ನಿಮ್ಮ ವ್ಯಾಲೆಟ್ ನಲ್ಲಿರುವ ಈ ವಸ್ತುಗಳು ತಾಯಿ ಲಕ್ಷ್ಮಿ ಮುನಿಸಿಗೆ ಕಾರಣ, ಇಂದೇ ಹೊರಹಾಕಿ!

WALLET ASTRO TIPS: ಹಲವು ಬಾರಿ ಜನರು ಸಾಕಷ್ಟು ಪರಿಶ್ರಮ ಪಟ್ಟರೂ ಕೂಡ ಅವರಿಗೆ ನಿರೀಕ್ಷೆಗೆ ತಕ್ಕ ಫಲ ಅವರಿಗೆ ಸಿಗುವುದಿಲ್ಲ. ಅದೃಷ್ಟದ ಬೆಂಬಲ ಅವರಿಗೆ ಸಿಗುವುದಿಲ್ಲ. ಇನ್ನೊಂದೆಡೆ ಕೆಲವರ ಜೇಬಿನಲ್ಲಿ ಅಥವಾ ವ್ಯಾಲೆಟ್ ನಲ್ಲಿ ದುಡ್ಡು ನಿಲ್ಲುವುದೇ ಇಲ್ಲ. 

WALLET ASTRO TIPS: ಹಲವು ಬಾರಿ ಜನರು ಸಾಕಷ್ಟು ಪರಿಶ್ರಮ ಪಟ್ಟರೂ ಕೂಡ ಅವರಿಗೆ ನಿರೀಕ್ಷೆಗೆ ತಕ್ಕ ಫಲ ಅವರಿಗೆ ಸಿಗುವುದಿಲ್ಲ. ಅದೃಷ್ಟದ ಬೆಂಬಲ ಅವರಿಗೆ ಸಿಗುವುದಿಲ್ಲ. ಇನ್ನೊಂದೆಡೆ ಕೆಲವರ ಜೇಬಿನಲ್ಲಿ ಅಥವಾ ವ್ಯಾಲೆಟ್ ನಲ್ಲಿ ದುಡ್ಡು ನಿಲ್ಲುವುದೇ ಇಲ್ಲ. ಇದಕ್ಕಾಗಿ ಅವರು ತಮ್ಮ ವ್ಯಾಲೆಟ್ ನಲ್ಲಿ (Spiritual News In Kannada) ಅಥವಾ ಜೇಬಿನಲ್ಲಿಡುವ ಸಂಗತಿಗಳೇ ಕಾರಣ. ತಾಯಿ ಲಕ್ಷ್ಮಿಯ ಮುನಿಸಿಗೆ ಕಾರಣವಾಗುವ ಆ ಸಂಗತಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-12 ವರ್ಷಗಳ ಬಳಿಕ ಸಿಂಹ ರಾಶಿಯಲ್ಲಿ ಚತುರ್ಗ್ರಹಿ ಯೋಗ, ಈ ಜನರ ತಿಜೋರಿ ಹಣದಿಂದ ತುಂಬಿ ತುಳುಕಲಿದೆ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಅನೇಕ ಜನರು ತಮ್ಮ ಪರ್ಸ್‌ನಲ್ಲಿ ಕಾಗದ ಅಥವಾ ಯಾವುದೇ ಹಳೆ ಬಿಲ್ ಅನ್ನು ಇಟ್ಟುಕೊಳ್ಳುವ ಅಭ್ಯಾಸವನ್ನು ಹೊಂದಿರುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಸಮಯಕ್ಕೆ ಸರಿಯಾಗಿ ಅದು ಕೈಗೆ ಸಿಗಲಿ ಎಂಬ ಉದ್ದೇಶ ಅವರದ್ದಾಗಿರುತ್ತದೆ . ಆದರೆ ಬಿಲ್‌ಗಳನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದು ವಾಸ್ತು ಶಾಸ್ತ್ರದಲ್ಲಿ ತಪ್ಪು ಎಂದು ಪರಿಗಣಿಸಲಾಗುತ್ತದೆ. ಪರ್ಸ್‌ನಲ್ಲಿ ಬಿಲ್ಲುಗಳನ್ನು ಇಡುವುದರಿಂದ ತಾಯಿ ಲಕ್ಷ್ಮಿ ಮುನಿಸಿಕೊಳ್ಳುತ್ತಾಳೆ ಮತ್ತು ವ್ಯಕ್ತಿಯು ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ.  

