ತುಳಸಿ ವಿವಾಹದ ದಿನ ಗಜಕೇಸರಿ ರಾಜಯೋಗ, ಶ್ರೀಹರಿಲಕ್ಷ್ಮಿ ಕೃಪೆಯಿಂದ ಈ ಜನರ ಜೀವನದಲ್ಲಿ ಗೋಲ್ಡನ್ ಟೈಮ್ ಆರಂಭ!

Tusli Vivah Horoscope 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ತುಳಸಿ ವಿವಾಹದ ಸಂದರ್ಭದಲ್ಲಿ ಗಜಕೇಸರಿ ರಾಜಯೋಗ ರೂಪುಗೊಂಡಿದೆ. ಹೀಗಿರುವಾಗ ಕೆಲ ರಾಶಿಗಳ ಜನರ ಮೇಲೆ ಶ್ರೀಹರಿ ಲಕ್ಷ್ಮಿಯ ಅಪಾರ ಕೃಪೆ ಇರಲಿದ್ದು, ಈ ಜನರಿಗೆ ಭಾರಿ ಧನ ಪ್ರಾಪ್ತಿಯ ಯೋಗ ರೂಪುಗೊಳ್ಳುತ್ತಿದೆ. (Spiritual News In Kannada)

ಬೆಂಗಳೂರು: ಪ್ರತಿ ವರ್ಷದ ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿ ತಿಥಿಯಂದು ತುಳಸಿ ವಿವಾಹ ನೆರವೇರಿಸಲಾಗುತ್ತದೆ. ಈ ಬಾರಿ ನವೆಂಬರ್ 24, 2023 ರಂದು ತುಳಸಿ ವಿವಾಹ ನೆರವೇರಲಿದೆ. ಈ ದಿನ ತಾಯಿ ಲಕ್ಷ್ಮಿ ಸ್ವರೂಪಿ ಎನ್ನಲಾಗುವ ತುಳಸಿ ಹಾಗೂ ಶ್ರೀವಿಷ್ಣುವಿನ ಸ್ವರೂಪ ಶಾಲಿಗ್ರಾಮ ವಿವಾಹ ನೆರವೇರಿಸುವುದರಿಂದ ಕನ್ಯಾ ದಾನಕ್ಕೆ ಸಮಾನ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತದೆ. ಈ ಬಾರಿ ತುಳಸಿ ವಿವಾಹದ ದಿನ ಗಜಕೇಸರಿ ಯೋಗ ನಿರ್ಮಾಣಗೊಳ್ಳುತಿದ್ದು, ಇದರಿಂದ ಕೆಲ ರಾಶಿಗಳ ಜನರಿಗೆ ಅಪಾರ ಧನ ಲಾಭ ಸಿಗಲಿದೆ. (Spiritual News In Kannada)

 

ಇದನ್ನೂ ಓದಿ-ಯುವಾವಸ್ಥೆಯಲ್ಲಿಯೇ ಬಿಳಿಕೂದಲು ಸಮಸ್ಯೆಯಿಂದ ತೊಂದರೆಗೀಡಾಗಿದ್ದೀರಾ? ಮನೆಯಲ್ಲಿ ತಯಾರಾಗುವ ಈ ಆಯುರ್ವೇದ ಎಣ್ಣೆ ಟ್ರೈ ಮಾಡಿ!

