World Most Scary Island: ವಿಶ್ವದ ಅತ್ಯಂತ ಭಯಾನಕ ದ್ವೀಪ, ಇಲ್ಲಿ ಪ್ರಾಣ ಕಳೆದುಕೊಂಡವರೆಷ್ಟು ಜನ ಗೊತ್ತಾ..?

14ನೇ ಶತಮಾನದಲ್ಲಿ ಪ್ಲೇಗ್ ಮಹಾಮಾರಿ ಇಲ್ಲಿ ಹರಡಿ ಸುಮಾರು 1 ಲಕ್ಷದ 60 ಸಾವಿರ ಮಂದಿ ಪ್ರಾಣ ಕಳೆದುಕೊಂಡಿದ್ದರು ಎಂದು ಹೇಳಲಾಗಿದೆ.

ನವದೆಹಲಿ: ಜಗತ್ತಿನಲ್ಲಿ ಇಂತಹ ಅನೇಕ ಅಪಾಯಕಾರಿ ಮತ್ತು ಭಯಾನಕ ಸ್ಥಳಗಳಿವೆ. ಇವುಗಳ ಬಗ್ಗೆ ಮನುಷ್ಯರಿಗೆ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ. ಏಕೆಂದರೆ ಯಾರೇ ಆಗಲಿ ಈ ಸ್ಥಳಗಳಿಗೆ ಹೋಗಲು ಬಯಸುವುದಿಲ್ಲ. ಇವುಗಳ ಬಗ್ಗೆ ತಿಳಿಯಲು ಹೋದವರು ಇದುವರೆಗೆ ವಾಪಸ್ ಆಗಿಲ್ಲ. ಜಗತ್ತಿನಲ್ಲಿ ಇಂತಹ ಒಂದು ಭಯಾನಕ ದ್ವೀಪವಿದೆ. ಇದನ್ನು ವಿಶ್ವದ ಅತ್ಯಂತ ಭಯಾನಕ ದ್ವೀಪವೆಂದು ಪರಿಗಣಿಸಲಾಗಿದೆ. ಆ ಸ್ಥಳ ಯಾವುದು ಎಂಬುದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಇಟಲಿ ತನ್ನ ಸೌಂದರ್ಯಕ್ಕಾಗಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಶತಮಾನಗಳಷ್ಟು ಹಳೆಯದಾದ ನಗರ, ಸಂಸ್ಕೃತಿ ಮತ್ತು ಇಲ್ಲಿನ ಸುಂದರ ಸ್ಥಳಗಳನ್ನು ನೋಡಲು ಪ್ರಪಂಚದಾದ್ಯಂತದ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ, ಈ ದೇಶದ ಬಗೆಗಿನ ಒಂದು ಭಯಾನಕ ಸ್ಟೋರಿ ಇದೆ. ಅದುವೆ ಪೊವೆಗ್ಲಿಯಾ ದ್ವೀಪ. ಇದನ್ನು ಇಟಲಿ ಘೋಸ್ಟ್ ಐಲ್ಯಾಂಡ್ ಅಂತಾ ಕರೆಯಲಾಗುತ್ತದೆ. ಈ ದ್ವೀಪಕ್ಕೆ ಸಂಬಂಧಿಸಿದ ಬಹಳಷ್ಟು ಭಯಾನಕ ಕಥೆಗಳಿವೆ.  

2 /5

ಇದನ್ನು ವಿಶ್ವದ ಅತ್ಯಂತ ಭಯಾನಕ ದ್ವೀಪ ಎಂದೂ ಕರೆಯುತ್ತಾರೆ. ಈ ಸ್ಥಳವನ್ನು 54 ವರ್ಷಗಳಿಂದ ಸಂಪೂರ್ಣವಾಗಿ ಮುಚ್ಚಲಾಗಿದೆ. ಇಲ್ಲಿಗೆ ಪ್ರವಾಸಿಗರಿಗೆ ಬರಲು ಅವಕಾಶವಿಲ್ಲ. 1930ರ ಸುಮಾರಿಗೆ ಈ ಸ್ಥಳದಲ್ಲಿ ಮಾನಸಿಕ ಆಸ್ಪತ್ರೆಯನ್ನು ನಡೆಸಲಾಗುತ್ತಿತ್ತು. ಇಲ್ಲಿ ಆಸ್ಪತ್ರೆಯ ನಿರ್ದೇಶಕರೊಬ್ಬರು ಎತ್ತರದ ಟವರ್ ನಿಂದ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.

