ನಲ್ಲಿ ಅಪ್ಪ ನನ್ನನ್ನು ಪಿಕಪ್-ಡ್ರಾಪ್ ಮಾಡುತ್ತಿದ್ದರುʼ ಎಂದು ನೆನಪಿಸಿಕೊಂಡಿದ್ದಾರೆ.

4 /5

ಅಲ್ಲದೆ, ನಾನು ತರಗತಿಗೆ ಬಂಕ್ ಮಾಡಿದ್ರೂ ಸಹ, ಅಗ್ಲೂ ನನ್ನ ಬೈಕ್‌ ಮೇಲೆ ಕರೆದುಕೊಂಡು ಹೋಗ್ತಿದ್ರು ಅಂತ ತುಂಟಾಟದ ದಿನಗಳನ್ನು ಮೆಲೆಕು ಹಾಕಿದರು.

5 /5

ಅಂದಹಾಗೆ ರಾಧಿಕಾ ಪಂಡಿತ್‌ ತಂದೆಯ ಹೆಸರು ಕೃಷ್ಣ ಪ್ರಸಾದ್‌ ಪಂಡಿತ್‌, ಅಮ್ಮನ ಹೆಸರು ಮಂಗಳ ಪಂಡಿತ್‌. ರಾಕಿ ಭಾಯ್‌ ಮಕ್ಕಳಿಗೆ ಅಜ್ಜ, ಅಜ್ಜಿ ಅಂದ್ರೆ ತುಂಬಾನೆ ಇಷ್ಟ. ಆಗಾಗ ಅವರ ಜೊತೆ ತುಂಟಾಟ ಆಡ್ತಾ ಇರ್ತಾರೆ.