 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ 24 ನವೆಂಬರ್ 2023 ರಂದು ಸಂಜೆ 4 ಗಂಟೆಗೆ ಚಂದ್ರ ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಅಲ್ಲಿ ಆತ ನವೆಂಬರ್ 26, 2023ರ ಸಂದೆ 7 ಗಂಟೆ 55 ನಿಮಿಷದ ವರೆಗೆ ಇರಲಿದ್ದಾನೆ. ಆದರೆ, ಮೇಷ ರಾಶಿಯಲ್ಲಿ ಈಗಾಗಲೇ ದೇವಗುರು ಬೃಹಸ್ಪತಿ ವಿರಾಜಮಾನನಾಗಿರುವ ಕಾರಣ ಅಲ್ಲಿ ಚಂದ್ರ-ಗುರುವಿನ ಮೈತ್ರಿಯಿಂದ ಶಕ್ತಿಶಾಲಿ ಗಜಕೇಸರಿ ಯೋಗ ನಿರ್ಮಾಣಗೊಳ್ಳಲಿದೆ. ಇದರ ಜೊತೆಗೆ ನವೆಂಬರ್ 24  ರಂದು ತುಳಸಿವಿವಾಹದ ಜೊತೆಗೆ ಸರ್ವಾರ್ಥ ಸಿದ್ಧಿಯೋಗ ಹಾಗೂ ಅಮೃತ ಸಿದ್ಧಿ ಯೋಗ ಕೂಡ ರೂಪುಗೊಳ್ಳುತ್ತಿದೆ. ಈ ಎಲ್ಲಾ ಶುಭಯೋಗಗಳ ಕಾರಣ ಕೆಲ ರಾಶಿಗಳ ಜನರಿಗೆ ಬಂಪರ್ ಐಶ್ವರ್ಯಾ ಪ್ರಾಪ್ತಿಯಾಗಲಿದೆ. ಈ ಅಪರೂಪದ ಯೋಗದ ಪ್ರಭಾವ ದೀರ್ಘಕಾಲದವರೆಗೆ ಇರಲಿದೆ. ಬನ್ನಿ ಯಾವ ಅದೃಷ್ಟವಂತ ರಾಶಿಗಳ ಜನರಿಗೆ ಈ ಯೋಗಗಳು ಲಾಭ ತಂದು ಕೊಡಲಿವೆ ತಿಳಿದುಕೊಳ್ಳೋಣ ಬನ್ನಿ, 

2 /5

ಮೇಷ ರಾಶಿ: ದೇವಗುರು ಬೃಹಸ್ಪತಿ ಹಾಗೂ ಚಂದಿರನ ಮೈತ್ರಿ ನಿಮ್ಮ ರಾಶಿಯಲ್ಲಿಯೇ ರೂಪಗೊಳ್ಳುತಿರುವ ಕಾರಣ ನಿಮಗೆ ಗಜಕೇಸರಿ ಯೋಗ ಅತ್ಯಂತ ಶುಭಕರವಾಗಿರಲಿದೆ. 2024ರವೆರೆಗೆ ನಿಮ್ಮ ಮೇಲೆ ಶ್ರೀವಿಷ್ಣು ಹಾಗೂ ತಾಯಿ ಲಕ್ಷ್ಮಿಯ ಕೃಪೆ ಇರಲಿದ್ದು, ಸುಖ-ಸಮೃದ್ಧಿ, ಧನ-ಧಾನ್ಯದಲ್ಲಿ ಅಪಾರ ವೃದ್ಧಿಯಾಗಲಿದೆ. ಇದರ ಜೊತೆಗೆ ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದ ನಿಮ್ಮ ಕೆಲಸ ಕಾರ್ಯಗಳು ಮತ್ತೆ ಆರಂಭಗೊಳ್ಳಲಿವೆ. ಸಮಾಜದಲ್ಲಿ ಸ್ಥಾನ ಮಾನ, ಪ್ರತಿಷ್ಠೆ ಹೆಚ್ಚಾಗಲಿದೆ. ವಿದ್ಯಾರ್ಥಿಗಳಿಗೂ ಕೂಡ ಉತ್ತಮ ಫಲಿತಾಂಶಗಳು ಲಭಿಸಲಿವೆ. ಬಿಸ್ನೆಸ್ ನಲ್ಲಿ ಅಪಾರ ಯಶಸ್ಸಿನ ಜೊತೆಗೆ ಧನಲಾಭದ ಎಲ್ಲಾ ಸಂಕೇತಗಳು ಗೋಚರಿಸುತ್ತಿವೆ. ತಾಯಿ ಲಕ್ಷ್ಮಿ ಕೃಪೆಯಿಂದ ಆರ್ಥಿಕ ಸ್ಥಿತಿ ಸಾಕಷ್ಟು ಬಲಗೊಳ್ಳಲಿದೆ ಹಾಗೂ ಸಾಲಬಾಧೆಯಿಂದ ಮುಕ್ತಿ ಸಿಗಲಿದೆ. ಕುಟುಂಬದ ಜೊತೆಗೆ ಉತ್ತಮ ಕಾಲ ಕಳೆಯುವಿರಿ. 