2 /5

ಸಾಮಾನ್ಯವಾಗಿ ಜನರು ತಮ್ಮ ಜೀವನದಲ್ಲಿನ ಅತಿ ವಿಶೇಷ ವ್ಯಕ್ತಿಯನ್ನು ಸದಾ ತಮ್ಮೊಂದಿಗೆ ಇರಿಸಿಕೊಳ್ಳಲು ಪರ್ಸ್‌ನಲ್ಲಿ ಆ ವಿಶೇಷ ವ್ಯಕ್ತಿಯ ಫೋಟೋ ಇಟ್ಟುಕೊಳ್ಳುತ್ತಾರೆ. ಅಂದರೆ ನಾವು ಯಾರಿಗೆ ನಮ್ಮ ಜೀವನದಲ್ಲಿ ಹೆಚ್ಚು ಪ್ರಾಮುಖ್ಯತೆ ನೀಡುತ್ತೇವೆಯೋ ಅವರ ಚಿತ್ರವನ್ನು ನಮ್ಮ ಪರ್ಸ್‌ನಲ್ಲಿ ಇಡುತ್ತೇವೆ ವಾಸ್ತು ಶಾಸ್ತ್ರದ ಪ್ರಕಾರ ಅದು ತಪ್ಪು. ಇದಲ್ಲದೇ ಪರ್ಸ್ ನಲ್ಲಿ ಯಾವುದೇ ದೇವರ ಚಿತ್ರ ಇಡಬಾರದು ಎಂದು ಹೇಳಲಾಗುತ್ತದೆ. ಇದರಿಂದಾಗಿ ವ್ಯಕ್ತಿಯು ಸಾಲಬಾಧೆಯನ್ನು ಅನುಭವಿಸುತ್ತಾನೆ ಮತ್ತು ಮತ್ತು ಅದು ಜೀವನದಲ್ಲಿ ವಾಸ್ತು ದೋಷಕ್ಕೆ ಕಾರಣವಾಗುತ್ತದೆ.   

3 /5

ಪರ್ಸ್‌ನಲ್ಲಿ ತಾಯಿ ಲಕ್ಷ್ಮಿ ನೆಲೆಸಿರುತ್ತಾಳೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಪರ್ಸ್‌ಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ಕಾಳಜಿ ವಹಿಸದಿದ್ದರೆ, ವ್ಯಕ್ತಿಯು ಹಣದ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಸಾಮಾನ್ಯವಾಗಿ ಜನರು ನೋಟುಗಳನ್ನು ಮಡಚಿ ಪರ್ಸ್ ನಲ್ಲಿ ಇಟ್ಟುಕೊಳ್ಳುತ್ತಾರೆ. ನೋಟುಗಳನ್ನು ಯಾವಾಗಲೂ ತೆರೆದು ಪರ್ಸ್‌ನಲ್ಲಿ ಇಡಬೇಕು ಎಂದು ಹೇಳಲಾಗಿದೆ. ಅದನ್ನು ಮಡಿಕೆ ಹಾಕಿ ಇರಿಸುವುದರಿಂದ ವಾಸ್ತು ದೋಷಗಳು ಉಂಟಾಗುತ್ತವೆ ಮತ್ತು ವ್ಯಕ್ತಿಯು ಆರ್ಥಿಕ ಬಿಕ್ಕಟ್ಟಿಗೆ ಗುರಿಯಾಗುತ್ತಾನೆ.  

4 /5

ಯಾವಾಗಲೂ ನಾಣ್ಯಗಳು ಮತ್ತು ನೋಟುಗಳನ್ನು ಪ್ರತ್ಯೇಕವಾಗಿ ಪರ್ಸ್‌ನಲ್ಲಿ ಇರಿಸಿಕೊಳ್ಳಿ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಒಟ್ಟಿಗೆ ಇಡುವುದರಿಂದ ತಾಯಿ ಲಕ್ಷ್ಮಿ ಮುನಿಸಿಕೊಳ್ಳುತ್ತಾಳೆ ಎನ್ನಲಾಗುತ್ತದೆ. ನಾಣ್ಯಗಳು ಮತ್ತು ನೋಟುಗಳನ್ನು ಪ್ರತ್ಯೇಕವಾಗಿ ಪರ್ಸ್‌ನಲ್ಲಿ ಇಡುವುದರಿಂದ ಪರ್ಸ್‌ನಲ್ಲಿ ವಾಸ್ತು ದೋಷ ಉಂಟಾಗುವುದಿಲ್ಲ ಮತ್ತು ತಾಯಿ ಲಕ್ಷ್ಮಿಯ ಕೃಪೆ ಸದಾ ನಿಮ್ಮ ಮೇಲಿರುತ್ತದೆ.  

5 /5

ಯಾವುದೇ ಪೂಜೆ ಸಮಾರಂಭಗಳಲ್ಲಿ ಅಕ್ಕಿಯನ್ನು ಅಥವಾ ಅಕ್ಷತೆಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅಕ್ಕಿ ಕಾಳುಗಳನ್ನು ಪರ್ಸ್‌ನಲ್ಲಿಟ್ಟರೆ ಹಣವು ಪರ್ಸ್‌ನಲ್ಲಿ ಉಳಿಯಲು ಪ್ರಾರಂಭಿಸುತ್ತದೆ ಎಂದು ಹೇಳಲಾಗುತ್ತದೆ. ಪರ್ಸ್‌ನಲ್ಲಿ ಅಕ್ಕಿಯನ್ನು ಇಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ ಇದು ತಾಯಿ ಲಕ್ಷ್ಮಿಯ ಆಶೀರ್ವಾದ ನಿಮ್ಮ ಮೇಲೆ ಉಳಿಯುವಂತೆ ಮಾಡುತ್ತದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)