Winter Food: ಚಳಿಗಾಲದಲ್ಲಿ ಶೀತ ಕೆಮ್ಮಿನ ಸಮಸ್ಯೆಯಿಂದ ರಕ್ಷಿಸುತ್ತದೆ ಈ ಐದು ಆಹಾರ

ಚಳಿಗಾಲದಲ್ಲಿ ಕಿತ್ತಳೆಯನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಲಾಭವಾಗುತ್ತದೆ. ಇದರಲ್ಲಿ ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟ್ ಗಳು ಸಮೃದ್ಧವಾಗಿದೆ. 

ನವದೆಹಲಿ : Winter Food : ಚಳಿಗಾಲದಲ್ಲಿ ಕೆಲವು ಆಹಾರಗಳನ್ನು ಸೇವಿಸುವುದರಿಂದ ಶೀತ ಮತ್ತು ಜ್ವರದ ಸಮಸ್ಯೆಯಿಂದ ಪಾರಾಗಬಹುದು. ಇವುಗಳನ್ನು ತಿನ್ನುವುದರಿಂದ ಸೀಸನಲ್ ಕಾಯಿಲೆಗಳು ದೂರವಾಗುತ್ತವೆ. ಈ ಋತುವಿನಲ್ಲಿ ಆಹಾರದಲ್ಲಿ ಏನೆಲ್ಲಾ ಪದಾರ್ಥಗಳನ್ನು ಸೇರಿಸಬೇಕು ನೋಡೋಣ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಚಳಿಗಾಲದಲ್ಲಿ ಕಿತ್ತಳೆಯನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಲಾಭವಾಗುತ್ತದೆ. ಇದರಲ್ಲಿ ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟ್ ಗಳು ಸಮೃದ್ಧವಾಗಿದೆ. 

2 /5

ಲವಂಗ ಮತ್ತು ದಾಲ್ಚಿನ್ನಿಯಿಂದ ಮಾಡಿದ ಚಹಾವು ಪ್ರಯೋಜನವನ್ನು ನೀಡುತ್ತದೆ. ಇದು ರೋಗನಿರೋಧಕ ಶಕ್ತಿಯನು ಹೆಚ್ಚಿಸುತ್ತದೆ. ಆರೋಗ್ಯವನ್ನು ಬಲಪಡಿಸುತ್ತದೆ.   

3 /5

ಆಹಾರದಲ್ಲಿ ಪೌಷ್ಠಿಕಾಂಶ ಭರಿತ ಬೆಳ್ಳುಳ್ಳಿಯನ್ನು ಸೇರಿಸುವುದು ಅನೇಕ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಇದು  ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ಇದು ಸೋಂಕುಗಳ ವಿರುದ್ಧ ಹೋರಾಡುವ ಮೂಲಕ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ.  

4 /5

ತಜ್ಞರ ಪ್ರಕಾರ, ಜೇನುತುಪ್ಪದ ಸೇವನೆಯು ಶೀತ ಮತ್ತು ಕೆಮ್ಮಿನ ಸಮಸ್ಯೆಗೆ ತ್ವರಿತ ಪರಿಹಾರವನ್ನು ನೀಡುತ್ತದೆ. ಜೇನುತುಪ್ಪದೊಂದಿಗೆ ಶುಂಠಿಯನ್ನು ಬೆರೆಸಿ ತೆಗೆದುಕೊಂಡರೆ ಒಳ್ಳೆಯದು. ಶೀತ ಮತ್ತು ಕೆಮ್ಮನ್ನು ಗುಣಪಡಿಸಲು ಇದು ಪರಿಣಾಮಕಾರಿ ಪಾಕವಿಧಾನವಾಗಿದೆ.  

5 /5

ಅರಿಶಿನದಲ್ಲಿ ಕರ್ಕ್ಯುಮಿನ್ ಎಂಬ ಅಂಶವಿದೆ. ಇದು  ನಂಜುನಿರೋಧಕ, ಆಂಟಿವೈರಲ್ ಮತ್ತು ಆಂಟಿ ಆಕ್ಸಿಡೆಂಟ್ ಗುಣಲಕ್ಷಣಗಳನ್ನು ಹೊಂದಿದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸುವ ಜೊತೆಗೆ, ಇದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.