Vastu Tips For Tulsi: ಹಿಂದೂ ಧರ್ಮದಲ್ಲಿ ತುಳಸಿ ಸಸ್ಯವನ್ನು ಪವಿತ್ರ ಸಸ್ಯ ಎಂದು ಹೇಳಲಾಗುತ್ತದೆ. ಹಾಗಾಗಿಯೇ, ಈ ಸಸ್ಯಕ್ಕೆ ಪೂಜನೀಯ ಪ್ರಾಶಸ್ತ್ಯವನ್ನು ನೀಡಲಾಗಿದೆ. ಆದರೆ, ವಾಸ್ತು ಪ್ರಕಾರ, ಈ ತುಳಸಿ ಸಸ್ಯವನ್ನು ಮನೆಯ ಕೆಲವು ಭಾಗಗಳಲ್ಲಿ ಇಡುವುದರರಿಂದ ಮನೆಯ ಶಾಂತಿಗೆ ಭಂಗ ಬರಬಹುದು ಎಂದು ನಿಮಗೆ ತಿಳಿದಿದೆಯೇ?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://youtu.be/--phA9ji8NM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಹಿಂದೂ ಧರ್ಮದಲ್ಲಿ ಪೂಜನೀಯ ಸ್ಥಾನಮಾನ ಪಡೆದಿರುವ ತುಳಸಿ ಸಸ್ಯವನ್ನು ಮನೆಯ ಕೆಲವು ಜಾಗಗಳಲ್ಲಿ ಇಡಲೇಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.
ವಾಸ್ತುವಿನ ಪ್ರಕಾರ, ಮನೆಯ ಈ ಭಾಗಗಳಲ್ಲಿ ತುಳಸಿ ಸಸ್ಯವನ್ನು ಇಡುವುದರಿಂದ ಅಂತಹ ಮನೆಯಲ್ಲಿ ಸುಖ-ಸಂತೋಷ ಕಣ್ಮರೆಯಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಮನೆಯ ಯಾವ ಜಾಗಗಳಲ್ಲಿ ತುಳಸಿ ಸಸ್ಯವನ್ನು ಇಡಬಾರದು ಎಂದು ತಿಳಿಯೋಣ...
ವಾಸ್ತು ಶಾಸ್ತ್ರದ ಪ್ರಕಾರ, ಅತ್ಯಂತ ಮಂಗಳಕರ ಸಸ್ಯವಾದ ತುಳಸಿ ಸಸ್ಯವನ್ನು ಮನೆಯ ಕಸ ಇಡುವ ಜಾಗದಲ್ಲಿ ಇಡಬಾರದು. ಇದು ಮನೆಯಲ್ಲಿ ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ.
ವಾಸ್ತು ಪ್ರಕಾರ, ತುಳಸಿ ಸಸ್ಯವನ್ನು ಕತ್ತಲೆ ಕೋಣೆಯಲ್ಲಿ, ಬೆಳಕು ಬಾರದೇ ಇರುವ ಮೂಲೆಯಲ್ಲಿ ಎಂದಿಗೂ ಇಡಬಾರದು ಎಂದು ಹೇಳಲಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ಎಂದಿಗೂ ಸಹ ತುಳಸಿ ಸಸ್ಯದೊಂದಿಗೆ ಗಣೇಶನ ವಿಗ್ರಹವಾಗಲಿ, ಇಲ್ಲವೇ, ಗಣೇಶನ ಚಿತ್ರವನ್ನಾಗಲಿ ಇಡಬಾರದು. ಇದು ತುಳಸಿ ಮಾತೆಯ ಕೋಪಕ್ಕೆ ಕಾರಣವಾಗಬಹುದು ಎನ್ನಲಾಗುತ್ತದೆ.
ವಾಸ್ತುವಿನ ಪ್ರಕಾರ, ಶಿವನ ವಿಗ್ರಹ, ಇಲ್ಲವೇ ಚಿತ್ರದೊಂದಿಗೂ ಸಹ ತುಳಸಿ ಸಸ್ಯವನ್ನು ಇಡಬಾರದು. ಇದರಿಂದಾಗಿ ಮನೆಯಲ್ಲಿ ಸಂಪತ್ತಿನ ಕೊರತೆ ಉಂಟಾಗುವುದು. ಮಾತ್ರವಲ್ಲ, ಮನೆಯ ನೆಮ್ಮದಿಗೆ ಭಂಗ ಬರಬಹುದು ಎನ್ನಲಾಗುತ್ತದೆ.
ಕೆಲವರು ಮನೆಯ ಛಾವಣಿಯ ಮೇಲೆ ತುಳಸಿ ಸಸ್ಯವನ್ನು ಇಡುತ್ತಾರೆ. ಆದರೆ, ನಿಮ್ಮ ಈ ತಪ್ಪು ಮನೆಯಲ್ಲಿ ಸುಖ-ಸಂತೋಷವನ್ನು ಕಸಿಯುವುದರ ಜೊತೆಗೆ ಬಡತನಕ್ಕೂ ಕಾರಣವಾಗಬಹುದು ಎಂದು ಹೇಳಲಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.