Biggboss Kannada: ಪ್ರತಿ ವರ್ಷ ಕಲರ್ಸ್ ಕನ್ನಡ (Colours Kannada) ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ (Big Boos) ಷೋ ಈ ಸಲ ತೆರೆಯ ಮೇಲೆ ಬರುವುದು ಯಾವಾಗ ಎನ್ನುವ ಕುತೂಹಲ ಶುರುವಾಗಿದೆ.
Biggboss Kannada: ಜನಪ್ರಿಯತೆ ಮತ್ತು ಟಿಆರ್ ಪಿ ಎರಡರಲ್ಲೂ ಮುಂದಿರುವ "ಬಿಗ್ ಬಾಸ್" ಕಾರ್ಯಕ್ರಮದ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದೆ. ಈ ಸಲ ಬಿಗ್ ಬಾಸ್ ಷೋಗೆ ಯಾರೆಲ್ಲಾ ಕಂಟೆಂಸ್ಟೆಂಟ್ ಗಳು ಆಗಬಹುದು ಎನ್ನುವ ಚರ್ಚೆಯೂ ಜೋರಾಗಿಯೇ ನಡೆದಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಟ ಮತ್ತು ನಿರ್ದೇಶಕ ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಕಾರ್ಯಕ್ರಮ ಈ ಬಾರಿ ಸ್ವಲ್ಪಮಟ್ಟಿಗೆ ತಡವಾದರೂ ಆಗಬಹುದು ಎಂದು ತಿಳಿದುಬಂದಿದೆ. ಕಲರ್ಸ್ ಕನ್ನಡ ವಾಹಿನಿಯ ಮ್ಯಾನೇಜ್ಮೆಂಟ್ ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮ ಡಿಫರೆಂಟ್ ಆಗಿರಬೇಕು ಎಂದು ಬಯಸಿರುವುದರಿಂದ ಸ್ವಲ್ಪ ತಡವಾಗಬಹುದು ಎನ್ನಲಾಗುತ್ತಿದೆ.
ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಹೊಸತನ ತರಬೇಕು ಎಂದು ಬಯಸಿರುವ ಕಲರ್ಸ್ ಕನ್ನಡ ವಾಹಿನಿ. ಹಿಂದಿನ ಎಲ್ಲಾ ಸರಣಿಗಳಿಗಿಂತಲೂ ಹೆಚ್ಚು ಮನರಂಜನೆ ನೀಡಬೇಕು ಎಂದು ನಿಶ್ಚಯಿಸಿರುವುದರಿಂದ ಈ ಸಲ ಸ್ವಲ್ಪ ತಡವಾಗುವ ಸಾಧ್ಯತೆಯಿದೆ.
ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿರುವ ಕಂಟೆಸ್ಟೆಂಟ್ ಆಯ್ಕೆ ಬಗ್ಗೆ ಜಾಗಾರೂಕರಾಗಿರುವಂತೆ ಸೂಚನೆ.
ಪ್ರತಿ ಸಾರಿಯೂ ವಿವಾದಕ್ಕೆ ಒಳಗಾಗುತ್ತಿರುವ ಬಿಗ್ ಬಾಸ್ ಕಾರ್ಯಕ್ರಮದ ಕಂಟೆಸ್ಟೆಂಟ್ಗಳು, ಈ ಸಲ ಮನರಂಜನೆಗೆ ಒತ್ತು ನೀಡಿ ಎಂದು ಹೇಳುತ್ತಿರುವ ವಾಹಿನಿ.
ಆರಂಭದಲ್ಲಿ ಈ ಬಾರಿ ಕಿಚ್ಚ ಸುದೀಪ್ ಬದಲು ಬೇರೊಬ್ಬ ಖ್ಯಾತ ನಟನಿಂದ ಬಿಗ್ ಬಾಸ್ ಷೋ ಮಾಡಿಸಲು ಮುಂದಾಗಿದ್ದ ಕಲರ್ಸ್ ಕನ್ನಡ ವಾಹಿನಿಯ ಮ್ಯಾನೇಜ್ಮೆಂಟ್. ಈಗ ಈ ಸಲದ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸುದೀಪ್ ಅವರದೇ ನಿರೂಪಣೆ ಎನ್ನುವುದರಲ್ಲಿ ಇಲ್ಲ ಅನುಮಾನ.
‘ಬಿಗ್ ಬಾಸ್ ಷೋ ಎಂದರೆ ಸುದೀಪ್, ಸುದೀಪ್ ಎಂದರೆ ಬಿಗ್ ಬಾಸ್’ ಎನ್ನುವಂತೆ ಮೂಡಿಡಿಬರುತ್ತಿರುವ ಕಾರ್ಯಕ್ರಮ ಸೆಪ್ಟೆಂಬರ್ ಇಲ್ಲವೇ ಅಕ್ಟೋಬರ್ ತಿಂಗಳಿನಲ್ಲಿ ಆರಂಭವಾಗಲಿದೆ. ಈ ಬಾರಿಯ ಬಿಗ್ ಬಾಸ್ ಲೇಟ್ ಆದರೂ ಲೇಟೆಸ್ಟ್ ಆಗಿ ಬರಬೇಕೆಂದು ಕಲರ್ಸ್ ಕನ್ನಡ ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ ಎಂತಲೇ ಹೇಳಲಾಗುತ್ತಿದೆ.