ಪ್ರತಿದಿನ ಶಾಂಪೂ ಹಚ್ಚುವುದರಿಂದ ನಿಮ್ಮ ಕೂದಲು ಉದುರುತ್ತಿವೆಯೇ..? ತಕ್ಷಣ ಹೀಗೆ ಮಾಡಿ

ಧೂಳು, ಒತ್ತಡ, ಕೆಟ್ಟ ಹವಾಮಾನದ ನಡುವೆ ಕೂದಲು ಸಂರಕ್ಷಣೆ ಮಾಡುವುದು ದೊಡ್ಡ ಸವಾಲಾಗಿದೆ. ಕೆಲವೊಂದಿಷ್ಟು ಸರಿ ನಾವು ಸೇವಿಸುವ ಆಹಾರಗಳೂ ಸಹ ಕೂದಲು ಉದುರುವಿಕೆಗೆ ಕಾರಣವಾಗುತ್ತವೆ. ಅಲ್ಲದೆ, ದಿನನಿತ್ಯ ಶಾಂಪೂ ಹಾಕಿ ತಲೆ ಸ್ನಾನ ಮಾಡುವುದು ಸಹ ಹೇರ್‌ ಲಾಸ್‌ಗೆ ಕಾರಣವಾಗುತ್ತದೆ. ಒಂದು ವೇಳೆ ನೀವು ದಿನಿನಿತ್ಯ ಶಾಂಪೂ ಹಾಕಿ ತಲೆ ಸ್ನಾನ ಮಾಡ್ತೀರಾ ಅಂದ್ರೆ ನೀವು ಈ ಕೆಳಗಿನ ಅಂಶಗಳನ್ನು ಪಾಲಿಸಲೆಬೇಕು.

1 /5

ಅತಿಯಾದ ಶ್ಯಾಂಪೂಗಳು ಕೂದಲಿಗೆ ಹಾನಿಯನ್ನುಂಟುಮಾಡುತ್ತವೆ ಎಂದು ಹೇಳಲಾಗುತ್ತದೆ, ಆದ್ದರಿಂದ ಸೌಮ್ಯವಾದ ಕ್ಲೆನ್ಸರ್ ಹೊಂದಿರುವ ಶಾಂಪೂಗಳನ್ನು ಬಳಸುವುದು ಉತ್ತಮ.

2 /5

ನೆತ್ತಿ ಕೊಳೆಯಾಗಿದ್ದರೆ ಆ ಭಾಗಕ್ಕೆ ಮಾತ್ರ ಶಾಂಪೂ ಬಳಸಿ, ಕೂದಲಿನ ತುದಿ ಕೊಳೆಯದಿದ್ದರೆ ಶಾಂಪೂ ಬಳಸಬೇಡಿ.

3 /5

ಒದ್ದೆ ಕೂದಲನ್ನು ಒಣಗಿಸಲು ಹೇರ್ ಡ್ರೈಯರ್‌ಗಳನ್ನು ಆಗಾಗ್ಗೆ ಬಳಸದಂತೆ ಸಲಹೆ ನೀಡಲಾಗುತ್ತದೆ. ಏಕೆಂದರೆ, ಇದು ಕೂದಲು ಉದುರುವಿಕೆಗೆ ಕಾರಣವಾಗಬಹುದು.

4 /5

ಯಾವಾಗಲೂ ಕಂಡೀಷನರ್ ಅನ್ನು ನಿಮ್ಮ ಕೂದಲಿನ ತುದಿಯಲ್ಲಿ ಮಾತ್ರ ಬಳಸಿ, ನಿಮ್ಮ ಬೇರುಗಳಲ್ಲಿ ಕಂಡೀಷನರ್ ಅನ್ನು ಬಳಸುವುದರಿಂದ ಕೂದಲು ಉದುರುವಿಕೆ ಹೆಚ್ಚಾಗುತ್ತದೆ.

5 /5

ರಾತ್ರಿ ಕೂದಲಿಗೆ ಹೆಚ್ಚು ಎಣ್ಣೆ ಹಾಕಬೇಡಿ ಮತ್ತು ಒದ್ದೆಯಾಗಿರುವಾಗ ಕೂದಲನ್ನು ಬಾಚಬೇಡಿ. ಕೂದಲು ಉದುರುವುದನ್ನು ತಡೆಯಲು ಅಗಲವಾದ ಹಲ್ಲಿನ ಬಾಚಣಿಗೆ ಬಳಸಿ.