Weight Loss: ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಇಂದಿನಿಂದಲೇ ನಿಮ್ಮ ತೂಕ ಹೆಚ್ಚಳಕ್ಕೆ ಕಾರಣವಾಗಬಹುದಾದ ಈ ಐದು ಕೆಟ್ಟ ಅಭ್ಯಾಸಗಳನ್ನು ಬಳಸಿಕೊಳ್ಳಿ.
Weight Loss: ಪ್ರಸ್ತುತ ಬಹುತೇಕ ಜನರ ಸಾಮಾನ್ಯ ಸಮಸ್ಯೆ ಎಂದರೆ ತೂಕ ಹೆಚ್ಚಳ. ತೂಕ ಹೆಚ್ಚಾಗಲು ಹಲವು ಕಾರಣಗಳಿರಬಹುದು. ಅವುಗಳಲ್ಲಿ ನಮ್ಮ ಕೆಲವು ಕೆಟ್ಟ ಅಭ್ಯಾಸಗಳೂ ಕೂಡ ತೂಕ ಹೆಚ್ಚಳದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಲವು ಬಾರಿ ನಮ್ಮ ಅಜಾಗರೂಕತೆಯು ದೇಹದ ಕೊಬ್ಬು ಹೆಚ್ಚಾಗಲು ಕಾರಣವಾಗುತ್ತದೆ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಇಂದಿನಿಂದಲೇ ನಿಮ್ಮ ತೂಕ ಹೆಚ್ಚಳಕ್ಕೆ ಕಾರಣವಾಗಬಹುದಾದ ಈ ಐದು ಕೆಟ್ಟ ಅಭ್ಯಾಸಗಳನ್ನು ಬಳಸಿಕೊಳ್ಳಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಭಾರತೀಯ ಖಾದ್ಯಗಳಲ್ಲಿ ಕರಿದ ಎಣ್ಣೆಯುಕ್ತ ಆಹಾರ ಪದಾರ್ಥಗಳು ಹೆಚ್ಚಾಗಿ ಕಂಡು ಬರುತ್ತವೆ. ತಿನ್ನಲು ರುಚಿಕರವಾದ ಈ ಆಹಾರಗಳು ಬೊಜ್ಜು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತವೆ. ನೀವು ತೂಕ ಇಳಿಕೆ ಪ್ರಕ್ರಿಯೆಯಲ್ಲಿದ್ದರೆ ನಿಮ್ಮ ಆಹಾರದಿಂದ ಇಂತಹ ಆಹಾರಗಳನ್ನು ದೂರವಿಡಿ.
ನಮ್ಮಲ್ಲಿ ಕೆಲವರು ತೂಕ ಕಡಿಮೆ ಮಾಡಲು ಬ್ರೇಕ್ ಫಾಸ್ಟ್, ಲಂಚ್ ಅಥವಾ ಡಿನ್ನರ್ ಯಾವುದಾದರೂ ಒಂದು ಸಮಯದಲ್ಲಿ ಊಟವನ್ನು ಬ ಬಿಡುತ್ತಾರೆ. ಆದರೆ, ತೂಕ ಇಳಿಸಲು ಇದು ಪರಿಹಾರವಲ್ಲ. ನಿಮ್ಮ ಈ ಅಭ್ಯಾಸದಿಂದ ತೂಕ ಕಡಿಮೆ ಆಗುವ ಬದಲು ಹೆಚ್ಚಾಗಲೂಬಹುದು.
ಕೆಲವರಿಗೆ ಸಿಹಿ ಎಂದರೆ ಪಂಚಪ್ರಾಣ. ಅತಿಯಾದ ಸಿಹಿ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ, ತೂಕ ಇಳಿಕೆಯಲ್ಲಿ ಸಿಹಿಯನ್ನು ಸಂಪೂರ್ಣವಾಗಿ ಬಿಡುವ ತಪ್ಪನ್ನು ಮಾಡಬೇಡಿ.
ನಿತ್ಯ 8 ರಿಂದ 10 ಗಂಟೆಗಳ ಕಾಲ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವವರು ಯಾವುದೇ ರೀತಿಯ ದೈಹಿಕ ಚಟುವಟಿಕೆಗಳನ್ನು ಮಾಡದಿದ್ದರೆ ಅದೂ ಕೂಡ ಹೊಟ್ಟೆ ಸುತ್ತಲಿನ ಕೊಬ್ಬು ಹೆಚ್ಚಾಗಲು ಕಾರಣವಾಗುತ್ತದೆ. ಇದನ್ನು ತಪ್ಪಿಸಲು ನಿತ್ಯ ಬೆಳಿಗ್ಗೆ ಅಥವಾ ಸಂಜೆ ನಿಮಗೆ ಅನುಕೂಲವಾದ ಸಮಯದಲ್ಲಿ ವಾಕ್, ವ್ಯಾಯಾಮ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ.
ಕೆಲಸದ ಒತ್ತಡ ಮತ್ತು ಪಾಳಿಯಲ್ಲಿ ಕೆಲಸ ಮಾಡುವವರಿಗೆ ನಿತ್ಯ ಕನಿಷ್ಠ ನಿದ್ದೆಯೂ ಆಗುವುದಿಲ್ಲ. ಆದರೆ, ಪ್ರತಿ ದಿನ 7 ರಿಂದ 8ಗಂಟೆಗಳವರೆಗೆ ನಿದ್ರೆ ಪಡೆಯದವರಲ್ಲೂ ಕೂಡ ತೂಕ ಹೆಚ್ಚಳ ಒಂದು ಸಾಮಾನ್ಯ ಸಮಸ್ಯೆ ಆಗಿದೆ. ಇದನ್ನು ತಪ್ಪಿಸಲು ದಿನವೂ ಕನಿಷ್ಠ 7 ರಿಂದ 8ಗಂಟೆಗಳವರೆಗೆ ನಿದ್ರಿಸುವ ಅಭ್ಯಾಸ ರೂಢಿಸಿಕೊಳ್ಳಿ. ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.