Alcohol and Food : ಅನೇಕ ಮಾದಕ ವ್ಯಸನಿಗಳು ಮದ್ಯಪಾನ ಮಾಡುವಾಗ ಬಾಯಿ ರುಚಿಗೆ ಸಿಕ್ಕ ಸಿಕ್ಕ ಆಹಾರ ಪದಾರ್ಥಗಳನ್ನು ಸೇವಿಸುತ್ತಾರೆ. ಕೆಲವರು ಉತ್ತಮ ಪ್ರೋಟೀನ್ ಆಹಾರವನ್ನು ಸೇವಿಸುತ್ತಾರೆ. ಮದ್ಯಪಾನ ಮಾಡುವಾಗ ಯಾವ ರೀತಿಯ ಆಹಾರ ಆರೋಗ್ಯಕ್ಕೆ ಒಳ್ಳೆಯದು? ಬನ್ನಿ ನೋಡೋಣ..
ಮದ್ಯಪಾನ ಆರೋಗ್ಯಕ್ಕೆ ಹಾನಿಕರ, ಆದರೂ ಕುಡಿದು ಸಾಯ್ತಿನಿ ಅಂದ್ರೆ ಏನೂ ಮಾಡೋಕೆ ಆಗಲ್ಲ.. ನಿಮ್ಮ ಆರೋಗ್ಯ ಕಾಳಜಿ ನಮಗೆ ಮುಖ್ಯ, ಅದಕ್ಕಾಗಿ ಎಣ್ಣೆ ಕುಡಿಯುವ ಸಮಯದಲ್ಲಿ ತಿನ್ನಬೇಕಾದ ಉತ್ತಮ ಆಹಾರ ಪದಾರ್ಥಗಳ ಕುರಿತು ನಿಮಗೆ ತಿಳಿಸಲಿದ್ದೇವೆ..
ಬಾದಾಮಿ ಪ್ರೋಟೀನ್ ಮತ್ತು ಉತ್ತಮ ಕೊಬ್ಬಿನಿಂದ ಸಮೃದ್ಧವಾಗಿದೆ, ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಅಲ್ಲದೆ, ಆವಕಾಡೊ ಆರೋಗ್ಯಕರ ಕೊಬ್ಬು, ವಿಟಮಿನ್ ಗಳನ್ನು ಹೊಂದಿದ್ದು ದೇಹಕ್ಕೆ ಉತ್ತಮ ಪೋಷಣೆಯನ್ನು ನೀಡುತ್ತದೆ.. ಇವುಗಳನ್ನು ಸಹ ಮದ್ಯಪಾನದ ವೇಳೆ ತಿನ್ನಬಹುದು.
ಪನೀರ್ ಕಲಾನ್ಸ್ ಪ್ರೋಟೀನ್ ಸಮೃದ್ಧವಾಗಿರುವ ಲಘು ತಿಂಡಿ, ಗ್ರಿಲ್ಡ್ ಚಿಕನ್ ಪ್ರೋಟೀನ್ನಲ್ಲಿ ಸಮೃದ್ಧವಾಗಿರುವ ಹಗುರವಾದ, ಆರೋಗ್ಯಕರ ಊಟ ಇದನ್ನು ಸೇವಿಸಬಹುದು.
ತರಕಾರಿ ಸಲಾಡ್ಗಳಲ್ಲಿ ವಿಟಮಿನ್, ಫೈಬರ್ ಸಮೃದ್ಧವಾಗಿರುತ್ತವೆ.. ಇವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಅಲ್ಲದೆ, ಇವುಗಳಲ್ಲಿ ಪ್ರೋಟೀನ್, ಫೈಬರ್ ಇರುತ್ತದೆ..
ಒಣ ಹಣ್ಣುಗಳು ಜೀವಸತ್ವಗಳು, ಖನಿಜಗಳು, ಉತ್ತಮ ಕೊಬ್ಬುಗಳನ್ನು ಹೊಂದಿರುತ್ತದೆ. ಆಲಿವ್ಗಳು ಆರೋಗ್ಯಕರ ಕೊಬ್ಬುಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ ಆಗಾಗಿ ಇವುಗಳನ್ನು ಸಹ ತಿನ್ನಬಹುದು..
ಚೀಸ್ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ, ಇದು ಉತ್ತಮ ತಿಂಡಿಯಾಗಿದೆ. ಮದ್ಯಪಾನ ಮಾಡುವಾಗ ಇವುಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ ಆರೋಗ್ಯ ತಜ್ಞರು.