Trigrahi Yog 2024: ಶೀಘ್ರದಲ್ಲೇ ಕುಂಭ ರಾಶಿಯಲ್ಲಿ ತ್ರಿಗ್ರಹಿ-ಬುಧಾದಿತ್ಯ ಯೋಗ, ಲಕ್ಷ್ಮಿ ಕೃಪೆಯಿಂದ ಈ ಜನರ ತಿಜೋರಿ ಧನ-ಕನಕದಿಂದ ತುಂಬಿ ತುಳುಕಲಿದೆ!

Trigrahi Yog 2024: ಶೀಘ್ರದಲ್ಲಿಯೇ ಶನಿಯ ರಾಶಿಯಾಗಿರುವ ಕುಂಭ ರಾಶಿಗೆ ಬುಧನ ಪ್ರವೇಶ ನೆರವೇರಲಿದೆ.  ಫೆಬ್ರವರಿ 20 ರಂದು, ಬುಧ ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆಯ ಮೂಲಕ ಪ್ರವೇಶಿಸಲಿದ್ದಾನೆ. ಜೊತೆಗೆ ಕುಂಭ ರಾಶಿಯಲ್ಲಿ ಶನಿ ಮತ್ತು ಸೂರ್ಯ ಕೂಡ ಇರಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಸೂರ್ಯ ಮತ್ತು ಬುಧ ಸೇರಿ ಬುಧಾದಿತ್ಯ ರಾಜಯೋಗವನ್ನು ರಚಿಸಲಿದ್ದಾರೆ. ಇದರ ಜೊತೆಗೆ  ಶನಿ ಮತ್ತು ಬುಧನ ಶುಭ ಕಾಕ ತಾಳೀಯ ಕೂಡ ರಚನೆಯಾಗುತ್ತಿದೆ. ಇದಲ್ಲದೆ  ಸೂರ್ಯ, ಬುಧ ಮತ್ತು ಶನಿಯ ತ್ರಿಗ್ರಹಿ ಯೋಗಾದ ಶುಭ ಕಾಕತಾಳೀಯ ಕೂಡ ನಿರ್ಮಾಣಗೊಳ್ಳುತ್ತಿದೆ. ಇದರಿಂದ 5 ರಾಶಿಗಳ ಜನರಿಗೆ ಭಾರಿ ಧಳಲಾಭ ಹಾಗೂ ಭಾಗ್ಯೋದಯ ಯೋಗ ರಚನೆಯಾಗುತ್ತಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,  (Spiritual News In Kannada)
 

Budhaditya Yog 2024: ಫೆಬ್ರವರಿ 20 ರಂದು ಬುಧ ಕುಂಭ ರಾಶಿಗೆ ಸಾಗಲಿದ್ದಾನೆ. ಹಾಗೆ ನೋಡಿದರೆ ಬುಧ ಶನಿಯ ರಾಶಿಗೆ ಅಸ್ತ ಭಾವದಲ್ಲಿ ಸಾಗುತ್ತಿದ್ದಾನೆ. ಈ ಸಂದರ್ಭದಲ್ಲಿ ಕುಂಭ ರಾಶಿಯಲ್ಲಿ ಸೂರ್ಯ ಮತ್ತು ಶನಿ ಈಗಾಗಲೇ ವಿರಾಜಮಾನನಾಗಿರಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಕುಂಭ ರಾಶಿಯಲ್ಲಿ  ಸೂರ್ಯ ಮತ್ತು ಬುಧರು ಒಟ್ಟಿಗೆ ಬುಧಾದಿತ್ಯ ಯೋಗವನ್ನು ರಚಿಸುತ್ತಿದ್ದಾರೆ ಮತ್ತು ಬುಧ ಮತ್ತು ಶನಿಯ ಶುಭ ಸಂಯೋಗ ಕೂಡ ಇರುತ್ತದೆ ಇರುತ್ತದೆ. ಗ್ರಹಗಳ ಈ ಚಲನೆಯ ನಡುವೆ ಅಲ್ಲಿ ತ್ರಿಗ್ರಹಿ ಯೋಗ ಕೂಡ ರಚನೆಯಾಗುತ್ತಿದೆ. ಕುಂಭ ರಾಶಿಯಲ್ಲಿ ಗ್ರಹಗಳ ಈ ಸ್ಥಿತಿಗತಿ ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಪ್ರಭಾವ ಬೀರಲಿದೆ. ಆದರೆ ವಿಶೇಷವಾಗಿ ಐದು ರಾಶಿಗಳ ಜನರು ಶಿಕ್ಷಣ, ವೃತ್ತಿ ಮತ್ತು ಕುಟುಂಬದ ವಿಷಯದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ಈ ತ್ರಿಗ್ರಹಿ-ಬುಧಾದಿತ್ಯ ಯೋಗದಿಂದ ಯಾವ 5 ರಾಶಿಯ ಜನರಿಗೆ ಅಪಾರ ಸಿರಿಸಂಪತ್ತು ಮತ್ತು ಭಾಗ್ಯೋದಯ ಯೋಗ ಪ್ರಾಪ್ತಿಯಾಗಲಿದೆ ತಿಳಿದುಕೊಳ್ಳೋಣ ಬನ್ನಿ (Spiritual News In Kannada)