3 /5

ಕರ್ಕ ರಾಶಿ: ಕರ್ಕ ರಾಶಿಯ ಜಾತಕದವರಿಗೆ ಗಜಕೇಸರಿ ಯೋಗ ಸಾಕಷ್ಟು ಖುಷಿಗಳನ್ನು ಹೊತ್ತು ತರಲಿದೆ. ನಿಮ್ಮ ಗೋಚರ ಜಾತಕದ ದಶಮ ಭಾವದಲ್ಲಿ ಗುರು ವಿರಾಜಮಾನನಾಗಿದ್ದಾನೆ. ಹೀಗಿರುವಾಗ ನಿಮ್ಮ ಮೇಲೆ ತಾಯಿ ಲಕ್ಷ್ಮಿಯ ವಿಶೇಷ ಕೃಪೆ ಇರಲಿದೆ. ಜೀವನದ ಪ್ರತಿಯೊಂದು ಸಮಸ್ಯೆ ನಿವಾರಣೆಯಾಗಲಿದೆ. ಮಕ್ಕಳ ಕಡೆಯಿಂದ ಸಂದಶದ ಸುದ್ದಿ ಸಿಗುವ ಸಾಧ್ಯತೆ ಇದೆ. ವಾಹನ ಸಂಪತ್ತು ಖರೀದಿಸುವ ನಿಮ್ಮ ಕನಸು ನನಸಾಗಲಿದೆ. ಕುಟುಂಬಸ್ಥರ ಜೊತೆಗೆ ಉತ್ತಮ ಕಾಲ ಕಳೆಯುವಿರಿ, ಹಿರಿಯರ ಬೆಂಬಲ ದಿಂದ ಬಿಸ್ನೆಸ್ ನಲ್ಲಿಯೂ ಕೂಡ ಉತ್ತಮ ಲಾಭ ಪಡೆದುಕೊಳ್ಳುವಲ್ಲಿ ನೀವು ಯಶಸ್ಸನ್ನು ಕಾಣುವಿರಿ.

4 /5

ಕುಂಭ ರಾಶಿ: ಗಜಕೇಸರಿ ಯೋಗ ನಿಮ್ಮ ಗೋಚರ ಜಾತಕದ ತೃತೀಯ ಭಾವದಲ್ಲಿ ರೂಪುಗೊಳ್ಳುತ್ತಿದೆ. ಹೀಗಿರುವಾಗ ಇದರಿಂದ ನಿಮಗೆ ವಿಶೇಷ ಲಾಭ ಸಿಗಲಿದೆ. ವೃತ್ತಿ ಜೀವನದಲ್ಲಿ ಹೊಸ ಎತ್ತರಕ್ಕೆ ಇದು ನಿಮ್ಮನ್ನು ತೆಗೆದುಕೊಂಡು ಹೋಗಲಿದೆ. ಆಧ್ಯಾತ್ಮದತ್ತ ನಿಮ್ಮ ಸದಭಿರುಚಿ ಹೆಚ್ಚಾಗಲಿದೆ. ಇದರಿಂದ ವರ್ಷ 2024 ರಲ್ಲಿ ನಿಮಗೆ ಲಾಭ ಸಿಗಲಿದೆ. ತಾಯಿ ಲಕ್ಷ್ಮಿ ಕೃಪೆಯಿಂದ ಧನ-ಧಾನ್ಯ ವೃದ್ಧಿಯಾಗಲಿದೆ. ಸಾಲಬಾಧೆಯಿಂದ ಮುಕ್ತಿ ಸಿಗಲಿದೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ಕೋರ್ಟ್-ಕಚೇರಿ ವ್ಯವಹಾರಗಳಲ್ಲಿ ಜಯ ನಿಮ್ಮದಾಗಲಿದೆ. ಕುಟುಂಬದಲ್ಲಿ ಸುಖ ಸೌಕರ್ಯಗಳು ಹೆಚ್ಚಾಗಲಿವೆ. ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ಸಿಗುವ ಅವಕಾಶ ನಿಮಗೆ ಸಿಗಲಿದೆ. 

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)