3 /5

ಪೊವೆಗ್ಲಿಯಾ ದ್ವೀಪವು ವೆನಿ ಮತ್ತು ಲಿಡೊ ನಗರಗಳ ನಡುವೆ ಇದೆ. ಇಲ್ಲಿ ಇರಿಸಲಾಗಿರುವ ಮಾನಸಿಕ ರೋಗಿಗಳ ಮೇಲೆ ಹಲವು ರೀತಿಯ ಪ್ರಯೋಗಗಳನ್ನು ಮಾಡಲಾಗಿತ್ತು ಎನ್ನಲಾಗಿದೆ. ಮೆಂಟಲ್ ಹಾಸ್ಪಿಟಲ್ ನಂತರ ಇಲ್ಲಿ ಕೆಲವು ದಿನಗಳ ಕಾಲ ನರ್ಸಿಂಗ್ ಹೋಮ್ ಅನ್ನು ಸಹ ನಡೆಸಲಾಯಿತು. ಆದರೆ, 1968ರಿಂದ ಅದನ್ನು ಸಂಪೂರ್ಣವಾಗಿ ಮುಚ್ಚಲಾಯಿತು.

4 /5

14ನೇ ಶತಮಾನದಲ್ಲಿ ಪ್ಲೇಗ್ ಮಹಾಮಾರಿ ಇಲ್ಲಿ ಹರಡಿ ಸುಮಾರು 1 ಲಕ್ಷದ 60 ಸಾವಿರ ಮಂದಿ ಪ್ರಾಣ ಕಳೆದುಕೊಂಡಿದ್ದರು ಎಂದು ಹೇಳಲಾಗಿದೆ. ಇದಾದ ನಂತರ ಎಲ್ಲಾ ಮೃತ ದೇಹಗಳನ್ನು ಸುಟ್ಟು ಹೂಳಲಾಯಿತು. ಅಂದಿನಿಂದ ಈ ಸ್ಥಳವನ್ನು ಶಾಪಗ್ರಸ್ತ ಮತ್ತು ಘೋಸ್ಟ್ ಐಲ್ಯಾಂಡ್ ಎಂದು ಪರಿಗಣಿಸಲಾಗಿದೆ. ಕಳೆದ 54 ವರ್ಷಗಳಿಂದ ಇಲ್ಲಿಗೆ ಯಾರೂ ಹೋಗಿಲ್ಲ. 2015ರಲ್ಲಿ ಇದನ್ನು ಪುನರಾಭಿವೃದ್ಧಿ ಮಾಡಲು ಪ್ರಯತ್ನಿಸಲಾಯಿತು. ಇಲ್ಲಿ ಐಷಾರಾಮಿ ರೆಸಾರ್ಟ್ ನಿರ್ಮಿಸುವ ಮಾತು ಕೂಡ ಮುನ್ನೆಲೆಗೆ ಬಂದಿತ್ತು. ಆದರೆ ಅದು ಸಾಧ‍್ಯವಾಗಲಿಲ್ಲ.

5 /5

ಈ ದ್ವೀಪದಲ್ಲಿ ಯಾವುದೇ ಸಂಸ್ಥೆ ಹೆಚ್ಚು ಕಾಲ ಉಳಿಯುವುದಿಲ್ಲ. ಇಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ವಿಸ್ಮಯಕಾರಿ ಸಂಗತಿಗಳು ಇಲ್ಲಿ ಆಗಾಗ ನಡೆಯುತ್ತಿರುತ್ತವೆ. ಅಂತಹ ಪರಿಸ್ಥಿತಿಯಿಂದಾಗಿ ಈ ದ್ವೀಪವನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ.