pregnant before marriage actress: ಬಾಲಿವುಡ್’ನಲ್ಲಿ ಇತ್ತೀಚಿನ ದಿನಗಳಲ್ಲಿ ಪಾಶ್ಚಿಮಾತ್ಯ ಶೈಲಿಯ ಅನುಕರಣೆ ಹೆಚ್ಚಾಗಿದೆ. ಸಿನಿಮಾ ಮಾತ್ರವಲ್ಲ ನಟ-ನಟಿಯ ವೈಯಕ್ತಿಕ ಜೀವನದಲ್ಲೂ ಇದರ ಪ್ರಭಾವ ಹೆಚ್ಚಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಸಾಮಾನ್ಯವಾಗಿ ಭಾರತದಲ್ಲಿ ಮದುವೆಗೆ ಮುಂಚೆ ಗರ್ಭಿಣಿಯಾದರೆ ಜನರು ನೋಡುವ ದೃಷ್ಟಿಕೋನವೇ ಬೇರೆಯದ್ದಾಗಿರುತ್ತದೆ, ಆದರೆ ವಿದೇಶಗಳಲ್ಲಿ ಇದು ಸಾಮಾನ್ಯ. ಇದೀಗ ಈ ವರದಿಯ ಮೂಲಕ ಮದುವೆಗೂ ಮುನ್ನ ತಾಯಿಯರಾದ ಖ್ಯಾತ ನಟಿಯರ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಕತ್ರಿನಾ ಕೈಫ್ ಅವರ ಸಹೋದರ ಸೆಬಾಸ್ಟಿಯನ್ ಲಾರೆಂಟ್ ಮೈಕೆಲ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಬೆನ್ನಲ್ಲೇ ಇಲಿಯಾನಾ ಡಿಕ್ರೂಜ್ ಮದುವೆಗೂ ಮುನ್ನ ಗರ್ಭಿಣಿಯಾಗಿದ್ದರು. ಇತ್ತೀಚಿಗೆ ಮುದ್ದಾದ ಮಗುವಿಗೆ ಜನ್ಮ ನೀಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದರು.
ರಣಬೀರ್ ಕಪೂರ್ ಅವರನ್ನು ಮದುವೆಯಾದ ಎರಡು ತಿಂಗಳ ಬಳಿಕ ಆಲಿಯಾ ಭಟ್ ತಾವು ಗರ್ಭಿಣಿ ಎಂದು ದೃಢಪಡಿಸಿದರು. ಹೀಗೆ ಹೇಳಿಕೊಂಡ 7 ತಿಂಗಳ ನಂತರ ಅವರು ತಮ್ಮ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.
ಬಾಲಿವುಡ್ ನಟಿ ನೇಹಾ ಧೂಪಿಯಾ ತನ್ನ ಮೊದಲ ಮಗುವನ್ನು 2018 ರಲ್ಲಿ ಸ್ವಾಗತಿಸಿದ್ದರು. ಅಂದಹಾಗೆ ಅವರು ತಮ್ಮ 'ನೋ ಫಿಲ್ಟರ್ ನೇಹಾ' ಶೋನಲ್ಲಿ ಮದುವೆಗೆ ಮುಂಚೆಯೇ ಗರ್ಭಿಣಿಯಾಗಿದ್ದರು ಎಂಬುದನ್ನು ಬಹಿರಂಗಪಡಿಸಿದ್ದರು.
ಸರ್ಬಿಯಾ ಮೂಲದ ಬಾಲಿವುಡ್ ನಟಿ ನತಾಶಾ ಸ್ಟಾಂಕೋವಿಕ್ ಅವರು ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರನ್ನು 2020 ರ ಜನವರಿಯಲ್ಲಿ ವಿವಾಹವಾದರು. ಇನ್ನು ಮದುವೆಯಾದ 7 ತಿಂಗಳಲ್ಲಿ ಅಂದರೆ ಜುಲೈ 2020 ರಲ್ಲಿ ತಮ್ಮ ಮುದ್ದಾದ ಮಗುವಿಗೆ ಜನ್ಮ ನೀಡಿದ್ದರು.
ಬಾಲಿವುಡ್ ನಟಿ ಕಲ್ಕಿ ಕೊಚ್ಲಿನ್, ಗೈ ಹರ್ಷ್ಬರ್ಗ್ ಅವರೊಂದಿಗೆ ರಿಲೇಶನ್’ಶಿಪ್’ನಲ್ಲಿ ಇರುವುದಾಗಿ ಹೇಳಿಕೊಂಡಿದ್ದಲ್ಲದೆ, ಮದುವೆಗೆ ಮುಂಚೆಯೇ ತಾನು ಗರ್ಭಿಣಿಯಾಗಿದ್ದೇನೆ ಎಂದು ಬಹಿರಂಗಪಡಿಸಿದರು.