Weight Loss Diet: ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರನ್ನು ಕಾಡುತ್ತಿರುವ ಸಮಸ್ಯೆ ತೂಕ ಹೆಚ್ಚಳ. ನೀವು ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಲು ಯೋಚಿಸುತ್ತಿದ್ದರೆ ನಿತ್ಯ ನಿಮ್ಮ ಉಪಹಾರದಲ್ಲಿ ಕೆಲವು ಆರೋಗ್ಯಕರ ಆಹಾರಗಳನ್ನು ಸೇವಿಸುವುದು ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ತೂಕ ಇಳಿಕೆ ಉಪಹಾರ: ಪ್ರಸ್ತುತ ನಮ್ಮಲ್ಲಿ ಬಹುತೇಕ ಜನರು ತೂಕ ಹೆಚ್ಚಳದಿಂದಾಗಿ ಚಿಂತಿತರಾಗಿದ್ದಾರೆ. ನೀವು ಅಂತಹವರಲ್ಲಿ ಒಬ್ಬರಾಗಿದ್ದು ತೂಕ ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದರೆ ನಿಮ್ಮ ಬೆಳಗಿನ ಉಪಹಾರದ ಬಗ್ಗೆ ಹೆಚ್ಚಿನ ಗಮನವಹಿಸಬೇಕು. ಮುಂಜಾನೆ ಉಪಹಾರದಲ್ಲಿ ಕಡಿಮೆ ಕ್ಯಾಲೋರಿ ಆಹಾರವನ್ನು ಸೇವಿಸುವುದರಿಂದ ನೀವು ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಬಹುದು. ಆರೋಗ್ಯಕರ ತೂಕ ಇಳಿಕೆಗೆ ಸಹಾಯಕವಾಗುವ ಅಂತಹ ಉಪಹಾರಗಳು ಯಾವುವು ಎಂದು ತಿಳಿಯೋಣ...
ಅವಲಕ್ಕಿ: ಅವಲಕ್ಕಿ ಕಡಿಮೆ ಕ್ಯಾಲೋರಿ ಆಹಾರವಾಗಿದೆ. ಅವಲಕ್ಕಿ ಬಹಳ ಸುಲಭವಾಗಿ ಫಟಾಫಟ್ ತಯಾರಿಸಬಹುದಾದ ಆಹಾರವೂ ಆಗಿದೆ. ಉಪಹಾರದಲ್ಲಿ ತರಕಾರಿಗಳೊಂದಿಗೆ ಅವಲಕ್ಕಿ ತಯಾರಿಸಿ ಸೇವಿಸುವುದರಿಂದ ಇದು ತೂಕ ಇಳಿಕೆಗೆ ಪ್ರಯೋಜನಕಾರಿಯಾಗಿದೆ.
ಹೆಸರು ಬೇಳೆ ದೋಸೆ: ಹೆಸರು ಬೇಳೆ ಫೈಬರ್‌ನಿಂದ ಸಮೃದ್ಧವಾಗಿದೆ. ಇದರಲ್ಲಿ ಪ್ರೋಟೀನ್ ಕೂಡ ಹೇರಳವಾಗಿ ಕಂಡುಬರುತ್ತದೆ. ಹೆಸರು ಬೇಳೆಯಲ್ಲಿ ದೋಸೆ ತಯಾರಿಸಿ ತಿನ್ನುವುದರಿಂದ ಇದು ಉದರ ಸಂಬಂಧಿತ ಸಮಸ್ಯೆಗಳಿಂದಲೂ ದೂರ ಉಳಿಯಬಹುದು. ಮಾತ್ರವಲ್ಲ, ಆರೋಗ್ಯಕರವಾಗಿ ತೂಕ ಇಳಿಕೆಯಲ್ಲೂ ಇದು ಪ್ರಯೋಜನಕಾರಿ ಆಗಿದೆ.
ಓಟ್ಸ್: ಓಟ್ಸ್ ಹೇರಳವಾದ ಫೈಬರ್ ಅನ್ನು ಹೊಂದಿರುತ್ತದೆ. ಇದು ದೇಹವನ್ನು ಸಂಪೂರ್ಣವಾಗಿ ಫಿಟ್ ಆಗಿ ಇಡಲು ತುಂಬಾ ಸಹಕಾರಿ. ಬೆಳಗಿನ ಉಪಹಾರದಲ್ಲಿ ಓಟ್ಸ್ ತಿನ್ನುವುದರಿಂದ ಬೇಗ ತೂಕ ಕಡಿಮೆ ಮಾಡಿಕೊಳ್ಳಬಹುದು.
ಇಡ್ಲಿ: ಇಡ್ಲಿ ತೂಕ ನಿರ್ವಹಣೆಗೆ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಬೆಳಗಿನ ಉಪಾಹಾರಕ್ಕಾಗಿ ಇಡ್ಲಿ ತಿನ್ನುವುದರಿಂದ ಇದು ತೂಕ ಇಳಿಸಿಕೊಳ್ಳಲು ತುಂಬಾ ಸಹಕಾರಿ.
ದಲಿಯಾ: ಸಾಕಷ್ಟು ತರಕಾರಿಗಳನ್ನು ಸೇರಿಸಿ ತಯಾರಿಸಿದ ದಲಿಯಾವನ್ನು ಬೆಳಿಗ್ಗೆ ಉಪಹಾರದಲ್ಲಿ ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಇದು ತೂಕ ಇಳಿಸಿಕೊಳ್ಳಲು ಕೂಡ ತುಂಬಾ ಪ್ರಯೋಜನಕಾರಿಯಾಗಿದೆ. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.