 

ಇದನ್ನೂ ಓದಿ-Rahu Budh Yuti 2024: ಹದಿನೈದು ವರ್ಷಗಳ ಬಳಿಕ ರಾಹು-ಬುಧ ದೇವನ ಶುಭ ಕಾಕತಾಳೀಯ, ಈ ರಾಶಿಗಳ ಜನರ ಮೇಲೆ ಅಪಾರ ಧನ-ಸಂಪತ್ತಿನ ವೃಷ್ಟಿ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

Trigrahi Yog 2024: ಶೀಘ್ರದಲ್ಲಿಯೇ ಶನಿಯ ರಾಶಿಯಾಗಿರುವ ಕುಂಭ ರಾಶಿಗೆ ಬುಧನ ಪ್ರವೇಶ ನೆರವೇರಲಿದೆ.  ಫೆಬ್ರವರಿ 20 ರಂದು, ಬುಧ ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆಯ ಮೂಲಕ ಪ್ರವೇಶಿಸಲಿದ್ದಾನೆ. ಜೊತೆಗೆ ಕುಂಭ ರಾಶಿಯಲ್ಲಿ ಶನಿ ಮತ್ತು ಸೂರ್ಯ ಕೂಡ ಇರಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಸೂರ್ಯ ಮತ್ತು ಬುಧ ಸೇರಿ ಬುಧಾದಿತ್ಯ ರಾಜಯೋಗವನ್ನು ರಚಿಸಲಿದ್ದಾರೆ. ಇದರ ಜೊತೆಗೆ  ಶನಿ ಮತ್ತು ಬುಧನ ಶುಭ ಕಾಕ ತಾಳೀಯ ಕೂಡ ರಚನೆಯಾಗುತ್ತಿದೆ. ಇದಲ್ಲದೆ  ಸೂರ್ಯ, ಬುಧ ಮತ್ತು ಶನಿಯ ತ್ರಿಗ್ರಹಿ ಯೋಗಾದ ಶುಭ ಕಾಕತಾಳೀಯ ಕೂಡ ನಿರ್ಮಾಣಗೊಳ್ಳುತ್ತಿದೆ. ಇದರಿಂದ 5 ರಾಶಿಗಳ ಜನರಿಗೆ ಭಾರಿ ಧಳಲಾಭ ಹಾಗೂ ಭಾಗ್ಯೋದಯ ಯೋಗ ರಚನೆಯಾಗುತ್ತಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,  (Spiritual News In Kannada)  

