Vastu shastra: ಮನೆ ಕಟ್ಟುವಾಗ ಪ್ರತಿಯೊಬ್ಬರೂ ಗಮನಿಸಬೇಕಾದ ಅಂಶಗಳು

Vastu Tips for House: ಮನೆ ಕಟ್ಟುವಾಗ ಅದು ಎಲ್ಲಾ ರೀತಿಯಿಂದಲೂ ನಮಗೆ ಶುಭವಾಗಿರಬೇಕೆಂದು ಬಯಸುತ್ತೇವೆ. ಹೀಗಾಗಿ ಮನೆ ಕಟ್ಟಬೇಕಾದರೆ ಕೆಲವು ಪ್ರಮುಖ ಅಂಶಗಳನ್ನು ಗಮನಿಸಬೇಕು. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

ನವದೆಹಲಿ: ‘ಮನೆ ಕಟ್ಟಿ ನೋಡು ಒಂದು ಮದುವೆ ಮಾಡಿ ನೋಡು’ ಎಂಬ ಗಾದೆಯೇ ಇದೆ. ಮನೆ ಕಟ್ಟುವಾಗ ಬಹುತೇಕರು ಕೆಲವು ತಪ್ಪುಗಳನ್ನು ಮಾಡುತ್ತಾರೆ. ಸಂಪೂರ್ಣವಾಗಿ ಮನೆ ಕಟ್ಟಿದ ಮೇಲೆ ಈ ತಪ್ಪುಗಳು ಅವರಿಗೆ ಗೊತ್ತಾಗುತ್ತವೆ. ಆಗ ಅವರು ಅಯ್ಯೋ ಈ ರೀತಿಯ ತಪ್ಪು ಮಾಡಬಾರದಿತ್ತು ಅಂದುಕೊಳ್ಳುತ್ತಾರೆ. ಮನೆ ಕಟ್ಟುವಾಗ ಅದು ಎಲ್ಲಾ ರೀತಿಯಿಂದಲೂ ನಮಗೆ ಶುಭವಾಗಿರಬೇಕೆಂದು ಬಯಸುತ್ತೇವೆ. ಆ ಮನೆ ನಮಗೆ ಅದೃಷ್ಟದ ಮನೆಯಾಗಬೇಕೆಂದು ಬಯಸುತ್ತೇವೆ. ಹೀಗಾಗಿ ಮನೆ ಕಟ್ಟಬೇಕಾದರೆ ಕೆಲವು ಪ್ರಮುಖ ಅಂಶಗಳನ್ನು ಗಮನಿಸಬೇಕು. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕದೇಶವಿದೇಶಮನರಂಜನೆಶಿಕ್ಷಣಉದ್ಯೋಗಆರೋಗ್ಯಜೀವನಶೈಲಿಆಧ್ಯಾತ್ಮ,  ಕ್ರೀಡೆಕ್ರೈಂವೈರಲ್ವ್ಯಾಪಾರತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಮನೆಯ ಬಾಗಿಲು ಉತ್ತರ ಅಥವಾ ಪೂರ್ವದ ಕಡೆ ಇರಬೇಕು. ಮನೆಯ ಮುಂದುಗಡೆ 3 ದಾರಿಯಿದ್ದರೆ ಆ ಮನೆಯಲ್ಲಿ ವಾಸಿಸುವವರಿಗೆ ಮಾನಸಿಕ ಒತ್ತಡ ಅಧಿಕವಿರುತ್ತದೆ. ಹೀಗಾಗಿ ಇದರ ಬಗ್ಗೆ ಎಚ್ಚರಿಕೆ ವಹಿಸುವುದು ಉತ್ತಮ.

2 /5

ಮನೆ ಪೌಂಡೇಷನ್ ಅಥವಾ ಅಡಿಪಾಯಕ್ಕೆ ಮಣ್ಣು ತೆಗೆಯುವಾಗ ಮೊದಲು ಪೂರ್ವದಿಂದ ತೆಗೆದು ನಂತರ ಉತ್ತರ, ಪಶ್ಚಿಮ ಕೊನೆಯದಾಗಿ ದಕ್ಷಿಣ ದಿಕ್ಕಿನಲ್ಲಿ ಮಣ್ಣು ತೆಗೆಯಬೇಕು. ಹೀಗೆ ಮಾಡುವುದರಿಂದ ನಿಮಗೆ ಯಾವುದೇ ವಾಸ್ತುದೋಷದ ಸಮಸ್ಯೆ ಕಾಡುವುದಿಲ್ಲ.

3 /5

ರಸ್ತೆಗೆ ತುಂಬಾ ಸಮೀಪವಿರುವ ಜಾಗ ಮನೆ ಕಟ್ಟಲು ಅಷ್ಟು ಒಳ್ಳೆಯದಲ್ಲ. ಹೀಗಾಗಿ ರಸ್ತೆಯಿಂದ ಸ್ವಲ್ಪ ದೂರವಿರುವ ಜಾಗವನ್ನೇ ಮನೆ ಕಟ್ಟಲು ಆಯ್ದುಕೊಳ್ಳಿರಿ. ಹೀಗೆ ಮಾಡಿದ್ರೆ ನಿಮಗೆ ಯಾವುದೇ ತೊಂದರೆಗಳಿರುವುದಿಲ್ಲ.

4 /5

ಮನೆಯ ಮುಂಬಾಗಿಲು ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿರಬೇಕು. ದಕ್ಷಿಣ ಭಾಗದಲ್ಲಿ ಮನೆಯ ಮುಂಭಾಗಲು ಇರುವುದು ಮನೆಗೆ ಶ್ರೇಯಸ್ಸು ತರುವುದಿಲ್ಲ. ಹೀಗಾಗಿ ಈ ಅಂಶದ ಬಗ್ಗೆ ನೀವು ಸ್ವಲ್ಪ ಗಮನಹರಿಸಬೇಕು.

5 /5

ನೈರುತ್ಯ ದಿಕ್ಕಿನಲ್ಲಿ ಮನೆಯ ಯಾವುದೇ ಬಾಗಿಲು ಇರಬಾರದು. ಮನೆಯ ಬಾಗಿಲು ತೆರೆದಾಗ ಒಳಗೆ ಹೋಗುವಂತಿರಬೇಕು, ಹೊರಗಡೆ ಬರುವಂತೆ ಇರಬಾರದು. ಮನೆ ಬಾಗಿಲು ತೆರೆದಾಗ ಅದು ಒಳಗಡೆ ಹೋಗುವಂತಿದ್ದರೆ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಇಲ್ಲದಿದ್ದರೆ ನಕಾರಾತ್ಮಕ ಶಕ್ತಿ ಆವರಿಸಿ ಮಾನಸಿಕ ನೆಮ್ಮದಿಗೆ ಭಂಗವನ್ನುಂಟು ಮಾಡುತ್ತದೆ.