ENG vs PAK World Record: ಟೆಸ್ಟ್ ಇತಿಹಾಸದಲ್ಲಿ 101 ವರ್ಷಗಳ ಹಳೆಯ ವಿಶ್ವದಾಖಲೆ ಉಡೀಸ್! ಈ ಸಾಧನೆ ಮಾಡಿದ್ದು ಇವರೇ

ENG vs PAK World Record: ಕ್ರಿಕೆಟ್ ಜಗತ್ತಿನಲ್ಲಿ ಅದೆಷ್ಟೋ ದಾಖಲೆಗಳು ನಿರ್ಮಾಣವಾಗಿವೆ. ಒಬ್ಬರು ಮಾಡಿರುವ ದಾಖಲೆಯನ್ನು ಮತ್ತೊಬ್ಬರು ಮುರಿಯುವುದು ಸಾಮಾನ್ಯ. ಆದರೆ ಕೆಲವು ವಿಶ್ವ ದಾಖಲೆಯನ್ನು ಮುಟ್ಟಲೂ ಸಾಧ್ಯವಾಗೋದಿಲ್ಲ. ಇದೀಗ ಅಂತಹ ದಾಖಲೆಯೊಂದನ್ನು ಇಂಗ್ಲೆಂಡ್-ಪಾಕಿಸ್ತಾನ ತಂಡ ಮುರಿದು ಐತಿಹಾಸಿಕ ಸಾಧನೆ ಮಾಡಿದೆ.

1 /5

ರಾವಲ್ಪಿಂಡಿಯಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 74 ರನ್​ಗಳ ಭರ್ಜರಿ ಜಯ ಸಾಧಿಸಿದ್ದು, ಈ ಗೆಲುವಿನ ಜೊತೆಗೆ 101 ವರ್ಷಗಳ ಹಳೆಯ ವಿಶ್ವ ದಾಖಲೆ ಉಡೀಸ್ ಮಾಡಿದೆ.

2 /5

ಟೆಸ್ಟ್ ಪಂದ್ಯದಲ್ಲಿ ಅತ್ಯಧಿಕ ರನ್​ ಗಳಿಸಿದ ದಾಖಲೆ ಇದೀಗ ಇಂಗ್ಲೆಂಡ್-ಪಾಕಿಸ್ತಾನ ತಂಡಗಳ ಪಾಲಾಗಿದೆ. ಈ ಪಂದ್ಯದಲ್ಲಿ ಉಭಯ ತಂಡಗಳು ಒಟ್ಟು 1768 ರನ್ ​ಗಳಿಸಿದೆ. ಇದು ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದೆ.

3 /5

ಈ ವಿಶ್ವ ದಾಖಲೆ ಮೊದಲು ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಹೆಸರಿನಲ್ಲಿತ್ತು. 1921 ರಲ್ಲಿ ಅಡಿಲೇಡ್‌ನಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳು ಒಟ್ಟು 1753 ರನ್ ಕಲೆಹಾಕಲಾಗಿತ್ತು.

4 /5

ಇದೀಗ 101 ವರ್ಷಗಳ ಬಳಿಕ ಇಂಗ್ಲೆಂಡ್ ತಂಡವು ಪಾಕಿಸ್ತಾನವನ್ನು ಮಣಿಸಿ ಈ ವಿಶ್ವ ದಾಖಲೆಯನ್ನು ಬರೆದಿದೆ. ಈ ಟೆಸ್ಟ್‌ನಲ್ಲಿ ಒಟ್ಟು 7 ಶತಕ  ಬಾರಿಸಲಾಗಿದ್ದು, 4 ಶತಕ ಇಂಗ್ಲೆಂಡ್ ತಂಡದ್ದಾದರೆ, 3 ಶತಕ ಪಾಕಿಸ್ತಾನದ್ದಾಗಿದೆ. ಇದು ಟೆಸ್ಟ್ ಇತಿಹಾಸದಲ್ಲೇ ಒಂದು ಪಂದ್ಯದಲ್ಲಿ ಮೂಡಿಬಂದ ಅತ್ಯಧಿಕ ಶತಕವಾಗಿದೆ. ಈ ಮೂಲಕ ಇದೂ ಕೂಡ ವಿಶ್ವ ದಾಖಲೆ ಪಟ್ಟಿ ಸೇರಿದೆ.

5 /5

ಈ ಮೊದಲು 1921ರಲ್ಲಿ ಆಡಿಲೇಡ್‌ನಲ್ಲಿ ಆಡಿದ ಟೆಸ್ಟ್​ನಲ್ಲಿ 5 ಶತಕಗಳು ಮೂಡಿಬಂದಿತ್ತು. ಇನ್ನೊಂದೆಡೆ 17 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಇಂಗ್ಲೆಂಡ್ ಟೆಸ್ಟ್ ಸರಣಿ ಆಡಿದೆ. ಅಷ್ಟೇ ಅಲ್ಲದೆ ಪಾಕಿಸ್ತಾನವನ್ನು ತವರು ನೆಲದಲ್ಲಿ ಮಣಿಸಿ ಟೆಸ್ಟ್ ಪಂದ್ಯವನ್ನು ಗೆದ್ದಿದ್ದಾರೆ.