Vastu Tips: ಮುಸ್ಸಂಜೆ ವೇಳೆ ಈ ಕೆಲಸಗಳನ್ನು ಮಾಡುವುದರಿಂದ ಮನೆಯಲ್ಲಿ ತಾಂಡವವಾಡುತ್ತೆ ಬಡತನ

Vastu Tips: ವಾಸ್ತು ಶಾಸ್ತ್ರದ ಪ್ರಕಾರ, ಸಂಜೆ ವೇಳೆ ಮನೆಯಲ್ಲಿ ಯಾವ ಕೆಲಸಗಳನ್ನು ಮಾಡುವುದನ್ನು ತಪ್ಪಿಸಬೇಕು ತಿಳಿಯಿರಿ.

Vastu Tips: ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾವು ನಮಗೆ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಮಾಡುವ ಕೆಲವು ತಪ್ಪುಗಳು ಮನೆಯಲ್ಲಿ ನೆಲೆಸಿರುವ ಸಂಪತ್ತಿನ ಅಧಿದೇವತೆ ತಾಯಿ ಮಹಾಲಕ್ಷ್ಮಿ ಕೋಪಕ್ಕೆ ಕಾರಣವಾಗುತ್ತದೆ. ಅದರಲ್ಲೂ ಸೂರ್ಯಾಸ್ತದ ನಂತರ, ಮುಸ್ಸಂಜೆ ವೇಳೆಯಲ್ಲಿ ಮಾಡುವ ಕೆಲವು ಕೆಲಸಗಳು ಮನೆಯಲ್ಲಿ ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಅಂತಹ ಮನೆಯಲ್ಲಿ ತಾಯಿ ಲಕ್ಷ್ಮಿಯು ಕ್ಷಣವೂ ಇರಲು ಇಷ್ಟ ಪಡುವುದಿಲ್ಲ. ಇದರಿಂದಾಗಿ ಅಂತಹ ಮನೆಯಲ್ಲಿ ಬಡತನ ಎಂಬುದು ತಾಂಡವವಾಡುತ್ತದೆ ಎಂದು ಹೇಳಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಸಂಜೆ ವೇಳೆ ಮನೆಯಲ್ಲಿ ಯಾವ ಕೆಲಸಗಳನ್ನು ಮಾಡುವುದನ್ನು ತಪ್ಪಿಸಬೇಕು ತಿಳಿಯಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಸಾಲ ನೀಡುವುದನ್ನು ತಪ್ಪಿಸಿ: ವಾಸ್ತು ಶಾಸ್ತ್ರದ ಪ್ರಕಾರ,  ಸೂರ್ಯಾಸ್ತದ ನಂತರ ಯಾರಿಗೂ ಕೂಡ ಹಣವನ್ನು ನೀಡಬಾರದು. ಅದು ನೀವು ಬೇರೆಯವರಿಂದ ಪಡೆದಿರುವ ಹಣವೇ ಆದರೂ ಸಹ ಮುಸ್ಸಂಜೆಯಲ್ಲಿ, ಸೂರ್ಯಾಸ್ತದ ಬಳಿಕ ಯಾರಿಗಾದರೂ ಹಣ ನೀಡುವುದನ್ನು ತಪ್ಪಿಸಿ.

2 /5

ಮುಸ್ಸಂಜೆಯಲ್ಲಿ ಯಾರನ್ನೂ ಬರಿಗೈಯಲ್ಲಿ ಕಳುಹಿಸಬೇಡಿ: ವಾಸ್ತು ಶಾಸ್ತ್ರದ ಪ್ರಕಾರ, ಮುಸ್ಸಂಜೆಯಲ್ಲಿ ಮನೆಗೆ ಬರುವ ಅತಿಥಿಗಳನ್ನು, ನಿರ್ಗತಿಕರು ಅಥವಾ ಬಡವರನ್ನು ಎಂದಿಗೂ ಖಾಲಿ ಕೈಯಲ್ಲಿ ಹಿಂದಿರುಗಿ ಕಳುಹಿಸಬಾರದು. ಸಂಜೆ ವೇಳೆಯಲ್ಲಿ ನಿಮ್ಮ ಮನೆಗೆ ಯಾರೇ ಬಂದರೂ ನಿಮ್ಮ ಕೈಲಾದದ್ದನ್ನು ಕೊಟ್ಟು ಕಳುಹಿಸಿ.

3 /5

ಜಗಳವನ್ನು ತಪ್ಪಿಸಿ: ಸೂರ್ಯಾಸ್ತದ ವೇಳೆ ಅಥವಾ ಸೂರ್ಯಾಸ್ತದ ನಂತರ ಮನೆಯಲ್ಲಿ ಯಾವುದೇ ರೀತಿಯ ಜಗಳವಾಡುವುದನ್ನು ತಪ್ಪಿಸಿ. ಮುಸ್ಸಂಜೆ ಲಕ್ಷ್ಮಿ ಮನೆಗೆ ಬರುವ ಹೊತ್ತು. ಈ ಸಮಯದಲ್ಲಿ ಜಗಳವಾಡುವುದರಿಂದ ತಾಯಿ ಮಹಾಲಕ್ಷ್ಮಿ ಕುಪಿತಗೊಳ್ಳಬಹುದು.

4 /5

ತುಳಸಿಗೆ ಸಂಬಂಧಿಸಿದ ಈ ನಿಯಮವನ್ನು ಪಾಲಿಸಿ: ತುಳಸಿ ಲಕ್ಷ್ಮಿ ಸ್ವರೂಪಿಣಿ. ಸಂಜೆ ವೇಳೆ ತಪ್ಪದೇ ತುಳಸಿ ಗಿಡದ ಕೆಳಗೆ ದೀಪ ಹಚ್ಚಿ. ಆದರೆ, ಯಾವುದೇ ಕಾರಣಕ್ಕೂ ತುಳಸಿಯನ್ನು ಸ್ಪರ್ಶಿಸಬೇಡಿ. 

5 /5

ಮನೆಯ ಮುಖ್ಯ ಬಾಗಿಲನ್ನು ತೆರೆದಿಡಿ: ವಾಸ್ತು ಪ್ರಕಾರ, ಸಂಜೆ ವೇಳೆ ತಾಯಿ ಲಕ್ಷ್ಮಿಯು ಮನೆಯನ್ನು ಪ್ರವೇಶಿಸುತ್ತಾಳೆ. ಈ ಸಂದರ್ಭದಲ್ಲಿ ಮನೆಯ ಬಾಗಿಲು ತೆರೆದಿರಬೇಕು ಎಂದು ಹೇಳಲಾಗುತ್ತದೆ. ಹಾಗಾಗಿ, ಸಂಜೆ ವೇಳೆ ಯಾವುದೇ ಕಾರಣಕ್ಕೂ ಮನೆಯ ಮುಖ್ಯ ಬಾಗಿಲನ್ನು ಮುಚ್ಚಿಡಬೇಡಿ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.