ಸಂಪೂರ್ಣ ಲಾಸ್ ಆಗಿ ದೇಶವನ್ನೇ ಬಿಟ್ಟು ಓಡಿರುವ ವಿಜಯ್ ಮಲ್ಯ ಐಶಾರಾಮಿ ಬಂಗಲೆ ನೋಡಿದ್ದೀರಾ ? ಅಂಬಾನಿ, ಅದಾನಿಯ ಅರಮನೆಗಳಿಗೂ ನೀಡುತ್ತಿದೆ ಟಕ್ಕರ್

 33 ಅಂತಸ್ತಿನ ಕಟ್ಟಡದ ಮೇಲ್ಭಾಗದಲ್ಲಿ ನಿರ್ಮಿಸಲಾಗಿರುವ ಈ ಬಂಗಲೆಯಲ್ಲಿ ಓಪನ್  ಈಜುಕೊಳ, ಹೆಲಿಪ್ಯಾಡ್ ಮುಂತಾದ ಎಲ್ಲಾ ಸೌಲಭ್ಯಗಳನ್ನು ಹೊಂದಿದೆ. ಈ ಸ್ಕೈಹೌಸ್ ನಿರ್ಮಾಣವಾಗಿ ವರ್ಷಗಳೇ ಕಳೆದಿವೆ. 

ಬೆಂಗಳೂರು : ನೆಲದಿಂದ 400 ಅಡಿ ಎತ್ತರದ 34 ಅಂತಸ್ತಿನ ಕಟ್ಟಡದ ಛಾವಣಿಯ ಮೇಲೆ ನಿರ್ಮಿಸಲಾದ ಎರಡು ಅಂತಸ್ತಿನ ಐಷಾರಾಮಿ ಬಂಗಲೆ ಕನಸಿನ ಮನೆಗಿಂತ ಕಡಿಮೆಯಿಲ್ಲ. ಮನೆಯಿಂದ ಹೊರಗೆ ನೋಡಿದರೆ, ಇಡೀ ನಗರವೇ ಕಾಣಿಸುತ್ತದೆ. ಈ ಬಂಗಲೆಯು ಶ್ವೇತಭವನದಂತೆ ಕಾಣುತ್ತಿದ್ದು, ಎಲ್ಲಾ ಐಷಾರಾಮಿಗಳನ್ನು ಹೊಂದಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

ಬೆಂಗಳೂರಿನ ಯುಬಿ ಸಿಟಿಯಲ್ಲಿರುವ ಕಿಂಗ್‌ಫಿಷರ್ ಟವರ್‌ನ ಮೇಲ್ಭಾಗದಲ್ಲಿ ನಿರ್ಮಿಸಲಾದ ಈ ವೈಟ್ ಹೌಸ್ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರಿಗೆ ಸೇರಿದೆ. 4.5 ಎಕರೆಯಲ್ಲಿ ಹರಡಿರುವ ಈ ಬಂಗಲೆಯನ್ನು ನೆಲದಿಂದ 400 ಅಡಿ ಎತ್ತರದಲ್ಲಿ ನಿರ್ಮಿಸಲಾಗಿದೆ. 

2 /8

ವಿಜಯ್ ಮಲ್ಯ ಭಾರತದಲ್ಲಿ ಅನೇಕ ಮನೆಗಳನ್ನು ಹೊಂದಿದ್ದಾರೆ. ಆದರೆ ಬೆಂಗಳೂರಿನ ಕಿಂಗ್‌ಫಿಶರ್ ಟವರ್ಸ್‌ನ ಈ ಕಟ್ಟಡವು ಅವರಿಗೆ ಅಚ್ಚುಮೆಚ್ಚು.4.5 ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ ಈ ಕಟ್ಟಡವು 33 ಮಹಡಿಗಳು ಮತ್ತು 81 ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದೆ.

3 /8

ಬೆಂಗಳೂರಿನ ಗಗನಚುಂಬಿ ಕಟ್ಟಡದ ಮೇಲ್ಭಾಗದಲ್ಲಿ 40,000 ಚದರ ಅಡಿಯ ಪೆಂಟ್ ಹೌಸ್ ಇದೆ. ಇದು ಬಿಳಿ ಬಣ್ಣವನ್ನು ಹೊಂದಿದ್ದು, ಇದನ್ನು ವೈಟ್ ಹೌಸ್ ಗೆ ಹೋಲಿಸಲಾಗುತ್ತದೆ. 

