Vastu Shastra Tips: ಈ ದಿಕ್ಕಿಗೆ ಮುಖ ಮಾಡಿ ಎಂದಿಗೂ ಆಹಾರ ಸೇವಿಸಬೇಡಿ

ವಾಸ್ತು ಶಾಸ್ತ್ರದ ಪ್ರಕಾರ, ಆಹಾರ ಸೇವಿಸುವಾಗ ಸರಿಯಾದ ದಿಕ್ಕಿನಲ್ಲಿ ಕುಳಿತು ತಿನ್ನುವುದು ಬಹಳ ಮುಖ್ಯ. ಇಲ್ಲದಿದ್ದರೆ, ಇದು ನಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. 

Vastu tips for eating food in Kannada: ಆಹಾರವು ನಮ್ಮ ಆರೋಗ್ಯ ಮತ್ತು ಶಕ್ತಿಗೆ ನೇರವಾಗಿ ಸಂಬಂಧಿಸಿದೆ, ಆದ್ದರಿಂದ ವಾಸ್ತು ಶಾಸ್ತ್ರದಲ್ಲಿ, ಆಹಾರ ಸೇವಿಸುವಾಗ ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಸೇವಿಸುವಂತೆ ತಿಳಿಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಆಹಾರ ಸೇವಿಸುವಾಗ ಸರಿಯಾದ ದಿಕ್ಕಿನಲ್ಲಿ ಕುಳಿತು ತಿನ್ನುವುದು ಬಹಳ ಮುಖ್ಯ. ಇಲ್ಲದಿದ್ದರೆ, ಇದು ನಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಆಹಾರ ಸೇವಿಸುವಾಗ ಯಾವಾಗಲೂ ಸರಿಯಾದ ದಿಕ್ಕಿಗೆ ಮುಖಮಾಡಿ ಕೂರಬೇಕು.  ವಾಸ್ತು ಶಾಸ್ತ್ರದ ಪ್ರಕಾರ, ಪೂರ್ವಾಭಿಮುಖವಾಗಿ ಕುಳಿತು ಆಹಾರವನ್ನು ಸೇವಿಸುವುದು ಉತ್ತಮ. ಹೀಗೆ ಮಾಡುವುದರಿಂದ ದೇಹಕ್ಕೆ ಧನಾತ್ಮಕ ಶಕ್ತಿ ದೊರೆಯುತ್ತದೆ. ಆಹಾರವು ಚೆನ್ನಾಗಿ ಜೀರ್ಣವಾಗುತ್ತದೆ ಎಂದು ಹೇಳಲಾಗುತ್ತದೆ.

2 /5

ಇದಲ್ಲದೆ, ಉತ್ತರಾಭಿಮುಖವಾಗಿ ಕುಳಿತು ಆಹಾರ ಸೇವಿಸುವುದು ಕೂಡ ಒಳ್ಳೆಯದು. ಇದು ಮಾನಸಿಕ ಒತ್ತಡ ಮತ್ತು ರೋಗಗಳನ್ನು ನಿವಾರಿಸುತ್ತದೆ. ಆರೋಗ್ಯ ಚೆನ್ನಾಗಿಯೇ ಇರುತ್ತದೆ. ಮನಸ್ಸು ಚುರುಕಾಗಿರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಹಣ, ಜ್ಞಾನ ಅಥವಾ ಇತರ ಜ್ಞಾನವನ್ನು ಗಳಿಸಲು ಬಯಸುವ ಜನರು ಯಾವಾಗಲೂ ಉತ್ತರಾಭಿಮುಖವಾಗಿ ಕುಳಿತು ಆಹಾರವನ್ನು ಸೇವಿಸಬೇಕು. ಇದಲ್ಲದೆ, ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸುವ ಜನರು ಉತ್ತರ ದಿಕ್ಕಿಗೆ ಮುಖಮಾಡಿ ಆಹಾರವನ್ನು ಸೇವಿಸುವುದರಿಂದ ಶುಭ ಫಲಗಳು ದೊರೆಯುತ್ತವೆ ಎಂದು ನಂಬಲಾಗಿದೆ. 

3 /5

ವ್ಯಾಪಾರ ಮಾಡುವವರು ಅಥವಾ ತಮ್ಮ ಕೆಲಸದಲ್ಲಿ ತ್ವರಿತ ಪ್ರಗತಿಯನ್ನು ಬಯಸುವವರು ಪಶ್ಚಿಮಕ್ಕೆ ಮುಖ ಮಾಡಿ ಆಹಾರವನ್ನು ಸೇವಿಸಬೇಕು. ಇದು ಆರ್ಥಿಕ ಪ್ರಗತಿಗೆ ಕಾರಣವಾಗುತ್ತದೆ. 

4 /5

ವಾಸ್ತು ಶಾಸ್ತ್ರದ ಪ್ರಕಾರ, ದಕ್ಷಿಣಾಭಿಮುಖವಾಗಿ ಕುಳಿತು ಎಂದಿಗೂ ಸಹ ಆಹಾರವನ್ನು ಸೇವಿಸಬಾರದು. ಇದು ಯಮನ ದಿಕ್ಕು. ಈ ದಿಕ್ಕಿನಲ್ಲಿ ಕುಳಿತು ಆಹಾರವನ್ನು ಸೇವಿಸುವುದರಿಂದ ರೋಗಗಳು ಸುತ್ತುವರಿಯುತ್ತವೆ.  

5 /5

ವಾಸ್ತು ಶಾಸ್ತ್ರದ ಪ್ರಕಾರ, ಊಟದ ನಂತರ ರಾತ್ರಿ ಅಡುಗೆ ಮಾಡಿದ ಪಾತ್ರೆಗಳು ಮತ್ತು ತಟ್ಟೆಗಳನ್ನು ಹಾಗೆ ಬಿಟ್ಟು ಮಲಗಬಾರದು. ರಾತ್ರಿಯಲ್ಲಿ ಅಡುಗೆ ಮನೆಯನ್ನು ಕೊಳಕು ಬಿಟ್ಟರೆ ಅದು ಬಡತನವನ್ನು ಆಹ್ವಾನಿಸಿದಂತೆ ಎಂದು ಹೇಳಲಾಗುತ್ತದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