Auspicious Dream: ಸ್ವಪ್ನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಈ 5 ವಸ್ತುಗಳು ಕಂಡುಬಂದರೆ, ಅದು ಅದೃಷ್ಟದ ಸೂಚಕ ಎಂದು ಪರಿಗಣಿಸಲಾಗುತ್ತದೆ.
Auspicious Dream: ಕನಸಿನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಬರುವ ಘಟನೆಗಳು ವ್ಯಕ್ತಿಗೆ ಭವಿಷ್ಯದ ಬಗ್ಗೆ ಸುಳಿವು ನೀಡುತ್ತದೆ. ಕೆಟ್ಟ ಸಮಯ ಅಥವಾ ಮುಂಬರುವ ಒಳ್ಳೆಯ ಸಮಯಗಳ ಬಗ್ಗೆ ಹೇಳುತ್ತದೆ. ಕನಸ್ಸಿನಲ್ಲಿ ಕಾಣುವ ಮಂಗಳಕರವೆಂದು ಪರಿಗಣಿಸಲಾಗುವ ಐದು ಅಂತಹ ವಿಷಯಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಿದ್ದೇವೆ. ಕನಸಿನಲ್ಲಿ ಈ 5 ವಸ್ತುಗಳು ಕಂಡುಬಂದರೆ, ಅದು ಅದೃಷ್ಟದ ಸೂಚಕ ಎಂದು ಪರಿಗಣಿಸಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಮೃತ ದೇಹ - ಒಬ್ಬ ವ್ಯಕ್ತಿಯು ಸತ್ತ ವ್ಯಕ್ತಿ ಅಥವಾ ಮೃತ ದೇಹವನ್ನು ಕನಸಿನಲ್ಲಿ ನೋಡಿದರೆ ಅದನ್ನು ಶುಭ ಸಂಕೇತ ಎಂದು ಹೇಳಲಾಗುತ್ತದೆ. ಇದು ಮುಂದೆ ಒಳ್ಳೆಯ ಸಮಯ ನಿಮಗಾಗಿ ಕಾದಿದೆ ಎಂಬುದನ್ನು ಸೂಚಿಸುತ್ತದೆ.
ಮರಗಳು- ಕನಸಿನ ಗ್ರಂಥದ ಪ್ರಕಾರ, ಕನಸಿನಲ್ಲಿ ಮರಗಳನ್ನು ನೋಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ಹಠಾತ್ ವಿತ್ತೀಯ ಲಾಭಗಳ ಸೂಚಕವೆಂದು ಪರಿಗಣಿಸಲಾಗಿದೆ. ನಿಮ್ಮ ಕನಸಿನಲ್ಲಿ ನೀವು ಹಸಿರು ಮರಗಳನ್ನು ನೋಡಿದರೆ ಅಥವಾ ಮರದಿಂದ ಹಣ್ಣುಗಳನ್ನು ಕೀಳುವುದನ್ನು ನೀವು ನೋಡಿದರೆ, ಇದರರ್ಥ ನೀವು ಶೀಘ್ರದಲ್ಲಿಯೇ ಪೂರ್ವಜರ ಆಸ್ತಿಯನ್ನು ಪಡೆಯುತ್ತೀರಿ.
ನೀವು ನೀರಿನಲ್ಲಿ ಬೀಳುವುದನ್ನು ನೋಡುವುದು - ನಿಮ್ಮ ಕನಸಿನಲ್ಲಿ ನೀವು ನೀರಿನಲ್ಲಿ ಬೀಳುವುದನ್ನು ನೋಡಿದರೆ, ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇಂತಹ ಕನಸು ನೀವು ವ್ಯವಹಾರದಲ್ಲಿ ಉತ್ತಮ ಲಾಭವನ್ನು ಗಳಿಸುವ ಸಾಧ್ಯತೆಯಿದೆ ಎಂದು ಸೂಚಿಸುತ್ತದೆ.
ಬಾವಿಯಿಂದ ನೀರು ಸೇದುವುದು- ಕನಸಿನಲ್ಲಿ ಬಾವಿಯಿಂದ ನೀರನ್ನು ಹೊರತೆಗೆಯುವುದನ್ನು ನೋಡುವುದು ಸಹ ಮಂಗಳಕರ ಕನಸಿನಲ್ಲಿ ಸೇರಿದೆ. ಕನಸಿನಲ್ಲಿ ಇಂತಹ ದೃಶ್ಯ ಕಂಡು ಬಂದರೆ ನಿಮ್ಮ ಬಳಿ ಇರುವ ಹಣ ಪ್ರಾಮಾಣಿಕವಾಗಿ ಗಳಿಸಿದ್ದು ಎಂಬುದರ ಸಂಕೇತ.
ಬಟ್ಟೆ- ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕನಸಿನಲ್ಲಿ ಹೊಸ ಬಟ್ಟೆಗಳನ್ನು ಧರಿಸುವುದನ್ನು ನೀವು ನೋಡುವುದು ಉಜ್ವಲ ಭವಿಷ್ಯದ ಸೂಚಕವಾಗಿದೆ ಎಂದು ಹೇಳಲಾಗಿದೆ. ಅದೇ ಸಮಯದಲ್ಲಿ, ಸ್ವತಃ ಬಟ್ಟೆಗಳನ್ನು ಒಣಗಿಸುವುದನ್ನು ನೋಡುವುದು ವ್ಯಕ್ತಿಯ ಬದಲಾವಣೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ.