Venus transit in Pisces 2025: ಶುಭ ಗ್ರಹ ಶುಕ್ರವು ಮುಂದಿನ ವರ್ಷ ಅಂದರೆ 2025ರ ಜನವರಿ 28ರ ಮಂಗಳವಾರ ಬೆಳಗ್ಗೆ 7.12ಕ್ಕೆ ಮೀನ ರಾಶಿಗೆ ಸಂಚಾರ ಮಾಡಲಿದೆ. ಈ ಶುಕ್ರ ಸಂಕ್ರಮಣವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದರೆ ಕೆಲವೊಮ್ಮೆ ಈ ಸಂಚಾರ ಅನಾನುಕೂಲವಾಗಿರುತ್ತದೆ, ಕೆಲವೊಮ್ಮೆ ಈ ಸಂಚಾರ ಸಾಕಷ್ಟು ಅನುಕೂಲಕರ ಫಲವನ್ನು ನೀಡುತ್ತದೆ.
Shukra Gochar 2025: ನವಗ್ರಹಗಳಲ್ಲಿ ಶುಕ್ರಗ್ರಹವು ವಿಶೇಷ ಸ್ಥಾನವನ್ನು ಹೊಂದಿದೆ. ಶುಕ್ರ ಗ್ರಹ ಯಾವುದೇ ಒಬ್ಬ ವ್ಯಕ್ತಿಯ ಜೀವನ, ಸಂಪತ್ತು, ಆದಾಯ ಇತ್ಯಾದಿಗಳ ಮೇಲೆ ಆಳ ಪರಿಣಾಮ ಬೀರುತ್ತದೆ. ಹೀಗಾಗಿ ಜ್ಯೋತಿಷ್ಯಶಾಸ್ತ್ರದಲ್ಲಿ ಶುಕ್ರನ ಸಂಕ್ರಮಣವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಶುಕ್ರ ಗ್ರಹ ಸಂಚಾರದ ವೇಳೆ 25-26 ದಿನಗಳಲ್ಲಿ ಒಂದು ರಾಶಿಯನ್ನು ಬದಲಾಯಿಸುತ್ತಾನೆ. ಇದು 12 ರಾಶಿಯವರ ಮೇಲೂ ಸಹ ನೇರ ಪರಿಣಾಮವನ್ನು ಬೀರುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಶುಭ ಗ್ರಹ ಶುಕ್ರವು ಮುಂದಿನ ವರ್ಷ ಅಂದರೆ 2025ರ ಜನವರಿ 28ರ ಮಂಗಳವಾರ ಬೆಳಗ್ಗೆ 7.12ಕ್ಕೆ ಮೀನ ರಾಶಿಗೆ ಸಂಚಾರ ಮಾಡಲಿದೆ. ಈ ಶುಕ್ರ ಸಂಕ್ರಮಣವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದರೆ ಕೆಲವೊಮ್ಮೆ ಈ ಸಂಚಾರ ಅನಾನುಕೂಲವಾಗಿರುತ್ತದೆ, ಕೆಲವೊಮ್ಮೆ ಸಾಕಷ್ಟು ಅನುಕೂಲಕರ ಫಲವನ್ನು ನೀಡುತ್ತದೆ. 2025ರಲ್ಲಿ ಶುಕ್ರನ ಸಂಚಾರವು ಕೆಲ ರಾಶಿಯವರ ಜೀವನದಲ್ಲಿ ಸಂತೋಷ, ಶಾಂತಿ, ಸಂಪತ್ತು, ವೈಭವ ಮತ್ತು ಸಮೃದ್ಧಿ ಇತ್ಯಾದಿಗಳನ್ನು ನೀಡಲಿದೆ. ಹಾಗಾದರೆ ಯಾವ ರಾಶಿಯವರಿಗೆ ಶುಕ್ರನ ಈ ಸಂಚಾರ ಮಂಗಳಕರವಾಗಿದೆ ಎಂದು ತಿಳಿಯಿರಿ...
