Hair Care Tips: ಕೂದಲಿನ ಹಲವು ಸಮಸ್ಯೆಗಳಿಗೆ ವರದಾನವಿದ್ದಂತೆ ಈ ಬೀಜಗಳು

Hair Care Tips: ಕೂದಲು ಉದುರುವಿಕೆ, ತಲೆಹೊಟ್ಟಿನ ಸಮಸ್ಯೆ, ಒರಟಾದ ಕೂದಲು ಸೇರಿದಂತೆ ಕೂದಲಿನ ಹಲವು ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಬೀಜಗಳ ಸಹಾಯದಿಂದ ಸುಲಭ ಪರಿಹಾರ ಪಡೆಯಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ಬದಲಾದ ವಾತಾವರಣವು ಕೂದಲಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಧೂಳು, ಮಾಲಿನ್ಯ, ಕಳಪೆ ಆಹಾರ ಪದ್ದತಿ, ಜೀವನಶೈಲಿಯೂ ಕೂದಲಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದರೆ, ನಿಮಗೆ ಸುಲಭವಾಗಿ ಲಭ್ಯವಿರುವ ಕೆಲವು ಬೀಜಗಳ ಸಹಾಯದಿಂದ ನಿಮ್ಮ ಕೂದಲಿನ ಹಲವು ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು. ಅವುಗಳೆಂದರೆ... 

2 /6

ಸೂರ್ಯಕಾಂತಿ ಬೀಜಗಳು:  ಸೂರ್ಯಕಾಂತಿ ಎಣ್ಣೆ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂದು ನಿಮಗೆ ತಿಳಿದೇ ಇದೆ. ಅಂತೆಯೇ ಸೂರ್ಯಕಾಂತಿ ಬೀಜಗಳಲ್ಲಿಯೂ ಪೋಷಕಾಂಶಗಳು ಸಮೃದ್ಧವಾಗಿದ್ದು, ಇದು ಆರೋಗ್ಯಕರ ಕೂದಲಿಗೆ ಅಗತ್ಯವಾದ ಸತು ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ. ಇದರ ಬಳಕೆಯಿಂದ ಆರೋಗ್ಯಕರ ಕೂದಲನ್ನು ಹೊಂದಬಹುದು. 

3 /6

ಕುಂಬಳಕಾಯಿ ಬೀಜಗಳು:  ಕುಂಬಳಕಾಯಿ ಬೀಜಗಳಲ್ಲಿ ಕಬ್ಬಿಣ ಮತ್ತು ವಿಟಮಿನ್ ಸಿ ಕಂಡು ಬರುತ್ತದೆ. ಇದರಿಂದ ಸ್ಪ್ಲಿಟ್ ಹೇರ್ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಜೊತೆಗೆ ಕೂದಲು ಉದುರುವಿಕೆ ಸಮಸ್ಯೆಯಿಂದಲೂ ಸುಲಭ ಪರಿಹಾರ ಪಡೆಯಬಹುದು. 

4 /6

ಮೆಂತ್ಯ ಬೀಜಗಳು:  ಆಯುರ್ವೇದದಲ್ಲಿ ಮೆಂತ್ಯ ಬೀಜಗಳನ್ನು ಕೂದಲಿಗೆ ವರದಾನವಿದ್ದಂತೆ ಎಂದು ಹೇಳಲಾಗುತ್ತದೆ. ಇದರ ಬಳಕೆಯಿಂದ ನೆತ್ತಿಯನ್ನು ತಂಪಾಗಿಸಬಹುದು. ಜೊತೆಗೆ ಸೊಂಪಾದ, ಉದ್ದವಾದ, ಹೊಳೆಯುವ ಕೂದಲನ್ನು ನಿಮ್ಮದಾಗಿಸಬಹುದು. 

5 /6

ನೆಲ್ಲಿಕಾಯಿ ಬೀಜಗಳು:  ಕೂದಲಿನ ಹಲವು ಸಮಸ್ಯೆಗಳಿಗೆ ನೆಲ್ಲಿಕಾಯಿ ಎಷ್ಟು ಪ್ರಯೋಜನಕಾರಿ ಎಂದು ನಿಮಗೆ ತಿಳಿದಿರಬಹುದು. ಆದರೆ, ನೆಲ್ಲಿಕಾಯಿ ಮಾತ್ರವಲ್ಲ ಅದರ ಬೀಜಗಳಲ್ಲೂ ಕೂದಲಿಗೆ ಅಗತ್ಯ ಪೋಷಕಾಂಶಗಳು ಸಮೃದ್ಧವಾಗಿವೆ. ಇದರಲ್ಲಿರುವ ಆ್ಯಂಟಿ ಫಂಗಲ್ ಮತ್ತು ಆ್ಯಂಟಿಆಕ್ಸಿಡೆಂಟ್ ನಂತಹ ಗುಣಗಳು ಕೂದಲನ್ನು ಬುಡದಿಂದಲೂ ರಕ್ಷಿಸುತ್ತದೆ. 

6 /6

ಎಳ್ಳು:  ಎಳ್ಳಿನಲ್ಲಿ  ವಿಟಮಿನ್ ಮತ್ತು ಕೊಬ್ಬಿನಾಮ್ಲಗಳು ಹೇರಳವಾಗಿದ್ದು ಇದರ ಬಳಕೆಯಿಂದ ಕೂದಲು ಬಲಗೊಳ್ಳುತ್ತದೆ.   ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.