2 /7

ಮೇಷ ರಾಶಿ: ಈ ಸಂಚಾರವು ಮೇಷ ರಾಶಿಯವರಿಗೆ ವೃತ್ತಿಜೀವನದ ದೃಷ್ಟಿಯಿಂದ ಒಂದು ವರದಾನ ಎಂದರೆ ತಪ್ಪಾಗಲಾರದು. ಈ ಅವಧಿಯಲ್ಲಿ, ಬುಧ, ಸೂರ್ಯ ಮತ್ತು ಶನಿ ಒಟ್ಟಿಗೆ ನಿಮಗೆ ಅಪಾರ ಪ್ರಯೋಜನಗಳನ್ನು ನೀಡಲಿದ್ದಾರೆ. ಈ ಅವಧಿಯಲ್ಲಿ ನೀವು ಸಾಕಷ್ಟು ಸಂತೋಷ ಮತ್ತು ತೃಪ್ತಿಯ ಜೀವನವನ್ನು ಕಂಡುಕೊಳ್ಳುವಿರಿ. ಅಲ್ಲದೆ, ಈ ಅವಧಿಯಲ್ಲಿ, ನಿಮ್ಮ ವೃತ್ತಿಜೀವನದಲ್ಲಿ ನೀವು ನಿಮಗೆ ಸಿಗುವ ಪ್ರಮೋಷನ್ ನಿಂದ ನೀವು ತುಂಬಾ ಸಂತೋಷವಾಗಿರುವಿರಿ. ಈ ಅವಧಿಯಲ್ಲಿ ನಿಮ್ಮ ಪೂರ್ವಜರ ಆಸ್ತಿಯಿಂದ ನೀವು ಹೆಚ್ಚಿನ ಲಾಭವನ್ನು ಪಡೆಯಬಹುದು. ಈ ಸಂಚಾರವು ಕುಟುಂಬದ ವಿಷಯಗಳಲ್ಲಿಯೂ ಸಹ ನಿಮ್ಮನ್ನು ಬೆಂಬಲಿಸುತ್ತದೆ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ತುಂಬಾ ಬಲವಾಗಿರುತ್ತದೆ. ಆರೋಗ್ಯದ ದೃಷ್ಟಿಯಿಂದಲೂ ಇದು ತುಂಬಾ ಉತ್ತಮವಾಗಿರುತ್ತದೆ. ಕೆಮ್ಮು ಮತ್ತು ನೆಗಡಿಯಂತಹ ಸಣ್ಣ ಕಾಯಿಲೆಗಳು ನಿಮ್ಮನ್ನು ಕಾಡಬಹುದು, ಇಲ್ಲದೆ ಹೋದರೆ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.  

3 /7

ವೃಷಭ ರಾಶಿ: ವೃಷಭ ರಾಶಿಯವರಿಗೆ ಇದು ಪ್ರಗತಿ ಮತ್ತು ಯಶಸ್ಸಿನ ಹಾದಿಯನ್ನು ಸುಗಮಗೊಳಿಸಲಿದೆ. ನಿಮ್ಮ ಆದಾಯದ ಮೂಲಗಳು ಸಹ ಹೆಚ್ಚಾಗಲಿವೆ. ನಿಮ್ಮ ಆರ್ಥಿಕ ಸ್ಥಿತಿಯ ಬಗ್ಗೆ ಹೇಳುವುದಾದರೆ, ನಿಮ್ಮ ಆದಾಯದ ಮೂಲಗಳು ತುಂಬಾ ಉತ್ತಮವಾಗಿರುತ್ತದೆ. ಸೂರ್ಯನ ಇಂದಿನ ಕುಂಭ ರಾಶಿ ಸಾಗಣೆ ಮತ್ತು ಇದರ ಜೊತೆಗೆ ಫೆಬ್ರುವರಿ 20 ರ ಬುಧನ ಸಾಗಣೆ ನಿಮಗೆ ಅಪಾರ ಪ್ರಗತಿ ಮತ್ತು ಯಶಸ್ಸನ್ನು ಕರುಣಿಸಲಿದೆ. ಅಲ್ಲದೆ, ಈ ಅವಧಿಯಲ್ಲಿ ನಿಮ್ಮ ಎಲ್ಲಾ ಆಸೆಗಳು ಈಡೇರಲಿವೆ. ಈ ಅವಧಿಯಲ್ಲಿ ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ತುಂಬಾ ಬಲವಾಗಿರುತ್ತದೆ. ನಿಮ್ಮಿಬ್ಬರ ನಡುವೆ ಉತ್ತಮ ಹೊಂದಾಣಿಕೆ ಇರಲಿದೆ.  