ಮಿಥುನ ರಾಶಿಯವರಿಗೆ ಶುಕ್ರ ಸಂಕ್ರಮಣವು ತುಂಬಾ ಮಂಗಳಕರವಾಗಿದೆ. ಇದರ ಶುಭ ಪರಿಣಾಮದಿಂದ ಮಿಥುನ ರಾಶಿಯ ವಿದ್ಯಾರ್ಥಿಗಳ ಬುದ್ಧಿಶಕ್ತಿ ಸುಧಾರಿಸುತ್ತದೆ. ಉದ್ಯೋಗಿಗಳ ಉದ್ಯೋಗವಕಾಶ ಹೆಚ್ಚಾಗುತ್ತದೆ. ಆರೋಗ್ಯ, ಕಲೆ, ಬರವಣಿಗೆ, ಫ್ಯಾಷನ್ ಮತ್ತು ಐಟಿ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರು ಇದ್ದಕ್ಕಿದ್ದಂತೆ ಉತ್ತಮ ಲಾಭ ಗಳಿಸಬಹುದು. ರಾಜಕೀಯಕ್ಕೆ ಸಂಬಂಧಿಸಿದ ವ್ಯಕ್ತಿಗಳು ಸಮಾಜದಲ್ಲಿ ಹೆಸರು ಗಳಿಸುತ್ತಾರೆ. ಜನವರಿ ತಿಂಗಳಲ್ಲಿ ವಿವಾಹಿತರ ಪ್ರೇಮ ಜೀವನವು ಸಾಕಷ್ಟು ಸುಧಾರಿಸಲಿದೆ. ವ್ಯಾಪಾರ-ವ್ಯವಹಾರದಲ್ಲಿ ಭರ್ಜರಿ ಲಾಭ ನಿಮ್ಮದಾಗಲಿದೆ. ಶೀಘ್ರವೇ ನೀವು ಶುಭ ಸುದ್ದಿಗಳನ್ನು ಪಡೆಯುತ್ತೀರಿ.
ಮೀನ ರಾಶಿಯಲ್ಲಿ ಶುಕ್ರನ ಸಂಕ್ರಮಣವು ಕನ್ಯಾ ರಾಶಿಯವರಿಗೆ ಶುಭ ಫಲವನ್ನು ನೀಡಲಿದೆ. ಹೊಸ ವರ್ಷದ ಆರಂಭದಲ್ಲೇ ಸಾಕಷ್ಟು ಆದಾಯ ನಿಮ್ಮ ಕೈ ಸೇರಲಿದೆ. ಶುಕ್ರ ದೇವರ ವಿಶೇಷ ಕೃಪೆಯಿಂದ ನೀವು ಜಮೀನು, ಮನೆ, ವಾಹನ ಖರೀದಿಸಬಹುದು. ಹೊಸ ಕೆಲಸ ಮಾಡುವ ಅವಕಾಶ ಸಿಗಲಿದೆ. ಮುಂಬರುವ ವರ್ಷ ವಿಶೇಷವಾಗಿ ಬಟ್ಟೆ ಅಂಗಡಿಗಳಲ್ಲಿ ಕೆಲಸ ಮಾಡುವ ಜನರು, ಮಾಡೆಲಿಂಗ್, ಕಬ್ಬಿಣದ ಸಾಮಾನುಗಳ ಅಂಗಡಿಯಲ್ಲಿ ಕೆಲಸ ಮಾಡುವವರಿಗೆ ಸಾಕಷ್ಟು ಧನಲಾಭವಿದೆ. ಅವಿವಾಹಿತರು ಮುಂದಿನ ದಿನಗಳಲ್ಲಿ ಹಣ ಸಂಪಾದಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಜೀವನದಲ್ಲಿ ದೊಡ್ಡ ಯಶಸ್ಸು ಸಿಗಲಿದೆ. ನೀವು ಆರ್ಥಿಕವಾಗಿಯೂ ಸಹ ಉತ್ತಮ ಸ್ಥಿತಿಯಲ್ಲಿರುತ್ತೀರಿ.
ಮೀನ ರಾಶಿಯಲ್ಲಿ ಶುಕ್ರ ಸಂಕ್ರಮಣವು ವೃಶ್ಚಿಕ ರಾಶಿಯವರಿಗೆ ಸಾಕಷ್ಟು ಶುಭ ಫಲವನ್ನು ನೀಡಲಿದೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರು ಹೊಸ ವರ್ಷದಲ್ಲಿ ಅಧಿಕ ಲಾಭ ಗಳಿಸುವರು. ಮಾಧ್ಯಮ ಸಂಬಂಧಿತ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರ ಇಷ್ಟಾರ್ಥಗಳು ಶೀಘ್ರವೇ ಈಡೇರುತ್ತವೆ. ಬಟ್ಟೆ ಮತ್ತು ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುವ ಜನರ ಆದಾಯ ಹೆಚ್ಚುತ್ತದೆ. ನೀವು ವ್ಯಾಪಾರವನ್ನು ಮತ್ತಷ್ಟು ವಿಸ್ತರಿಸುವಿರಿ. ಸ್ವಂತ ಕಾರ್ಖಾನೆಗಳನ್ನು ಹೊಂದಿರುವವರ ಕೆಲಸವು ವೇಗಗೊಳ್ಳುತ್ತದೆ. ವ್ಯಾಪಾರ ವಿಸ್ತರಣೆಯಾದಂತೆ ಲಾಭವೂ ಹೆಚ್ಚಾಗುತ್ತದೆ. ಅನಾರೋಗ್ಯದಿಂದ ಬಳಲುತ್ತಿರುವವರ ಆರೋಗ್ಯ ಸುಧಾರಿಸುತ್ತದೆ. ಆರ್ಥಿಕ ಪರಿಸ್ಥಿತಿಯೂ ತುಂಬಾ ಸುಧಾರಣೆಯಾಗಲಿದೆ.