ಆರ್ಥಿಕ ಸಂಕಷ್ಟ, ಗ್ರಹದೋಷ ನಿವಾರಣೆಗೆ ತುಳಸಿ ಬೇರಿನ ಪರಿಹಾರಗಳು

Tulsi Upay: ಹಿಂದೂ ಧರ್ಮದಲ್ಲಿ ತುಳಸಿ ಸಸ್ಯಕ್ಕೆ ಪೂಜನೀಯ ಸ್ಥಾನಮಾನವನ್ನು ನೀಡಲಾಗಿದೆ. ತುಳಸಿ ಸಸ್ಯವನ್ನು ಸಂಪತ್ತಿನ ಅಧಿದೇವತೆ ಲಕ್ಷ್ಮಿಯ ಸ್ವರೂಪ ಎಂದು ನಂಬಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

ತುಳಸಿ: ಸನಾತನ ಧರ್ಮದ ನಂಬಿಕೆಗಳ ಪ್ರಕಾರ, ಯಾವ ಮನೆಯಲ್ಲಿ ನಿತ್ಯ ತುಳಸಿ ಸಸ್ಯವನ್ನು ಪೂಜಿಸಲಾಗುತ್ತದೆಯೋ ಅಂತಹ ಮನೆಯಲ್ಲಿ ಎಂದಿಗೂ ಸಹ ಸುಖ-ಸಂತೋಷ, ಸಂಪತ್ತಿಗೆ ಕೊರತೆಯೇ ಇರುವುದಿಲ್ಲ ಎನ್ನಲಾಗುತ್ತದೆ. 

2 /8

ತುಳಸಿ ಪರಿಹಾರ : ತುಳಸಿ ಎಲೆಗಳ ಪರಿಹಾರದ ಬಗ್ಗೆ ನೀವು ತಿಳಿದಿರಬಹುದು. ತುಳಸಿ ಎಲೆಗಳಂತೆ ತುಳಸಿ ಬೇರುಗಳ ಕೆಲವು ಪರಿಹಾರಗಳು ಕೂಡ ನೆಮ್ಮದಿನ ಜೀವನಕ್ಕೆ ದಾರಿ ದೀಪವಾಗಲಿದೆ.   

3 /8

ತುಳಸಿ ಬೇರು: ತುಳಸಿಯ ಬೇರಿಗೆ ಸಂಬಂಧಿಸಿದ ಪರಿಹಾರಗಳನ್ನು ಕೈಗೊಳ್ಳುವುದರಿಂದ ಅದು ದುರದೃಷ್ಟವನ್ನೂ ಸಹ ಅದೃಷ್ಟವನ್ನಾಗಿ ಪರಿವರ್ತಿಸುತ್ತದೆ ಎಂದು ಹೇಳಲಾಗುತ್ತದೆ.   

4 /8

ತುಳಸಿ ಬೇರಿನ ಪರಿಹಾರ: ಧಾರ್ಮಿಕ ನಂಬಿಕೆಗಳ ಪ್ರಕಾರ, ತುಳಸಿ ಬೇರಿಗೆ ಸಂಬಂಧಿಸಿದಂತೆ ಕೈಗೊಳ್ಳಲಾಗುವ ಕೆಲವು ಪರಿಹಾರಗಳು ಮನೆಯಲ್ಲಿ ಗ್ರಹ ದೋಷ ನಿವಾರಿಸಿ, ಪ್ರಗತಿಗೆ ಹಾದಿ ಮಾಡಿಕೊಡುತ್ತದೆ. ಮಾತ್ರವಲ್ಲ, ಆರ್ಥಿಕ ಮುಗ್ಗಟ್ಟಿನಿಂದಲೂ ಪರಿಹಾರವನ್ನು ನೀಡುತ್ತದೆ ಎಂದು ನಂಬಲಾಗಿದೆ. 

5 /8

ನಕಾರಾತ್ಮಕ ಶಕ್ತಿ ನಿವಾರಣೆ: ಮನೆಯಲ್ಲಿ ನಕಾರಾತ್ಮಕ ಶಕ್ತಿ ನಿವಾರಣೆಗಾಗಿ  ಏಕಾದಶಿಯ ದಿನ ಮುಸ್ಸಂಜೆಯಲ್ಲಿ ತುಳಸಿ ಬೇರಿನ ಉತ್ತರ ದಿಕ್ಕಿನಲ್ಲಿ ಬೆಲ್ಲದಲ್ಲಿ ತುಪ್ಪದ ದೀಪವನ್ನು ಬೆಳಗಿಸಿ. ಆದರೆ, ಈ ಸಂದರ್ಭದಲ್ಲಿ ತುಳಸಿ ಸಸ್ಯವನ್ನು ಸ್ಪರ್ಶಿಸಬಾರದು ಎಂಬುದನ್ನು ನೆನಪಿನಲ್ಲಿಡಿ. 

6 /8

ಗ್ರಹದೋಷ ನಿವಾರಣೆ: ನಿಮ್ಮ ಜಾತಕದಲ್ಲಿ ಗ್ರಹ ದೋಷವೇನಾದರೂ ಇದ್ದಲ್ಲಿ ತುಳಸಿ ಬೇರನ್ನುಕೆಂಪು ಬಟ್ಟೆಯಲ್ಲಿ ಕಟ್ಟಿ ನಿಮ್ಮ ಬಳಿ ಇಟ್ಟುಕೊಳ್ಳಿ, ಇದರಿಂದ ಗ್ರಹದೋಷ ನಿವಾರಣೆ ಆಗುತ್ತದೆ. 

7 /8

ಜೀವನದಲ್ಲಿ ಪ್ರಗತಿ: ನೀವು ಜೀವನದಲ್ಲಿ ಎದುರಾಗಿರುವ ಅಡೆತಡೆಗಳನ್ನು ನಿವಾರಿಸಿ ಪ್ರಗತಿ ಹೊಂದಲು ಬಯಸಿದರೆ ತುಳಸಿ ಬೇರನ್ನು ಪವಿತ್ರ ನೀರಿನಲ್ಲಿ ತೊಳೆದು ಕ್ರಮಬದ್ದವಾಗಿ ಪೂಜಿಸಿ, ಬಳಿಕ ಹಳದಿ ವಸ್ತ್ರದಲ್ಲಿ ಬೇರನ್ನು ಕಟ್ಟಿಡಿ. 

8 /8

ಜೀವನದಲ್ಲಿ ನೀವು ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿದ್ದರೆ ಪರಿಹಾರಕ್ಕಾಗಿ ತುಳಸಿ ಬೇರಿನಿಂದ ಬೆಳ್ಳಿಯ ತಾಯತವನ್ನು ಮಾಡಿಸಿ ಅದನ್ನು ಶುಕ್ರವಾರದಂದು ಧರಿಸಿ.  ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.