ಮದ್ಯಪಾನ ಬಿಡುವುದರಿಂದಲೂ ಆರೋಗ್ಯಕ್ಕೆ ಹಾನಿ..! ಹೇಗೆ ಅಂತೀರಾ.. ಇಲ್ಲಿ ನೋಡಿ

Quitting alcohol side effects : ಮದ್ಯಪಾನದಿಂದ ದೂರವಿರುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಲ್ಲದೆ ಆಲ್ಕೋಹಾಲ್ ಸೇವನೆಯಿಂದ ಹಿಂದೆ ಸರಿಯುವುದು ಸಹ ಉತ್ತಮ ನಿರ್ಧಾರ. ಆದರೆ ಕೆಲವರಿಗೆ ಈ ದುರಭ್ಯಾಸದಿಂದ ಹೊರ ಬರಲು ಆಗುವುದಿಲ್ಲ. ಒಂದು ವೇಳೆ ಮದ್ಯವ್ಯಸನಿಗಳು ಏಕಾಎಕಿ ಕುಡಿಯುವುದನ್ನ ಬಿಟ್ಟರೆ, ಅವರ ಆರೋಗ್ಯದ ಮೇಲೆ ಹಲವಾರು ಪರಿಣಾಮಗಳು ಬೀರುತ್ತದೆ.. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ..

1 /7

ಮದ್ಯಪಾನವನ್ನು ತ್ಯಜಿಸುವುದು ಆರೋಗ್ಯಕ್ಕೆ ಉತ್ತಮ ನಿರ್ಧಾರವಾಗಿದೆ. ಆದರೆ ಆಲ್ಕೋಹಾಲ್ ಚಟವನ್ನು ಬಿಡುವುದು ಅಷ್ಟು ಸುಲಭವಲ್ಲ. ಇದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅದಕ್ಕೆ ಜನರು ಕುಡಿಯುವುದನ್ನು ಬಿಡಲು ಇದು ಪ್ರಮುಖ ಕಾರಣಗಳಲ್ಲಿ ಇದು ಒಂದು ಎಂದು ಪರಿಗಣಿಸಲಾಗಿದೆ.

2 /7

ಆಲ್ಕೋಹಾಲ್ ಕುಡಿಯುವುದರಿಂದ ನಿಮ್ಮ ಆರೋಗ್ಯವು ಎಂದಿಗೂ ಸುಧಾರಿಸುವುದಿಲ್ಲ ಎಂದು ತಿಳಿದಿದ್ದರೂ ಸಹ ಸೇವನೆ ಮಾಡುವುದು ಒಳ್ಳೆಯದಲ್ಲ. ಅಲ್ಲದೆ, ಮದ್ಯವನ್ನು ಬಿಟ್ಟಾಗ ಬರುವ ಸಮಸ್ಯೆಗಳು ಭಯಾನಕವಾಗಿರುತ್ತವೆ. ಆದ್ದರಿಂದ ಕುಡಿಯಲು ಪ್ರಾರಂಭಿಸದಿರುವುದೇ ಉತ್ತಮ.

3 /7

ಆಲ್ಕೊಹಾಲ್ ಸೇವನೆಯನ್ನು ನಿಲ್ಲಿಸಿದ ನಂತರ ತಲೆನೋವು ಬರುವ ಸಾಧ್ಯತೆ ಹೆಚ್ಚು. ಅಲ್ಲದೆ ನೋವು ಅಸಹನೀಯವಾಗಿರಬಹುದು.   

4 /7

ಮದ್ಯಪಾನವನ್ನು ತ್ಯಜಿಸಿದ ನಂತರ ಹೊಟ್ಟೆಯ ಸಮಸ್ಯೆಗಳು ಮತ್ತು ಮಲಬದ್ಧತೆ ಹೆಚ್ಚು ಹೆಚ್ಚು ಕಾಡುತ್ತದೆ.    

5 /7

ಹಠಾತ್ ಮದ್ಯಪಾನ ತ್ಯಜಿಸುವುದರಿಂದ ಖಿನ್ನತೆಯಂತಹ ಪರಿಸ್ಥಿತಿ ಬರಬಹುದು ಎನ್ನುತ್ತಾರೆ ವೈದ್ಯರು. ಅಲ್ಲದೆ, ಮದ್ಯವನ್ನು ನಿಯಂತ್ರಿಸಲು ಪ್ರಯತ್ನಿಸುವಾಗ ಒತ್ತಡಕ್ಕೆ ಒಳಗಾಗುತ್ತಾರೆ. ಈ ಕಾರಣದಿಂದಾಗಿ, ಕಿರಿಕಿರಿ ಮತ್ತು ದುಃಖದ ಭಾವನೆಗಳು ಕಾಡುತ್ತದೆ.  

6 /7

ಕುಡಿಯುವುದನ್ನು ಸಂಪೂರ್ಣವಾಗಿ ನಿಲ್ಲಿಸುವುದರಿಂದ ಹಸಿವಿನ ಕೊರತೆಯಂತಹ ಸಮಸ್ಯೆಗಳೂ ಉಂಟಾಗಬಹುದು. ಆಹಾರ ಸೇವನೆಯು ಕಡಿಮೆಯಾದಾಗ, ಇತರ ಸಮಸ್ಯೆಗಳ ಜೊತೆಗೆ ತೂಕ ನಷ್ಟವು ಸಂಭವಿಸಬಹುದು  

7 /7

ಮದ್ಯಪಾನವನ್ನು ತ್ಯಜಿಸಿದ ನಂತರ ಆತಂಕ ಮತ್ತು ನಿದ್ರಾಹೀನತೆಯಂತಹ ಸಮಸ್ಯೆಗಳನ್ನು ಉಂಟಾಗುತ್ತವೆ. ಇದಲ್ಲದೆ, ಕೆಲಸದ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ ಮತ್ತು ಹೃದಯ ಬಡಿತದಂತಹ ರೋಗಲಕ್ಷಣಗಳು ಸಹ ಕಾಣಿಸಿಕೊಳ್ಳುತ್ತವೆ. ಮನಸ್ಸು ಏಕಾಗ್ರತೆ ಹೊಂದಲು ಸಾಧ್ಯವಾಗುವುದಿಲ್ಲ.