ಸೆಲ್ ಫೋನ್ ಏಕೆ ಸ್ಫೋಟಗೊಳ್ಳುತ್ತದೆ ಗೊತ್ತೆ..? ಈ ಸಲಹೆಗಳನ್ನು ಅನುಸರಿಸಿ ತೊಂದರೆಯಾಗಲ್ಲ

Mobile phone explode reason : ನಾವು ದಿನನಿತ್ಯ ಬಳಸುವ ಸೆಲ್ ಫೋನ್‌ಗಳು ಕೆಲವೊಮ್ಮೆ ನಾವು ಮಾಡುವ ತಪ್ಪಿನಿಂದಾಗಿ ಸ್ಫೋಟಗೊಳ್ಳುತ್ತವೆ.. ಬನ್ನಿ ಇಂದು ಈ ಅವಘಡವನ್ನು ತಡೆಯುವುದು ಹೇಗೆ ಎಂಬುದನ್ನು ಈ ಪೋಸ್ಟ್‌ ಮೂಲಕ ತಿಳಿದುಕೊಳ್ಳೋಣ.. 

1 /5

ಸೆಲ್ ಫೋನ್ ಸ್ಫೋಟಗೊಂಡ ಹಲವಾರು ಸುದ್ದಿಗಳನ್ನು ನಾವು ಕೇಳಿದ್ದೇವೆ, ಈ ಕುರಿತು ಕೆಲವೊಂದಿಷ್ಟು ವಿಡಿಯೋಗಳು ಸಹ ಇಂಟರ್‌ನೆಟ್‌ನಲ್ಲಿ ನೋಡಿರುತ್ತೇವೆ.. ಜೇಬಿನಲ್ಲಿದ್ದ ಮೊಬೈಲ್ ಸ್ಫೋಟ, ಚಾರ್ಜ್‌ಗೆ ಇಟ್ಟಿದ್ದ ಪೋನ್‌ ಸ್ಫೋಟ ಸೇರಿದಂತೆ ವಿವಿಧ ನ್ಯೂಸ್‌ಗಳು ಪತ್ರಿಕೆಯಲ್ಲಿಯೂ ಸಹ ಪ್ರಕಟವಾಗಿವೆ.. ಹಾಗಿದ್ರೆ ನಮ್ಮ ಸೆಲ್‌ ಫೋನ್‌ ಸ್ಪೋಟಗೊಳ್ಳದಂತೆ ತಡೆಯುವುದು ಹೇಗೆ..? ಬನ್ನಿ ತಿಳಿಯೋಣ..   

2 /5

ಹೆಚ್ಚಿನ ಬೆಲೆಗೆ ಅಥವಾ ಕಡಿಮೆ ಬೆಲೆಗೆ ಜನರು ಎಲ್ಲಾ ವೈಶಿಷ್ಟ್ಯಗಳಿರುವ ಸೆಲ್ ಫೋನ್‌ಗಳನ್ನು ಖರೀದಿಸುತ್ತಿದ್ದಾರೆ. ಕಡಿಮೆ ಪ್ರೊಸೆಸರ್ ಹೊಂದಿರುವ ಸೆಲ್ ಫೋನ್‌ನಲ್ಲಿ ಹೆಚ್ಚು ಪ್ರೊಸೆಸರ್ ಬಳಸುವುದು, ಕಡಿಮೆ RAM ಇರುವ ಫೋನ್‌ಗಳಲ್ಲಿ ಗೇಮ್‌ಗಳನ್ನು ಡೌನ್‌ಲೋನ್‌ ಮಾಡಿ ಆಡುವುದರಿಂದ ಸೆಲ್ ಫೋನ್ ಬಿಸಿಯಾಗುತ್ತದೆ ಮತ್ತು ಬ್ಯಾಟರಿ ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚು..   

3 /5

ಅಲ್ಲದೆ, ನಿರಂತರವಾಗಿ ಫೋನ್‌ನನ್ನು ಚಾರ್ಜ್‌ ಇಡುವುದರಿಂದ ಬ್ಯಾಟರಿ ಬಿಸಿಯಾಗಿ ಸ್ಫೋಟವಾಗಬಹುದು. ಚಾರ್ಜ್‌ ಮಾಡುತ್ತಲೇ ಆಟ ಆಡುವುದು, ಚಾರ್ಜ್ ಮಾಡುವಾಗ ಸೆಲ್ ಫೋನ್ ಬಳಸುವುದು ಸ್ಫೋಟಕ್ಕೆ ಕಾರಣವಾಗಬಹುದು. ರಾತ್ರಿಯಲ್ಲಿ ವಿದ್ಯುತ್ ಹೆಚ್ಚಿನ ಪ್ರಮಾಣದಲ್ಲಿ ಪ್ರವಹಿಸುತ್ತದೆ, ಆದ್ದರಿಂದ ರಾತ್ರಿಯಲ್ಲಿ ಫೋನ್‌ ಚಾರ್ಜ್ ಮಾಡುವುದನ್ನು ತಪ್ಪಿಸಿ..   

4 /5

ಚಾರ್ಜ್ ಮಾಡುವಾಗ ಸೆಲ್ ಫೋನ್ ಬಳಸುವುದನ್ನು ತಪ್ಪಿಸಿ. ಸೆಲ್ ಫೋನ್ ಖರೀದಿಸಿದ ಒಂದೂವರೆ ವರ್ಷದ ನಂತರ, ಅದರ ಬ್ಯಾಟರಿ ಗುಣಮಟ್ಟ ಹದಗೆಡುತ್ತದೆ. ನಂತರವೂ ಅದೇ ಫೋನ್‌ ಬಳಸಿದರೆ ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚು. ಆದ್ದರಿಂದ ಬ್ಯಾಟರಿಯನ್ನು ಬದಲಾಯಿಸಿ. ರಾತ್ರಿ ಮಲಗುವಾಗ ಅಥವಾ ದಿನಕ್ಕೆ ಒಮ್ಮೆ ಫೋನ್‌ ಅನ್ನು ಸ್ವಿಚ್ ಆಫ್ ಮಾಡಿ.   

5 /5

ಅಗತ್ಯವಿದ್ದಾಗ ಮಾತ್ರ ಇಂಟರ್ನೆಟ್ ಮೊಬೈಲ್ ಡೇಟಾವನ್ನು ಆನ್ ಮಾಡಿ, RAM ಇಂಟೆನ್ಸಿವ್ ಗೇಮ್‌ಗಳನ್ನು ಲೋಡ್ ಮಾಡಬೇಡಿ ಮತ್ತು ಸೆಲ್ ಫೋನ್ ಹೆಚ್ಚು ಬಿಸಿಯಾಗುವುದನ್ನು ತಡೆಯಲು ಪ್ರೊಸೆಸರ್‌ಗೆ ಹೊಂದಿಕೆಯಾಗುವ ಆಟಗಳನ್ನು ಮಾತ್ರ ಪ್ಲೇ ಮಾಡಿ. ಬ್ಯಾಗ್ರೌಂಡ್‌ ಅಪ್ಲಿಕೇಶನ್‌ಗಳನ್ನು ತೆರವುಗೊಳಿಸಬೇಕು. ದೀರ್ಘಕಾಲ ಫೋನ್‌ ಬಳಸಬೇಡಿ..