BBK10: ವರ್ತೂರ್‌ ತೊಡೆ ಮೇಲಿರುವ ಸ್ವಾಮೀಜಿ ಹೇಳಿದ ಆ ಟ್ಯಾಟೂ ಇದೆ ನೋಡಿ.. ಯಾವಾಗ, ಯಾಕೆ ಹಾಕಿಸಿದ್ದು ಗೊತ್ತೇ!

ಬಿಗ್‌ ಬಾಸ್‌ ನಲ್ಲಿ ವರ್ತೂರ್‌ ಬಗ್ಗೆ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಹೇಳಿದ ಆ ಮಾತು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

Varthur Santhosh Tattoo: ಬಿಗ್‌ ಬಾಸ್‌ ನಲ್ಲಿ ವರ್ತೂರ್‌ ಬಗ್ಗೆ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಹೇಳಿದ ಆ ಮಾತು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

1 /6

ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ಸ್ಪರ್ಧಿ ವರ್ತೂರ್‌ ಸಂತೋಷ್‌ ಮೈ ಮೇಲೆ ಹಲವಾರು ಟ್ಯಾಟೂ ಗಳವೆ. ವರ್ತೂರ್‌ ಕೈ ಮೇಲೆ, ಮುಂಗೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇವೆಲ್ಲ ನೋಡುವವರ ಕಣ್ಣಿಗೆ ಸುಲಭವಾಗಿ ಕಾಣುತ್ತವೆ.

2 /6

ವರ್ತೂರ್‌ ಸಂತೋಷ್‌ ಅವರ ಮೈ ಮೇಲೆ ಕಾಣದ ಜಾಗದಲ್ಲಿ ಟ್ಯಾಟೂ ಒಂದನ್ನು ಹಾಕಿಸಿಕೊಂಡಿದ್ದಾರೆ. ಈ ಬಗ್ಗೆ ಬಿಗ್‌ ಬಾಸ್‌ ಮನೆಗೆ ಬಂದ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಸಹ ಮಾತನಾಡಿದ್ದಾರೆ.

3 /6

ವರ್ತೂರ್‌ ತೊಡೆಯ ಮೇಲಿರುವ ಈ ಟ್ಯಾಟೂ ಹಾಕಿಸಿಕೊಂಡ ದಿನದಿಂದಲೇ ಅವರಿಗೆ ನೆಮ್ಮದಿ ಹೊರಟು ಹೋಯಿತು ಎಂದು ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಹೇಳಿದ್ದಾರೆ. ವರ್ತೂರ್‌ ತೊಡೆಯ ಮೇಲಿರುವ ಈ ಟ್ಯಾಟೂ ತುಂಬಾ ವಿಶೇಷವಾಗಿದೆ. 

4 /6

ಹಳ್ಳಿಕಾರ್‌ ಒಡೆಯನ ಎಡಗಾಲಿನ ತೊಡೆಯ ಮೇಲೆ ಒಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇದು ವರ್ತೂರ್‌ ಸಂತೋಷ್‌ ಮನೆ ದೇವರಾದ ಕರಗ ದೇವರ ತ್ರಿಶೂಲಿನಂತಿರುವ ಟ್ಯಾಟೂ ಆಗಿದೆ. 

5 /6

ಹೋರಿ ಒಂದು ಬಂದು ವರ್ತೂರ್‌ ಅವರ ಎಡ ಭಾಗದ ತೊಡೆಗೆ ಹಾಯುತ್ತಂತೆ. ಆ ಹೋರಿ ತಿವಿತದ ಗಾಯದ ಕಲೆ ಹಾಗೆಯೇ ಉಳಿಯಿತಂತೆ. ಅದನ್ನು ಹೇಗಾದರೂ ಮರೆ ಮಾಡಬೇಕೆಂದು ವರ್ತೂರ್‌ ಯೋಚಿಸಿದರಂತೆ. 

6 /6

ಹೋರಿ ತಿವಿತದ ಗಾಯದ ಕಲೆಯನ್ನು ಮರೆಮಾಡಲು ವರ್ತೂರ್‌ ಈ ಟ್ಯಾಟೂ ಹಾಕಿಸಿದರಂತೆ ಎಂದು ಹೇಳಲಾಗಿದೆ. ಯಟ್ಯೂಬ್‌ ವಾಹಿನಿ ಸುದ್ದಿ ಕರ್ನಾಟಕಕ್ಕೆ ನೀಡಿದ್ದ ಸಂದರ್ಶನದಲ್ಲಿ ವರ್ತೂರ್‌ ಸಂತೋಷ್‌ ಈ ವಿಚಾರ ರಿವೀಲ್‌ ಮಾಡಿದ್ದರು.