Vomiting While Travelling: ಪ್ರಯಾಣದ ವೇಳೆ ಆಗುವ ವಾಂತಿಯನ್ನು ನಿಯಂತ್ರಿಸಲು ನಿಮ್ಮ ಬಳಿಯಿರಲಿ ಈ ಮೂರು ವಸ್ತುಗಳು

ಪ್ರಯಾಣದ ಸಮಯದಲ್ಲಿ, ವಾಂತಿ ಮತ್ತು ತಲೆತಿರುಗುವಿಕೆಯಂತಹ ಸಮಸ್ಯೆಗಳ ಸಮಯದಲ್ಲಿ ನಿಮಗೆ ಉಪಯುಕ್ತವಾಗುವಂತಹ ಕೆಲವು ವಸ್ತುಗಳನ್ನು ಬ್ಯಾಗ್‌ನಲ್ಲಿ ಇರಿಸಿ. 

ಬೆಂಗಳೂರು : ಪ್ರಯಾಣದ ಸಮಯದಲ್ಲಿ ಕೆಲವರಿಗೆ ವಾಂತಿಯ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಗೆ ಹೆದರಿ ಎಷ್ಟೋ ಜನ ದೂರದ ಪ್ರಯಾಣ ಇಷ್ಟಪಡುವುದೇ ಇಲ್ಲ. ಪ್ರಯಾಣದ ಹೆಸರು ಕೇಳಿಯೇ ಬೆಚ್ಚಿ ಬೀಳುತ್ತಾರೆ. ಆದರೆ ಈ ಸಮಸ್ಯೆ ನಿವಾರಣೆಗೂ ಸುಲಭ ಪರಿಹಾರವಿದೆ. ಪ್ರಯಾಣಕ್ಕೂ ಮುನ್ನ ಈ ವಸ್ತುಗಳನ್ನು ನಿಮ್ಮೊಂದಿಗೆ ಕೊಂಡೊಯ್ಯಲು ಮರೆಯಬೇಡಿ.  ಪ್ರಯಾಣದ ಸಮಯದಲ್ಲಿ, ವಾಂತಿ ಮತ್ತು ತಲೆತಿರುಗುವಿಕೆಯಂತಹ ಸಮಸ್ಯೆಗಳ ಸಮಯದಲ್ಲಿ ನಿಮಗೆ ಉಪಯುಕ್ತವಾಗುವಂತಹ ಕೆಲವು ವಸ್ತುಗಳನ್ನು ಬ್ಯಾಗ್‌ನಲ್ಲಿ ಇರಿಸಿ. ಇದರೊಂದಿಗೆ, ನಿಮ್ಮ ಸಮಸ್ಯೆಗೆ ಶೀಘ್ರದಲ್ಲೇ  ಪರಿಹಾರ ಸಿಗುತ್ತದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /4

ನಿಮಗೆ ತುಂಬಾ ವಾಕರಿಕೆ ಅನುಭವವಾಗುತ್ತಿದ್ದರೆ, ತಕ್ಷಣ ಬಾಳೆಹಣ್ಣು ತಿನ್ನಿರಿ. ಬಾಳೆ ಹಣ್ಣನ್ನು ಬ್ಯಾಗ್ ನಲ್ಲಿ ತೆಗೆದುಕೊಂಡು ಹೋಗುವುದು ತುಂಬಾ ಸುಲಭ.    ಬಾಳೆಹಣ್ಣು  ಪ್ರಯಾಣದ ವೇಳೆ ಎದುರಾಗುವ ವಾಂತಿ ಸಮಸ್ಯೆಗೆ ಪರಿಹಾರ ನೀಡುತ್ತದೆ.

2 /4

ನಿಂಬೆಯನ್ನು ಆರೋಗ್ಯದ ನಿಧಿ ಎಂದು ಕರೆಯಲಾಗುತ್ತದೆ. ಅದರ ರಸವು ಹೊಟ್ಟೆ ಸಮಸ್ಯೆಗಳನ್ನು ತೆಗೆದುಹಾಕುವ ಸಾಮರ್ಥ್ಯವನ್ನು ಹೊಂದಿದೆ. ನಿಮಗೆ ಚಡಪಡಿಕೆ ಅನಿಸಿದಾಗಲೆಲ್ಲ ನಿಂಬೆ ರಸವನ್ನು ಉಪ್ಪು ಮತ್ತು ನೀರಿನಲ್ಲಿ ಬೆರೆಸಿ ಕುಡಿಯಿರಿ. ಅದು ತ್ವರಿತ ಪರಿಹಾರವನ್ನು ನೀಡುತ್ತದೆ.

3 /4

ಪ್ರಯಾಣದ ಸಮಯದಲ್ಲಿ ಶುಂಠಿಯನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ.  ಏಕೆಂದರೆ ಇದು ವಾಂತಿ ಮತ್ತು ವಾಕರಿಕೆ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ನೀವು ಶುಂಠಿ ಕ್ಯಾಂಡಿ, ಶುಂಠಿ ಚಹಾವನ್ನು ಕೂಡಾ ನಿಮ್ಮ ಜೊತೆ ಕೊಂಡೊಯ್ಯ ಬಹುದು. ಶುಂಠಿ  ಪುಡಿಯನ್ನು ಬಿಸಿನೀರಿನೊಂದಿಗೆ ಕುಡಿದರೆ ಹೊಟ್ಟೆಯ ಉರಿ ಕಡಿಮೆಯಾಗುತ್ತದೆ.

4 /4

ವಿಶೇಷವಾಗಿ ಬೇಸಿಗೆಯಲ್ಲಿ, ಅನೇಕ ಜನರಿಗೆ ಪ್ರಯಾಣದಿಂದ ಸಮಸ್ಯೆ ಉಂಟಾಗುತ್ತದೆ.  ಆ ಸಂದರ್ಭದಲ್ಲಿ ಜನರು ಪುದೀನ ಎಲೆಗಳು, ಪುದೀನ ಮಾತ್ರೆಗಳು ಅಥವಾ ಅದರ ಸಿರಪ್ ಅನ್ನು ತಮ್ಮೊಂದಿಗೆ ಇಟ್ಟುಕೊಳ್ಳಬೇಕು.  ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)