4 /8

33 ಅಂತಸ್ತಿನ ಕಟ್ಟಡದ ಮೇಲ್ಭಾಗದಲ್ಲಿ ನಿರ್ಮಿಸಲಾಗಿರುವ ಈ ಪೆಂಟ್ ಹೌಸ್  ಓಪನ್ ಈಜುಕೊಳ, ಹೆಲಿಪ್ಯಾಡ್ ಮುಂತಾದ ಹಲವು ಸೌಲಭ್ಯಗಳನ್ನು ಹೊಂದಿದೆ. ಆ ಮನೆಯಲ್ಲಿ ಮಲ್ಯ ಅವರ ವೈಯಕ್ತಿಕ ಲಾಬಿ, ಮನೆ-ಕಚೇರಿ ಮತ್ತು ಪೆಂಟ್‌ಹೌಸ್‌ಗೆ ಹೋಗಲು ಖಾಸಗಿ ಲಿಫ್ಟ್ ಇದೆ. ಅಪಾರ್ಟ್‌ಮೆಂಟ್‌ಗಳು 8000 ಚದರ ಅಡಿಗಳಲ್ಲಿ ಹರಡಿಕೊಂಡಿದೆ.   

5 /8

ಮಲ್ಯ ಅವರ ಹವಾ ಮಹಲ್ ನಿರ್ಮಿಸಿದ ಪ್ರೆಸ್ಟೀಜ್ ಎಸ್ಟೇಟ್ಸ್ ಪ್ರಾಜೆಕ್ಟ್‌ನ ಅಧ್ಯಕ್ಷ ಇರ್ಫಾನ್ ರಜಾಕ್, ಈ ಮನೆ ನಿರ್ಮಿಸುವುದು ಸುಲಭದ ಕೆಲಸವಾಗಿರಲಿಲ್ಲ. 33 ಅಂತಸ್ತಿನ ಕಟ್ಟಡದ ಮೇಲೆ ಅರಮನೆ ನಿರ್ಮಾಣ ಬಹಳ ಕಷ್ಟ ಎಂದಿದ್ದಾರೆ.   

6 /8

ಮಲ್ಯನ ಈ ಅರಮನೆಯ ಬೆಲೆ 20 ಮಿಲಿಯನ್ ಡಾಲರ್ ಅಂದರೆ ಸುಮಾರು 170 ಕೋಟಿ ರೂ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಈ ಅರಮನೆ ಕಟ್ಟಿಸಿದ್ದಾರೆಯಾದರೂ ಅವರು ಅಲ್ಲಿ ವಾಸಿಸಲು ಸಾಧ್ಯವಾಗಲಿಲ್ಲ. 

7 /8

ಈ ಕಟ್ಟಡದಲ್ಲಿ ಒಂದು ಫ್ಲ್ಯಾಟ್‌ನ ಬೆಲೆ 50 ಕೋಟಿ ರೂಪಾಯಿಗಳಿಗಿಂತ ಹೆಚ್ಚು. ದೇಶದ ಅನೇಕ ಕೋಟ್ಯಾಧಿಪತಿ ಉದ್ಯಮಿಗಳು ಈ  ಸೊಸೈಟಿಯಲ್ಲಿ ಫ್ಲ್ಯಾಟ್‌ಗಳನ್ನು ಹೊಂದಿದ್ದಾರೆ. ಇನ್ಫೋಸಿಸ್‌ನ ನಾರಾಯಣ ಮೂರ್ತಿ, ಸುಧಾ ಮೂರ್ತಿ, ಜೆರೋಡಾದ ನಿಖಿಲ್ ಕಾಮತ್ ಮತ್ತು ಬಯೋಕಾನ್‌ನ ಕಿರಣ್ ಮಜುಂದಾರ್ ಶಾ ಅವರಂತಹ ಅನೇಕ ಉದ್ಯಮಿಗಳು ಈ ಕಟ್ಟಡದಲ್ಲಿ ಮನೆಗಳನ್ನು ಖರೀದಿಸಿದ್ದಾರೆ.

8 /8

ಮಲ್ಲಯ್ಯ ತುಂಬ ಪ್ರೀತಿಯಿಂದ ಕಟ್ಟಿದ ಈ ಮನೆಯಲ್ಲಿ ಬದುಕುವ ಅವಕಾಶ ಮಾತ್ರ ಅವರಿಗೆ ಸಿಗಲಿಲ್ಲ.ಪ್ರಸ್ತುತ ಅವರು ತಮ್ಮ ಮಗ ಮತ್ತು ಸೊಸೆಯೊಂದಿಗೆ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿಯೂ ಸ್ವಂತ ಬಂಗಲೆ ಇದೆ.