4 /7

ಮಿಥುನ ರಾಶಿ: ಮಿಥುನ ರಾಶಿಯವರಿಗೆ ಈ ತ್ರಿಗ್ರಹಿ ಹಾಗೂ ಬುಧಾದಿತ್ಯ ಯೋಗ ಅನುಕೂಲಕರವಾಗಿರುತ್ತದೆ. ಈ ಅವಧಿಯಲ್ಲಿ ನೀವು ದೂರದ ಪ್ರಯಾಣಕ್ಕೆ ಹೋಗಬೇಕಾಗಬಹುದು. ಈ ಪ್ರಯಾಣವು ನಿಮಗೆ ಅಪಾರ ಯಶಸ್ಸನ್ನು ತರಲಿದೆ. ಆರ್ಥಿಕ ಜೀವನದ ಬಗ್ಗೆ ಹೇಳುವುದಾದರೆ, ಈ ಅವಧಿಯಲ್ಲಿ ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲಿತಾಂಶಗಳನ್ನು ನೀವು ಪಡೆಯುವಿರಿ. ಈ ಅವಧಿಯಲ್ಲಿ ನಿಮ್ಮ ಸಂಗಾತಿಯೊಂದಿಗೆ ನೀವು ತುಂಬಾ ಸಂತೋಷವಾಗಿರುತ್ತೀರಿ. ಜೊತೆಗೆ ನಿಮ್ಮ ಆರೋಗ್ಯ ಕೂಡ ತುಂಬಾ ಚೆನ್ನಾಗಿರುತ್ತದೆ.  

5 /7

ಕರ್ಕ ರಾಶಿ: ಬುಧ, ಸೂರ್ಯ ಮತ್ತು ಶನಿ ಗ್ರಹಗಳು ಒಟ್ಟಾಗಿ ಕರ್ಕ ರಾಶಿಯವರಿಗೆ ಸಾಕಷ್ಟು ಪ್ರಯೋಜನಗಳನ್ನು ನೀಡಲಿವೆ.  ನೀವು ಪೂರ್ವಜರ ಆಸ್ತಿಯಿಂದ ಲಾಭವನ್ನು ಪಡೆಯುತ್ತೀರಿ. ಈ ಅವಧಿಯಲ್ಲಿ ನೀವು ಹಣವನ್ನು ಗಳಿಸಲು ಅನೇಕ ಉತ್ತಮ ಅವಕಾಶಗಳನ್ನು ಪಡೆಯಬಹುದು. ಈ ಅವಕಾಶಗಳು ನಿಮಗೆ ತೃಪ್ತಿಯನ್ನು ನೀಡುತ್ತದೆ. ಉದ್ಯಮಿಗಳಿಗೂ ಉತ್ತಮ ಲಾಭ ಸಿಗಲಿದೆ. ವ್ಯಾಪಾರಿಗಳು ಸಹ ತಮ್ಮ ಪ್ರತಿಸ್ಪರ್ಧಿಗಳಿಗೆ ಕಠಿಣ ಸ್ಪರ್ಧೆಯನ್ನು ನೀಡಲಿದ್ದಾರೆ. ಅಲ್ಲದೆ, ಈ ಅವಧಿಯಲ್ಲಿ ಪ್ರತಿ ಹಂತದಲ್ಲೂ ನಿಮ್ಮ ಸಂಗಾತಿಯಿಂದ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ.  

6 /7

ಧನು ರಾಶಿ: ಧನು ರಾಶಿಯವರಿಗೆ ಬುಧ ಸಂಕ್ರಮಣವು ಉತ್ತಮ ಲಾಭ ಮತ್ತು ಯಶಸ್ಸನ್ನು ನೀಡುತ್ತದೆ. ಉದ್ಯೋಗಸ್ಥರು ಕೆಲಸದ ಸ್ಥಳದಲ್ಲಿ ತಮ್ಮ ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಹಣಕಾಸಿನ ದೃಷ್ಟಿಕೋನದಿಂದ, ಈ ಸಾಗಣೆಯು ನಿಮಗೆ ತುಂಬಾ ಒಳ್ಳೆಯದು. ನೀವು ಉತ್ತಮ ಪ್ರಮಾಣದ ಲಾಭವನ್ನು ಪಡೆಯುತ್ತೀರಿ. ಈ ಅವಧಿಯಲ್ಲಿ, ನೀವು ಹಣವನ್ನು ಉಳಿಸುವಲ್ಲಿ ಸಾಕಷ್ಟು ಯಶಸ್ವಿಯಾಗುತ್ತೀರಿ. ಉದ್ಯೋಗಸ್ಥರು ಹೂಡಿಕೆಯ ಮೂಲಕ ಉತ್ತಮ ಲಾಭವನ್ನು ಪಡೆಯುತ್ತಾರೆ.  

7 /7

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)